ನವದೆಹಲಿ: ದೆಹಲಿಯ ಅರ್ಚನಾ ರೆಡ್ ಲೈಟ್ ಗ್ರೇಟರ್ ಕೈಲಾಶ್ -1 ಸಮೀಪ ಸೇನಾ ಅಧಿಕಾರಿಯಂತೆ ಸಮವಸ್ತ್ರ ಧರಿಸಿದ್ದ 40 ವರ್ಷದ ವ್ಯಕ್ತಿಯನ್ನು ಶನಿವಾರ(ಜೂನ್ 19) ಬಂಧಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕೃಷ್ಣಾ ನದಿ ನೀರು ಹಂಚಿಕೆ ವಿವಾದ: ಕರ್ನಾಟಕ ಮತ್ತು ಮಹಾರಾಷ್ಟ್ರ ಜಂಟಿ ಕಾನೂನು ಹೋರಾಟ
ಆರೋಪಿಯನ್ನು ನವದೆಹಲಿಯ ಮೋಹನ್ ಗಾರ್ಡನ್ ನಿವಾಸಿ ದಿಲೀಪ್ ಕುಮಾರ್ (40ವರ್ಷ) ಎಂದು ಗುರುತಿಸಲಾಗಿದೆ. ಗುಪ್ತ ಮಾಹಿತಿ ಮೇರೆಗೆ ಪೊಲೀಸ್ ತಂಡ ಅರ್ಚನಾ ರೆಡ್ ಲೈಟ್ ಬಳಿ ನಿಯೋಜಿಸಲಾಗಿದ್ದು, ಸೇನಾ ಸಮವಸ್ತ್ರದಲ್ಲಿದ್ದ ಆರೋಪಿಯನ್ನು ಬಂಧಿಸಲಾಯಿತು ಎಂದು ವರದಿ ತಿಳಿಸಿದೆ.
ಪೊಲೀಸರು ಆರೋಪಿ ಬಳಿ ಇದ್ದ ದಿಲೀಪ್ ಕುಮಾರ್ ಹೆಸರಿನಲ್ಲಿದ್ದ ನಕಲಿ ಸೇನಾ ಗುರುತು ಕಾರ್ಡ್ ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರನ್ನು ಆಕರ್ಷಿಸುವ ನಿಟ್ಟಿನಲ್ಲಿ ತಾನು ಭಾರತೀಯ ಸೇನೆಯ ಕ್ಯಾಪ್ಟನ್ ಶೇಖರ್ ರೀತಿ ಫೋಸ್ ಕೊಟ್ಟಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿರುವುದಾಗಿ ವರದಿ ವಿವರಿಸಿದೆ. ಈತ ಕೆಲವು ವಿದೇಶಿ ಪ್ರಜೆಗಳಗೊಂದಿಗೆ ವಾಟ್ಸಪ್ ಚಾಟ್ ಮಾಡಿದ್ದು, ಅವರೊಂದಿಗೆ ಕೆಲವು ವಿಡಿಯೋಗಳನ್ನು ಹಂಚಿಕೊಂಡಿರುವುದಾಗಿ ಆರೋಪಿ ಬಹಿರಂಗಪಡಿಸಿರುವುದಾಗಿ ವರದಿ ತಿಳಿಸಿದೆ.