ಮಹಾರಾಷ್ಟ್ರ: ಮಂಗಗಳ ಗುಂಪಿನ ನಡುವೆ ಸೆಲ್ಫಿ ತೆಗೆಯಲು ಹೋಗಿ, ಸುಮಾರು 500 ಅಡಿ ಆಳದ ಕಂದಕಕ್ಕೆ ಬಿದ್ದು ವ್ಯಕ್ತಿಯೊಬ್ಬರು ವಿಧಿವಶರಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪಂಜಾಬ್ ನಲ್ಲಿ ಡ್ರಗ್ಸ್ ದಂಧೆ; 31 ಕೆಜಿ ಮಾದಕ ವಸ್ತು ಸಹಿತ ಕಿಂಗ್ ಪಿನ್ ಗಳು ಅರೆಸ್ಟ್
ಇತ್ತೀಚೆಗೆ ಮಹಾರಾಷ್ಟ್ರದ ವರಾಂಧಾ ಘಾಟ್ ರಸ್ತೆ ಸಮೀಪ ಈ ಘಟನೆ ನಡೆದಿದೆ. 39 ವರ್ಷದ ಅಬ್ದುಲ್ ಶೇಕ್ ಎಂಬ ವ್ಯಕ್ತಿ ವರಾಂಧಾ ಘಾಟ್ ರಸ್ತೆಯಲ್ಲಿ ಮಂಗಗಳ ಗುಂಪಿನ ಜೊತೆ ಸೆಲ್ಫಿ ಕ್ಲಿಕ್ಲಿಸಿಕೊಳ್ಳಲು ಹೋದ ಸಂದರ್ಭದಲ್ಲಿ 500 ಅಡಿ ಆಳದ ಹೊಂಡಕ್ಕೆ ಬಿದ್ದು ದುರಂತ ಅಂತ್ಯ ಕಂಡಿರುವುದಾಗಿ ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
ಅಬ್ದುಲ್ ಶೇಕ್ ತಮ್ಮ ಕಾರಿನಲ್ಲಿ ಕೊಂಕಣ್ ಪ್ರದೇಶದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ವಾಘಾಜೈ ದೇವಸ್ಥಾನದ ಸಮೀಪ ಕಾರನ್ನು ನಿಲ್ಲಿಸಿದ್ದರು. ಅಲ್ಲಿ ಮಂಗಗಳ ಗುಂಪನ್ನು ನೋಡಿ ಸೆಲ್ಫಿ ತೆಗೆಯಲು ಪ್ರಯತ್ನಿಸಿದ್ದರು. ಆದರೆ ತಮ್ಮ ಹಿಂಬದಿಯ ಆಳವಾದ ಕಂದಕಕ್ಕೆ ಜಾರಿ ಬಿದ್ದು ಜೀವ ಕಳೆದುಕೊಂಡಿರುವುದಾಗಿ ಪೊಲೀಸ್ ಇನ್ಸ್ ಪೆಕ್ಟರ್ ವಿಠಲ್ ದಾಬ್ದೆ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ವಿಷಯ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯ ಸಹ್ಯಾದ್ರಿ ರಕ್ಷಣಾ ತಂಡದ ನೆರವಿನೊಂದಿಗೆ ಕಂದಕದಲ್ಲಿ ಬಿದ್ದಿದ್ದ ಶೇಕ್ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಶವವನ್ನು ಮನೆಯವರಿಗೆ ಒಪ್ಪಿಸಲಾಗಿತ್ತು ಎಂದು ವರದಿ ತಿಳಿಸಿದೆ.