Advertisement

ಪತ್ನಿ ನೋಡಲು ಎರಡು ಸಾವಿರ ಕಿ.ಮೀ. ರ‍್ಯಾಫ್ಟಿಂಗ್!

12:48 AM Mar 26, 2022 | Team Udayavani |

ಬ್ಯಾಂಕಾಕ್‌: ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಪತ್ನಿಯನ್ನು ನೋಡಲೆಂದು ವಿಯೇಟ್ನಾಮ್‌ ಮೂಲದ ಪತಿ ಥಾಯ್ಲೆಂಡ್‌ನ‌ ಫುಕೇತ್ ನಿಂದ 2000 ಕಿ.ಮೀ ದೂರವನ್ನು ರ‍್ಯಾಫ್ಟಿಂಗ್ ನಲ್ಲೇ (ಹಾಯಿದೋಣಿಯಲ್ಲಿ ಪಯಣ) ಚಲಿಸಲು ಪ್ರಯತ್ನಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.

Advertisement

37 ವರ್ಷದ ಹೊ ಹೋಂಗ್‌ ಹಂಗ್‌ನ ಪತ್ನಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ವಿಯೇಟ್ನಾಮ್‌ನಲ್ಲಿರುವ ಅವನಿಗೆ ಕೊರೊನಾ ಬಂದಾಗಿನಿಂದ ಆಕೆಯನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗಿಲ್ಲ. ಈಗ ಹೇಗಾದರೂ ಆಕೆಯನ್ನು ಭೇಟಿ ಆಗಲೇಬೇಕೆಂದು ನಿರ್ಧರಿಸಿದ ಆತ ಥೈಲ್ಯಾಂಡ್‌ನ‌ ಬ್ಯಾಂಕಾಕ್‌ಗೆ ವಿಮಾನದಲ್ಲಿ ಬಂದಿದ್ದಾನೆ.

ಆದರೆ ಅಲ್ಲಿಂದ ವಾಯುಮಾರ್ಗವಾಗಿ ಭಾರತಕ್ಕೆ ಬರುವುದಕ್ಕೆ ಸಾಧ್ಯವಾಗಿಲ್ಲ. ಆ ಹಿನ್ನೆಲೆ, ಫುಕೇತ್ ನಿಂದ ರ‍್ಯಾಫ್ಟಿಂಗ್ ಆರಂಭಿಸಿದ್ದಾನೆ.

ಇದನ್ನೂ ಓದಿ:ದೇಶದ ಖ್ಯಾತ ಗಾಯಕ ಸೋನು ನಿಗಮ್‌ಗೆ ಬೆದರಿಕೆ: ಕ್ರಮಕ್ಕೆ ಆಗ್ರಹ

ಊಟ-ತಿಂಡಿ, ಜಿಪಿಎಸ್‌, ಭೂ ನಕ್ಷೆ ಏನೂ ಇಲ್ಲದೆಯೇ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾನೆ. ಆದರೆ ಆತ ಕೆಲವೇ ದೂರ ಹೋಗುವಷ್ಟರಲ್ಲಿ ಥೈಲ್ಯಾಂಡ್‌ನ‌ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next