Advertisement

ಮಮತಾ ಕುಲಕರ್ಣಿ ಪತಿ,ಡ್ರಗ್‌ ಮಾಫಿಯಾದ ವಿಕ್ಕಿ ಅಮೆರಿಕ ವಶಕ್ಕೆ 

11:09 AM Feb 02, 2017 | Team Udayavani |

ನೈರೋಬಿ : ಮಾಜಿ ನಟಿ, ದೇವ ಮಾನವಿಯಾಗಿ ಬದಲಾಗಿರುವ ಮಮತಾ ಕುಲಕರ್ಣಿ ಪತಿ ಡ್ರಗ್‌ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದ ವಿಕ್ಕಿ ಗೋಸ್ವಾಮಿಯನ್ನು ಅಮೆರಿಕದ ಮಾದಕ ದ್ರವ್ಯ ವಿಮೋಚನಾ ಸಂಸ್ಥೆ ಅಧಿಕಾರಿಗಳು ಕೀನ್ಯಾದಿಂದ ಭಾನುವಾರ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. 

Advertisement

ಮಿಡ್‌ ಡೇ ಯಲ್ಲಿ ವರದಿಯಾದಂತೆ ಕೀನ್ಯಾದ ಅಧಿಕಾರಿಗಳು ಡ್ರಗ್‌ ಮಾಫಿಯಾದಲ್ಲಿ ತೊಡಗಿಸಿಕೊಂಡು ಅಮೆರಿಕಕ್ಕೆ ಡ್ರಗ್‌ ಕಳ್ಳಸಾಗಾಣಿಕೆ ಮಾಡುತ್ತಿದ್ದ ವಿಕ್ಕಿ ಸೇರಿ ಮೂವರನ್ನು ಅಮೆರಿಕ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಮೂವರನ್ನು ಕೀನ್ಯಾ ಪೊಲೀಸರು 2 ವರ್ಷಗಳ ಹಿಂದೆ ಬಂಧಿಸಿ ಜೈಲಿನಲ್ಲಿಟ್ಟಿದ್ದರು. 

ವಿಕ್ಕಿ , ಪಾಕ್‌ ಮೂಲದ ಗುಲಾಂ ಹುಸೇನ್‌ ಮತ್ತು ಕೇನ್ಯಾದ ಸಹೋದರರಾದ ಬಕ್ತಾಶ್‌ ಮತ್ತು ಇಬ್ರಾಹಿಂ ಅಕಾಶ ಅವರನ್ನು ಅಮೆರಿಕದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೂವರು ಅಮೆರಿಕಕ್ಕೆ ಡ್ರಗ್ಸ್‌ ಕಳ್ಳಸಾಗಾಣಿಕೆ ನಡೆಸುತ್ತಿದ್ದು ಕೀಲೋದಷ್ಟು ಹೆರಾಯಿನ್‌ಗೆ 10000 ಅಮೆರಿಕನ್‌ ಡಾಲರ್‌ ಹಣ ಪಡೆಯುತ್ತಿದ್ದರು ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next