Advertisement

ನಂದಿಗ್ರಾಮದಲ್ಲಿ ಗೆಲುವಿನ ನಗೆ ಬೀರಿದ ದೀದಿ: ಸುವೇಂದು ಅಧಿಕಾರಿ ವಿರುದ್ಧ ಅಲ್ಪ ಅಂತರದ ಜಯ

04:38 PM May 02, 2021 | Team Udayavani |

ಕೋಲ್ಕತ್ತಾ: ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದ್ದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೆಲುವಿನ ನಗೆ ಬೀರಿದ್ದಾರೆ.

Advertisement

ತೀವ್ರ ಜಿದ್ದಾಜಿದ್ದಿನಿಂದ ನಡೆದ ಚುನಾವಣೆಯಲ್ಲಿ ಬಂಗಾಳದ ದೀದಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ 1200 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಇದನ್ನೂ ಓದಿ:ಕೊನೆಗೂ ನನಸಾಯಿತು ‘ಮೇಷ್ಟ್ರು’ ಕನಸು : ಇಂದು ಶರಣು ಸಲಗರ ಶಾಸಕ

ಮಮತಾ ಬ್ಯಾನರ್ಜಿ ಅವರಿಗೆ ಸೋಲಿನ ರುಚಿ ತೋರಿಸಲು ಬಿಜೆಪಿ ಸತತ ಪ್ರಯತ್ನ ಮಾಡಿತ್ತು. ದೀದಿಯ ಆಪ್ತರಾಗಿದ್ದ ಸುವೇಂದು ಅಧಿಕಾರಿಯನ್ನು ಕಮಲ ಪಾಳಯಕ್ಕೆ ಸೆಳೆದು, ಮಮತಾ ವಿರುದ್ಧವೇ ಟಿಕೆಟ್ ನೀಡಿತ್ತು. ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ಘಟಾನುಘಟಿ ನಾಯಕರು ಪಶ್ಚಿಮ ಬಂಗಾಳದಲ್ಲಿ ಸತತ ರಾಲಿಗಳನ್ನು ನಡೆಸಿದ್ದರು. ಆದರೆ ಕೊನೆಗೂ ಮಮತಾ ಬ್ಯಾನರ್ಜಿ ತನ್ನ ಶಕ್ತಿ ಏನೆಂದು ಈ ಫಲಿತಾಂಶದ ಮೂಲಕ ತೋರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next