Advertisement

ಈ ವ್ಯಕ್ತಿಯ ಬಳಿ 1800 ಕೋಟಿ ಮೌಲ್ಯದ ಬಿಟ್‌ಕಾಯಿನ್‌ ಇದೆ, ಆದರೆ ಪಾಸ್‌ವರ್ಡ್‌ ಇಲ್ಲ!

08:48 PM Jan 13, 2021 | Team Udayavani |

ವಾಷಿಂಗ್ಟನ್‌: ಬಿಟ್‌ಕಾಯಿನ್‌ ಜಗತ್ತಿನ ಮೇಲೆ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಅನೇಕರು ಬಿಟ್‌ಕಾಯಿನ್‌ ಎನ್ನುವುದು ಮೋಸದ ಪ್ರಪಂಚ ಎಂದರೆ, ಇನ್ನೂ ಅನೇಕರು, ತಾವು ಮೊದಲೇ ಬಿಟ್‌ಕಾಯಿನ್‌ ಖರೀದಿಸಬೇಕಿತ್ತು ಎಂದು ಪರಿತಪಿಸುತ್ತಾರೆ.

Advertisement

ಆದರೆ ಸ್ಟೀಫ‌ನ್‌ ಥಾಮಸ್‌ ಎನ್ನುವ ವ್ಯಕ್ತಿಯೊಬ್ಬರ ಸಮಸ್ಯೆಯೇ ಬೇರೆ. ಈ ವ್ಯಕ್ತಿಯ ಬಳಿ 1800 ಕೋಟಿ ಮೌಲ್ಯದ 7,002 ಬಿಟ್‌ ಕಾಯಿನ್‌ಗಳಿವೆ. ಆದರೆ ಅವುಗಳನ್ನು ಬಳಸುವ ಪಾಸ್ವರ್ಡ್‌ ಅನ್ನೇ ಕಳೆದುಕೊಂಡಿದ್ದಾರೆ!

ಅವರು ತಮ್ಮ ಪಾಸ್‌ವರ್ಡ್‌ ಅನ್ನು ಐರನ್‌ಕೀ ಎನ್ನುವ ಆ್ಯಪ್‌ನಲ್ಲಿ ಶೇಖರಿಸಿದ್ದರಂತೆ. ಈ ಆ್ಯಪ್‌ನಲ್ಲಿ 10 ಬಾರಿ ತಪ್ಪು ಪಾಸ್‌ ವರ್ಡ್‌ ನಮೂದಿಸಿದರೆ, ಅವರು ಶೇಖರಿಸಿರುವ ದಾಖಲೆಗಳು ತಾನಾಗಿಯೇ ಡಿಲೀಟ್‌ ಆಗುತ್ತವೆ. ಐರನ್‌ಕೀ ಪಾಸ್‌ವರ್ಡ್‌ ಮರೆತ ಥಾಮಸ್‌, ಈಗ ಈಗ ಬಿಟ್‌ಕಾಯಿನ್‌ನ ಪಾಸ್‌ವರ್ಡನ್ನೂ ಕಳೆದುಕೊಂಡಿದ್ದಾರೆ!

ಇದನ್ನೂ ಓದಿ:ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಸಹಜ : ಸಚಿವ ಜಗದೀಶ ಶೆಟ್ಟರ್

Advertisement

Udayavani is now on Telegram. Click here to join our channel and stay updated with the latest news.

Next