Advertisement

ಪತ್ನಿಯ ಸಹೋದರಿಗೆ ಬೆದರಿಕೆ, ರೇಪ್‌: ಅತ್ಯಾಚಾರಿಗೆ 10 ವರ್ಷ ಜೈಲು

04:09 PM May 31, 2018 | udayavani editorial |

ಹೊಸದಿಲ್ಲಿ : ಪತ್ನಿಯ ಸಹೋದರಿಗೆ ಬೆದರಿಕೆ ಹಾಕಿ, ಅತ್ಯಾಚಾರ ಗೈದ ವ್ಯಕ್ತಿಗೆ ದಿಲ್ಲಿ ನ್ಯಾಯಾಲಯ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

Advertisement

ಆರೋಪಿಯ ವಿರುದ್ಧ ಆತನ ಕಿರುಕುಳದ ಮತ್ತು ಜೀವ ಬೆದರಿಕೆ ಒಡ್ಡಿದ ಕೃತ್ಯಕ್ಕಾಗಿ ನಾಲ್ಕು ಎಫ್ಐಆರ್‌ಗಳು ದಾಖಲಾಗಿದ್ದರೂ ಆತ ಸರಿದಾರಿಗೆ ಬಾರದಿದ್ದುದನ್ನು ಕೋರ್ಟ್‌ ಗಂಭೀರವಾಗಿ ಪರಿಗಣಿಸಿತು. 2015ರಲ್ಲಿ  ತನ್ನ ಮದುವೆಯಾದಂದಿನಿಂದಲೂ ಪತ್ನಿಯ ಸಹೋದರಿಯ ಬೆನ್ನಿಗೆ ಬಿದ್ದಿದ್ದ ಆತ ಆಕೆಯನ್ನು ಲೈಂಗಿಕವಾಗಿ ಪೀಡಿಸುತ್ತಿದ್ದ ಎಂಬ ಪ್ರಾಸಿಕ್ಯೂಶನ್‌ ವಾದವನ್ನು ಕೋರ್ಟ್‌ ಪುರಸ್ಕರಿಸಿತು.

ಅಂತೆಯೇ ಅತ್ಯಾಚಾರ ಆರೋಪಿಗೆ ಕೋರ್ಟ್‌ 10 ವರ್ಷಗಳ ಜೈಲು ಶಿಕ್ಷೆ ಮಾತ್ರವಲ್ಲದೆ  15,000 ರೂ. ದಂಡವನ್ನೂ ವಿಧಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next