Advertisement

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

07:33 PM Dec 02, 2021 | Team Udayavani |

ನವದೆಹಲಿ/ಕೋಲ್ಕತಾ: “ಯುಪಿಎ ಎಲ್ಲಿದೆ’ ಎಂದು ಮುಂಬೈನಲ್ಲಿ ಬುಧವಾರ ಪ್ರಶ್ನೆ ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆ ಗುರುವಾರ ರಾಜಕೀಯದಲ್ಲಿ ವಿವಾದದ ತರಂಗಗಳು ಏಳುವಂತೆ ಮಾಡಿದೆ.

Advertisement

ಕಾಂಗ್ರೆಸ್‌ ಮುಖಂಡರು ಅದಕ್ಕೆ ತೀವ್ರವಾದ ಆಕ್ಷೇಪವನ್ನೂ ಮಾಡಿದ್ದಾರೆ. ಅದಕ್ಕೆಲ್ಲ ಪೂರಕವಾಗಿ ಚುನಾವಣಾ ವ್ಯೂಹರಚನೆ ಕಾರ ಪ್ರಶಾಂತ್‌ ಕಿಶೋರ್‌ ಕಾಂಗ್ರೆಸ್‌ನ ನಾಯಕತ್ವ ಎನ್ನುವ ವಿಚಾರ ದೈವಿಕವಾದದ್ದು ಅಲ್ಲ. ಅದೇನಿದ್ದರೂ ಪ್ರಜಾಸತ್ತಾತ್ಮಕವಾದದ್ದು ಎಂದು ಗುರುವಾರ ಟ್ವೀಟ್‌ ಮಾಡಿದ್ದು ಮತ್ತಷ್ಟು ಕಿಚ್ಚೆಬ್ಬಿಸಿದೆ.

ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಹೇಳಿಕೆಗೆ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ ಸಿಂಗ್‌ ಭಾರೀ ಆಕ್ಷೇಪ ಮಾಡಿದ್ದಾರೆ. ಇಂಥ ಹೇಳಿಕೆಯಿಂದ ಬಿಜೆಪಿಗೆ ಆಕ್ಸಿಜನ್‌ ಪೂರೈಕೆ ಮಾಡುವ ಕೆಲಸವನ್ನು ಮಮತಾ ಬ್ಯಾನರ್ಜಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಗುರುವಾರದ ಬೆಳವಣಿಗೆಯಲ್ಲಿ ಪ್ರಶಾಂತ್‌ ಕಿಶೋರ್‌ ಅವರು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನೇ ಪರೋಕ್ಷವಾಗಿ ಪ್ರಶಾಂತ್‌ ಉಲ್ಲೇಖೀಸಿ ಟ್ವೀಟ್‌ ಮಾಡಿ “ಪ್ರಬಲ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್‌ಗೆ ಉತ್ತಮ ಅವಕಾಶ ಇದೆ.

ಇದನ್ನೂ ಓದಿ:ಒಮಿಕ್ರಾನ್ ; ಆರೂ ಮಂದಿಯ ಮೇಲೆ ನಿಗಾ ಇಟ್ಟಿದ್ದೇವೆ: ಸಚಿವ ಡಾ.ಸುಧಾಕರ್

Advertisement

ಹತ್ತು ವರ್ಷಗಳ ಅವಧಿಯಲ್ಲಿ ಆ ಪಕ್ಷ ಶೇ.90ರಷ್ಟು ಚುನಾವಣೆಗಳಲ್ಲಿ ಸೋತಿದೆ. ಆ ಪಕ್ಷದ ನಾಯಕತ್ವ ಎನ್ನುವ ವಿಚಾರ ದೈವಿಕವಾಗಿ ಬರುವಂಥದಲ್ಲ. ಅದಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಮೂಲಕ ಆಯ್ಕೆಯಾಗಬೇಕಾಗಿದೆ’ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ “ಪ್ರಶಾಂತ್‌ ಕಿಶೋರ್‌ ಪ್ರಸ್ತಾಪ ಮಾಡಿದ ವ್ಯಕ್ತಿ ದೇಶದ ಪ್ರಜಾಪ್ರಭುತ್ವವನ್ನು ಆರ್‌ಎಸ್‌ಎಸ್‌ನಿಂದ ಕಾಪಾಡಲು ಯತ್ನಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.

ಆತ್ಮವಿಲ್ಲದ ದೇಹದಂತೆ:
ಕಾಂಗ್ರೆಸ್‌ನ ಜಿ-23 ಮುಖಂಡರಲ್ಲಿ ಒಬ್ಬರಾಗಿರುವ ಕಪಿಲ್‌ ಸಿಬಲ್‌ ಮಾತನಾಡಿ ಕಾಂಗ್ರೆಸ್‌ ಇಲ್ಲದ ಯುಪಿಎ ಆತ್ಮವಿಲ್ಲದ ದೇಹದಂತೆ ಎಂದು ಹೇಳಿದ್ದಾರೆ. ತಾತ್ವಿಕವಾಗಿ ಯಾವುದೇ ಬದ್ಧತೆ ಇಲ್ಲದ ವೃತ್ತಿಪರನಿಗೆ ಯಾವುದೇ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಬೋಧನೆ ಮಾಡಲು ಸಾಕಷ್ಟು ಅವಕಾಶಗಳು ಇರುತ್ತವೆ ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next