Advertisement

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

03:32 PM Nov 28, 2024 | Team Udayavani |

ಬೆಳಗಾವಿ: ಸಿಪಿಐ ಕಿರುಕುಳ ನೀಡಿದ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ರಕ್ಷಣೆ ಮಾಡಲಾಗಿದೆ. ಉದ್ಯಮಭಾಗ ಪೊಲೀಸ್ ಠಾಣೆ ಸಿಪಿಐ ಧರೆಗೌಡ ಪಾಟೀಲ ವಿರುದ್ಧ ಕಿರುಕುಳ ಆರೋಪ ಮಾಡಲಾಗಿದೆ.

Advertisement

ಪೇದೆ ವಿಠ್ಠಲ ಮುನ್ನಾಳ ಎಂಬವರು ಐದು ಪುಟಗಳ ಪತ್ರ ಬರೆದು ಆತ್ಮಹತ್ಯೆಗೆ ಯತ್ನಿಸಿದ್ದರು. ರಜೆ ಹಂಚಿಕೆ ವಿಚಾರದಲ್ಲಿ ಸಿಪಿಐ ಧರೇಗೌಡ ಪಾಟೀಲ ತಾರತಮ್ಯ ಮಾಡುತ್ತಿದ್ದಾರೆ. ಕರ್ತವ್ಯದಲ್ಲಿದ್ದರೂ ಗೈರು ಹಾಜರಾತಿ ಎಂದು ತೋರಿಸಿ ಪುಸ್ತಕದಲ್ಲಿ ಬರೆಸುತ್ತಾರೆ. ಠಾಣೆಯಲ್ಲಿ ವಿಪರೀತ ಜಾತೀಯತೆ ಮಾಡುವುದು, ಮಹಿಳಾ ಸಿಬ್ಬಂದಿಗೆ ನಿಂದಿಸುವುದು, ಕಾರ್ಯಾಂಗದ ಅಧಿಕಾರಿ ಎಂಬುದುನ್ನು ಮರೆತು ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದಾರೆ. ಹಫ್ತಾ ವಸೂಲಿ ಮಾಡಿಕೊಡುವ ಸಿಬ್ಬಂದಿಗೆ ನೈಟ್ ಡ್ಯೂಟಿ ಹಾಕಲ್ಲ ಎಂದು ಪತ್ರದಲ್ಲಿ ವಿಠ್ಠಲ ಉಲ್ಲೇಖಿಸಿದ್ದಾರೆ.

ಸದ್ಯ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡ್ತಿರುವ ವಿಠ್ಠಲ ಆತ್ಮಹತ್ಯೆ ಯತ್ನಕ್ಕೂ ಮುನ್ನ ಕೈ ಬರಹದಲ್ಲಿ ಐದು ಪುಟಗಳ ಪತ್ರಬರೆದಿದ್ದರು.

ಕರ್ತವ್ಯ ಸರದಿ ಪುಸ್ತಕ ಪ್ರತಿ, ವಿವಿಧ ಆದೇಶ ಪ್ರತಿಗಳ ಸಮೇತ ಪತ್ರವನ್ನು ಹಿರಿಯ ಅಧಿಕಾರಿಗಳಿಗೆ ರವಾನೆ ಮಾಡಲಾಗಿದೆ. ಡಿಜಿಐಜಿಪಿ, ಬೆಳಗಾವಿ ನಗರ ಪೊಲೀಸ್ ಆಯುಕ್ತ, ಖಡೇಬಜಾರ್ ಎಸಿಪಿ, ಗೃಹಮಂತ್ರಿ ಡಾ. ಜಿ. ಪರಮೇಶ್ವರ ಕಚೇರಿ, ಮಾನವಹಕ್ಕುಗಳ ಆಯೋಗ, ಪೊಲೀಸ್ ದೂರುಗಳ ಪ್ರಾಧಿಕಾರ ಎಸ್‌ಸಿಎಸ್‌ಟಿ ಪ್ರಾಧಿಕಾರ ಘಟಕಕ್ಕೆ ಪತ್ರ ರವಾನೆ ಮಾಡಿದ್ದಾರೆ.

ಪತ್ರದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮನೆಗೆ ತೆರಳಿ ಪೇದೆ ವಿಠ್ಠಲ ರಕ್ಷಣೆ ನೀಡಲಾಗಿದೆ. ಪೇದೆ ವಿಠ್ಠಲ ಮುನ್ಯಾಳ ಸದ್ಯ ಗೌಪ್ಯ ಸ್ಥಳದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next