Advertisement

ಆರೆಸ್ಸೆಸ್‌ ಕಾರ್ಯಕ್ರಮಕ್ಕೆ ಮಮತಾ, ನಿತೀಶ್‌ಗೆ ಆಹ್ವಾನ?

09:49 AM Sep 13, 2018 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ವಿರುದ್ಧ ಇತ್ತೀಚಿನ ದಿನಗಳಲ್ಲಿ ಟೀಕಾ ಪ್ರಹಾರ ಹೆಚ್ಚುತ್ತಿರುವಂತೆಯೇ ಸೆ.17-19ರ ವರೆಗೆ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮಕ್ಕೆ ಪ್ರತಿಪಕ್ಷಗಳ ನಾಯಕರಿಗೆ ಆಹ್ವಾನ ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಪಾಕಿಸ್ಥಾನ ಹೊರತುಪಡಿಸಿ 60 ರಾಷ್ಟ್ರಗಳ ಸರಕಾರಿ ಮುಖ್ಯಸ್ಥರಿಗೂ ಆಮಂತ್ರಣ ಕಳುಹಿಸಲು ತೀರ್ಮಾನಿಸಿದೆ. ‘ಆರ್‌ಎಸ್‌ ಎಸ್‌ ದೃಷ್ಟಿಕೋನದಲ್ಲಿ ಭಾರತದ ಭವಿಷ್ಯ’ ಎಂಬ ವಿಚಾರದ ಮೇಲೆ ಸಂಘಟನೆ ಮುಖ್ಯಸ್ಥ ಮೋಹನ್‌ ಭಾಗವತ್‌ ಹೊಸದಿಲ್ಲಿಯಲ್ಲಿ ಉಪನ್ಯಾಸ ನೀಡ ಲಿದ್ದಾರೆ. ಸಂಭಾವ್ಯರ ಪಟ್ಟಿಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರನ್ನು 2ನೇ ಬಾರಿಗೆ ಆಹ್ವಾನ ನೀಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ. 

Advertisement

ಉಳಿದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್‌ ಕುಮಾರ್‌, ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌, ಎನ್‌ಸಿಪಿ ನಾಯಕ ಶರದ್‌ ಪವಾರ್‌, ಕೇಂದ್ರದ ಮಾಜಿ ಸಚಿವ ಶಶಿ ತರೂರ್‌, ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ರಾಜ್ಯಸಭಾ ಸದಸ್ಯ ಅಮರ್‌ ಸಿಂಗ್‌, ಮಾಜಿ ಸಿಎಂ ಅಖಿಲೇಶ್‌ ಯಾದವ್‌, ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರಿಗೆ ಕೂಡ ಆಹ್ವಾನ ನೀಡಲು ತೀರ್ಮಾನಿಸಲಾಗಿದೆ.

ಶೀಘ್ರ ನಿರ್ಧಾರ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರಿಗೆ ಅಧಿಕೃತ ಆಹ್ವಾನ ನೀಡುವ ಬಗ್ಗೆ ಶೀಘ್ರವೇ ತೀರ್ಮಾನಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಆಹ್ವಾನ ತಿರಸ್ಕರಿಸುವಂತೆ ರಾಹುಲ್‌ಗೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಇತ್ತೀಚೆಗೆ ಸಲಹೆ ಮಾಡಿತ್ತು. 

60 ರಾಷ್ಟ್ರಗಳಿಗೆ ಆಮಂತ್ರಣ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಪಾಕಿಸ್ಥಾನ ಹೊರತುಪಡಿಸಿ 60 ರಾಷ್ಟ್ರಗಳ ಸರಕಾರಿ ಮುಖ್ಯಸ್ಥರಿಗೂ ಆಹ್ವಾನ ರವಾನಿಸಲಾಗಿದೆ. ಚೀನಕ್ಕೂ ಆಹ್ವಾನ ನೀಡುವ ಸಾಧ್ಯತೆ ಇದೆ. ಸಿನಿಮಾ, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳ 500 ಗಣ್ಯರಿಗೆ ಸಂಘಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ಕಳುಹಿಸಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next