ಮಹದೇವಪುರ: ಮ್ಯಾಟ್ರಿಮೋನಿ ಹಾಗೂ ಶಾದಿ.ಕಾಂ ನಲ್ಲಿ ಮದುವೆಯಾಗುತ್ತೇನೆಂದು ಅಮಾಯಕ ಯುವತಿಯರನ್ನು ನಂಬಿಸಿ ಲಕ್ಷ ಲಕ್ಷ ಹಣ ಪಡೆದು ವಂಚಿಸುತ್ತಿದ್ದವನನ್ನು ವೈಟ್ ಫೀಲ್ಡ್‌ನ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ನೈಜೀರಿಯಾ ಮೂಲದ ಬೈಟ್ ಬಿನ್ ಮುದುಬಾಸ್ (25) ಎಂದು ಗುರುತಿಸಲಾಗಿದೆ. ಬೈಟ್ ಬಿನ್ ಮುದುಬಾಸ್‌ನ ಸ್ನೇಹಿತ ಹಾಗೂ ವಂಚನೆಯ ಪ್ರಮುಖ ಆರೋಪಿ (ಮಾಸ್ಟರ್ ಪಿನ್)ಸ್ಪ್ರೈನ್ರಾಜ್ ಕಿಶೋರ್ ಮ್ಯಾಟ್ರಿಮೋನಿ, ಶಾದಿ.ಕಾಂನಲ್ಲಿ ಮಹಿಳೆಯರಿಗೆ ಪರಿಚಯವಾಗಿ ತನ್ನ ನಯವಾದ ಮಾತಿನಿಂದ ಮದುವೆಯಾಗುವುದಾಗಿ ನಂಬಿಸುತ್ತಿದ್ದ.
ಹಣ ವರ್ಗಾವಣೆ: ನಂತರ ತಾನು ಕನ್ಸ್‌ಟ್ರಕ್ಷನ್ ವ್ಯವಹಾರದ ನಿಮಿತ್ತ ಮಲೇಷಿಯಾಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ಬಂದ ನಂತರ ಮಾದುವೆಯಾಗುವುದಾಗಿ ಹೇಳಿದ್ದ. ಕನ್ಸ್‌ಟ್ರಕ್ಷನ್ ವಸ್ತುಗಳಿಗೆ 27 ಸಾವಿರ ಪಾವತಿಸಬೇಕೆಂದು ಮಹಿಳೆಗೆ ಹೇಳಿದ್ದನು. ಹಾಗೂ ಹಣವನ್ನು ಸ್ಕಾಟ್ಲೆಂಡ್ ನಲ್ಲಿರುವ ತನ್ನ ಬ್ಯಾಂಕ್ ಖಾತೆಯಿಂದ ಹಣ ಪಾವತಿಸುತ್ತೇನೆಂದು ಮೊದಲು ಹೇಳಿದ್ದು ನಂತರ ತನ್ನ ಸ್ಕಾಟ್ಲೆಂಡ್‌ನಲ್ಲಿರುವ ಬ್ಯಾಂಕ್ ಖಾತೆ ಸೆಕ್ಯೂರಿಟಿ ಕಾರಣಗಳಿಂದ ಬ್ಲಾಕ್ ಆಗಿದೆ ಎಂದು ನಂಬಿಸಿ ಮಹಿಳೆ ಖಾತೆಯಿಂದ ಒಟ್ಟು 24,50 ಲಕ್ಷ ರೂ.ಗಳನ್ನು ದೆಹಲಿಯಲ್ಲಿರುವ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದನು.
ಲಕ್ಷಾಂತರ ರೂ.ಮೋಸ: ಶಾದಿ.ಕಾಮ್, ಮ್ಯಾಟ್ರಿಮೋನಿ ಮತ್ತು ವಿದೇಶದಿಂದ ಗಿಫ್ಟ್ ಗಳನ್ನು ಕಳುಹಿಸುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವ್ಯಕ್ತಿಗಳನ್ನು ಸಂಪರ್ಕಿಸಿ. ತಾನು ನಿಮ್ಮನ್ನು ಮದುವೆಯಾಗುತ್ತೇನೆಂದು ನಂಬಿಸಿ ಅವರಿಂದ ವಿವಿಧ ಅಕೌಂಟ್‌ಗಳಿಗೆ ಲಕ್ಷಾಂತರ ರೂ.ಗಳನ್ನು ಪಡೆದು ಮೋಸ ಮಾಡಿದ್ದಾರೆ. ಇವರ ಮೊಬೈಲ್ ಮತ್ತು ಲ್ಯಾಪ್ ಟಾಪ್‌ಗ್ಳನ್ನು ಪರಿಶೀಲಿಸಿದಾಗ ಭಾರತದ ವಿವಿಧ ಬ್ಯಾಂಕ್‌ಗಳಲ್ಲಿ 38 ಮತ್ತು ವಿದೇಶಿ 28 ಬ್ಯಾಂಕ್‌ಗಳಲ್ಲಿ ಹಣ ವಹಿವಾಟಾಗಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದರು.
ಬಂಧಿತ ಆರೋಪಿ ಪೊಲೀಸ್ ಕಸ್ಟಡಿಗೆ: ಆರೋಪಿ ವೈಟ್ ಫೀಲ್ಡ್ ಸಿಇಎನ್ ಠಾಣೆಯ 10 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪ್ರಥಮ ತನಿಖಾ ಹಂತದಲ್ಲಿ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಬಂಧಿಸಿ ಕರೆತಂದರು : ಪ್ರಕರಣ ಬೆನ್ನತ್ತಿದ್ದ ಪೊಲೀಸರು ಪ್ರಕರಣದ ಆರೋಪಿಗಳು ದೆಹಲಿ ನಗರದ ಮೋಹನ್ ಗಾರ್ಡನ್ ಠಾಣಾ ಸರಹದ್ದಿನಲ್ಲಿ ಇರುವ ಖಚಿತ ಮಾಹಿತಿ ಪಡೆದು ಪ್ರಕರಣದ ಆರೋಪಿ ನಂ -2 ವಿಪಿನ್ ಗಾರ್ಡನ್ ಎಕ್ಸ್‌ಟೆನ್ಷನ್ ಉತ್ತಮ ನಗರದಲ್ಲಿ ಬೈಟ್ ಬಿನ್ ಮದು ಬಾಸ್‌ನನ್ನು ಬಂಧಿಸಿದ್ದಾರೆ. ಆರೋಪಿ ಆನ್‌ಲೈನ್ ಪ್ರಕರಣಗಳಿಗೆ ಬಳಸುವ 4 ವಿವಿಧ ಕಂಪನಿಯ ಲ್ಯಾಪ್‌ಟಾಪ್ ಮತ್ತು 10 ಮೊಬೈಲ್, ಆರೋಪಿಯ ವಿವಿಧ ಬ್ಯಾಂಕ್ ಅಕೌಂಟ್‌ಗಳಿಂದ ಸುಮಾರು 8.50 ಲಕ್ಷ ರೂ.ವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಬೆಂಗಳೂರಿನಲ್ಲಿರುವ ಈತನ ಸಹಚರರಾದ ಇಮಾನುವುಲ್ಲಾ ಹೊಸಮಾ ಅನ್ ಮ್ಯಾಡಿ,ಜಾನ್ ಅಲೆಕ್ಸ್,ದೇವಾನಿ ಮಧುಕಾಶಿ, ಇಜಿಜು ಮಧುಕಾಶಿ, ಮಾರಿಯಾ ಇಮಾವುಲ್ ಮಧುಕಾಶಿ ಹೆಸರು ತಿಳಿಸಿದ್ದಾನೆ.