Advertisement

700ಕ್ಕೂ ಹೆಚ್ಚು ಬಾಲಕಿಯರ ಅಶ್ಲೀಲ ಚಿತ್ರಗಳನ್ನು ಪಡೆದು ಬೆದರಿಕೆ ಹಾಕುತ್ತಿದ್ದವನ ಬಂಧನ

04:38 PM Sep 10, 2020 | keerthan |

ಮುಂಬಯಿ: ಮಕ್ಕಳ ಅಶ್ಲೀಲ ಚಿತ್ರಣ, ಅಪ್ರಾಪ್ತ ಬಾಲಕಿಯರ ಇನ್ಸ್ಟಾಗ್ರಾಮ್‌ ಖಾತೆಗಳನ್ನು ಹ್ಯಾಕ್‌ ಮಾಡುವುದು ಮತ್ತು ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದಡಿ ಹನ್ನೆರಡನೇ ತರಗತಿಯ ವಿದ್ಯಾರ್ಥಿಯನ್ನು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಸೈಬರ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಬಾಲಕಿಯರಿಗೆ ತಮ್ಮ ನಗ್ನ ಮತ್ತು ಅರೆನಗ್ನ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವಂತೆ ಆರೋಪಿ ಒತ್ತಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಮೇಲೆ ಲೈಂಗಿಕ ಅಪರಾಧ ತಡೆಗಟ್ಟುವ (ಪೊಕ್ಸೋ) ಕಾಯ್ದೆಯಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯಿಂದ 700 ಕ್ಕೂ ಹೆಚ್ಚು ಬಾಲಕಿಯರ ಆಕ್ಷೇಪಾರ್ಹ ಫೋಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಯಾವುದೇ ಫೋಟೋ ಅಥವಾ ವೀಡಿಯೊವನ್ನು ಅಶ್ಲೀಲ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡಿದ್ದಾನೆಯೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಬೀಡಿ ತೆಗೆಯುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

ಸೆಪ್ಟೆಂಬರ್‌ 4 ರಂದು ಏಳು ಬಾಲಕಿಯರ ಪೋಷಕರಿಂದ ದೂರುಗಳು ಬಂದ ನಂತರ ತನಿಖೆ ಆರಂಭಿಸಿದ್ದೇವೆ ಎಂದು ಡಿಸಿಪಿ ರಶ್ಮಿ ಕರಂದಿಕರ್‌ ಹೇಳಿದ್ದಾರೆ. ಗುಜರಾತ್‌ ನಿವಾಸಿಯಾಗಿರುವ ಆರೋಪಿ ಅಲಾಜ್‌ ಜಮಾನಿ ಎಂಬಾತನನ್ನು ಗುಜರಾತ್‌ನಲ್ಲಿ ಬಂಧಿಸಿ ಮುಂಬಯಿಗೆ ಕರೆತರಲಾಯಿತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್‌ 12 ರವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಕರಂದಿಕರ್‌ ಹೇಳಿದ್ದಾರೆ.

Advertisement

ಹಲವಾರು ಬಾಲಕಿಯರ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಹ್ಯಾಕ್‌ ಮಾಡಿದ್ದಾಗಿ ಜಮಾನಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: ಕೋಟಿ ಮೌಲ್ಯದ 186 ಕೆ.ಜಿ.ಗಾಂಜಾ ವಶ ! ಜಿಲ್ಲೆಯಲ್ಲಿ ಅತೀ ಹೆಚ್ಚು ಗಾಂಜಾ ವಶ

ಆರೋಪಿಯು ಹುಡುಗಿಯರ ಹೆಸರನ್ನು ಬಳಸಿಕೊಂಡು 17 ನಕಲಿ ಇನ್‌ಸ್ಟಾಗ್ರಾಮ್‌ ಖಾತೆಗಳನ್ನು ನಿರ್ವಹಿಸುತ್ತಿದ್ದ ಎನ್ನಲಾಗಿದೆ. ವಶಪಡಿಸಿಕೊಂಡ ಮೊಬೈಲ್‌ ಫೋನ್‌ನ ದಾಖಲೆಗಳು ಕಳೆದ ಒಂದು ವರ್ಷದ ಮಾಹಿತಿಗಳನ್ನು ಬಹಿರಂಗಪಡಿಸಿದ್ದು, ಆರೋಪಿ 800 ಕ್ಕೂ ಹೆಚ್ಚು ಹುಡುಗಿಯರೊಂದಿಗೆ ಸಂವಹನ ನಡೆಸಿದ್ದು, 700 ಕ್ಕೂ ಹೆಚ್ಚಿನ ಫೋಟೋಗಳನ್ನು ಪಡೆದಿದ್ದ ಎನ್ನಲಾಗಿದೆ.

ನಾವು ಆರೋಪಿಯ ಮೂರು ಮೊಬೈಲ್‌ ಫೋನ್‌ಗಳಿಂದ ಸಂಗ್ರಹಣೆಯನ್ನು ಪರಿಶೀಲಿಸುತ್ತಿದ್ದೇವೆ. ಆತ ಅಪ್ರಾಪ್ತ ಬಾಲಕಿಯರನ್ನು ಗುರಿಯಾಗಿಸಿಕೊಂಡಿದ್ದ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆರೋಪಿ ಬಾಲಕಿಯರೊಂದಿಗೆ ಆರಂಭದಲ್ಲಿ ಸ್ನೇಹ ಬೆಳೆಸುತ್ತಾನೆ. ನಂತರ ಅವರ ಸಾಮಾಜಿಕ ಜಾಲತಾಣಗಳ ಖಾತೆಯ ಪಾಸ್‌ವರ್ಡ್‌ ಪಡೆದು ತಾನೇ ನಿರ್ವಹಿಸುತ್ತಾನೆ ಎಂದು ಪೊಲೀಸರು ಹೇಳಿದರು. ಕೆಲವು ಸಂದರ್ಭಗಳಲ್ಲಿ, ಅವನು ಬಾಲಕಿಯರಿಗೆ ಬೆದರಿಕೆ ಹಾಕಲು ಪ್ರದರ್ಶನ ಫೋಟೋಗಳನ್ನು ನಗ್ನ ಫೋಟೋದೊಂದಿಗೆ ಮಾರ್ಫ್‌ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next