Advertisement

ಹೇರ್‌ಸ್ಟೈಲ್‌ನಿಂದಾಗಿ ಕಿಮ್‌ ಜಾಂಗ್‌ ಉನ್‌ನಂತಾದ!

07:26 PM Sep 13, 2021 | Team Udayavani |

ಉತ್ತರ ಕೋರಿಯಾದ ಸುಪ್ರೀಂ ನಾಯಕ ಕಿಮ್‌ ಜಾಂಗ್‌ ಉನ್‌ ಯಾರಿಗೆ ತಾನೇ ಗೊತ್ತಿಲ್ಲ. ಕಿಮ್‌ ಜಾಂಗ್‌ ಉನ್‌ನಂತೆಯೇ ಕಾಣುವ ವ್ಯಕ್ತಿಸೆಲೂನ್‌ ಒಂದಕ್ಕೆ ತೆರಳಿ ಅಲ್ಲಿ, ನನಗೆ ಬೇರಾವ ಸ್ಟೈಲ್‌ ಬೇಡ, ಕಿಮ್‌ ಜಾಂಗ್‌ ತರ ಮಾಡಿಬಿಡಿ ಎಂದು ಹೇಳಿದ್ದಾರೆ.

Advertisement

ಅದರಂತೆಯೇ ಕ್ಷೌರಿಕ ಕೂದಲು ಕತ್ತರಿಸಿದ್ದಾರೆ.  ತನ್ನನ್ನು ತಾನು ಕಿಮ್‌ ರೀತಿ ನೋಡುವ ವಿಡಿಯೋವನ್ನು ಆ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ  ವ್ಯಕ್ತಿ ಹಾಗೂ ಕ್ಷೌರಿಕ ಇಬ್ಬರೂ ಕನ್ನಡಿ ನೋಡಿಕೊಂಡು ಜೋರಾಗಿ ನಗುತ್ತಿದ್ದಾರೆ. ಲಕ್ಷಾಂತರ ಮಂದಿ ಈ ವಿಡಿಯೋ ನೋಡಿದ್ದು, ಲೈಕ್‌ ನೀಡಿದ್ದಾರೆ. ಕಿಮ್‌ ರೀತಿ ಉಡುಗೆ ತೊಟ್ಟು ಉ.ಕೋರಿಯಾಕ್ಕೆ ಹೋದರೆ ಅಲ್ಲಿರುವವರಿಗೆ ಗೊಂದಲವಾಗುವುದು ಗ್ಯಾರಂಟಿ ಎಂದು ಕಾಮೆಂಟ್‌ಗಳು ಬರಲಾರಂಭಿಸಿವೆ.

 

 

Advertisement

Udayavani is now on Telegram. Click here to join our channel and stay updated with the latest news.

Next