Advertisement

Air India: ವಿಮಾನದಲ್ಲಿ ಪ್ರಯಾಣಿಕರ ಮುಂದೆಯೇ ಮಲ,ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ

11:43 AM Jun 27, 2023 | Team Udayavani |

ನವದೆಹಲಿ: ವಿಮಾನದಲ್ಲಿ ಪ್ರಯಾಣಿಕರಿದ್ದ ಸ್ಥಳದಲ್ಲೇ ಮಲ ಮತ್ತು ಮೂತ್ರ ವಿಸರ್ಜನೆ ಮಾಡಿ ದುರ್ವರ್ತನೆ ತೋರಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

Advertisement

ಮುಂಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಜೂ.24 ರಂದು ಎಐಸಿ 866 ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೀಟ್‌ ಸಂಖ್ಯೆ 17 ಎಫ್‌ನಲ್ಲಿ ಪ್ರಯಾಣಿಸುತ್ತಿದ್ದ ರಾಮ್ ಸಿಂಗ್, ವಿಮಾನದ 9 ನೇ ಸಾಲಿನಲ್ಲಿ ಮಲವಿಸರ್ಜನೆ, ಮೂತ್ರ ವಿಸರ್ಜನೆ ಮಾಡಿದ್ದಾರೆ. ಮತ್ತು ಅಲ್ಲೇ ಉಗುಳಿದ್ದಾರೆ. ಮೊದಲಿಗೆ ಸಿಬ್ಬಂದಿ ವ್ಯಕ್ತಿಯ ವರ್ತನೆಗೆ ಮೌಖಿಕವಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಆ ಬಳಿಕ ಅವರನ್ನು ಇತರ ಪ್ರಯಾಣಿಕರಿಂದ ಪ್ರತ್ಯೇಕವಾಗಿ ಕೂರಿಸಿದ್ದಾರೆ.

ಇದನ್ನೂ ಓದಿ: UP criminal: ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ನನ್ನು  ಎನ್‌ ಕೌಂಟರ್‌ ಮಾಡಿದ ಪೊಲೀಸರು

ಘಟನೆಯ ಬಗ್ಗೆ ಪೈಲಟ್-ಇನ್-ಕಮಾಂಡ್ ಅವರಿಗೆ ತಿಳಿಸಲಾಗಿದೆ. ಇತರ ಪ್ರಯಾಣಿಕರಿಗೆ ಈ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ. ವಿಮಾನ ಲ್ಯಾಂಡ್‌ ಆದ ಬಳಿಕ ಏರ್ ಇಂಡಿಯಾದ ಭದ್ರತಾ ಮುಖ್ಯಸ್ಥರು ಪ್ರಯಾಣಿಕರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಎಫ್‌ ಐಆರ್‌ ದಾಖಲಿಸಿದ್ದಾರೆ. ಆ ಬಳಿಕ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು) ಮತ್ತು 510 (ಕುಡಿತದಿಂದ ವ್ಯಕ್ತಿಯಿಂದ ಸಾರ್ವಜನಿಕವಾಗಿ ದುರ್ವರ್ತನೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಈ ಹಿಂದೆ ನವೆಂಬರ್ 26, 2022 ರಂದು, ಮದ್ಯದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ನ್ಯೂಯಾರ್ಕ್‌ನಿಂದ ದೆಹಲಿಗೆ ಹೋಗುವ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳಾ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next