Advertisement

ಅಲ್ಪ ಸಂಖ್ಯಾತರ ಮತ ಒಡೆಯಲು ಬಿಜೆಪಿ ಬೆಂಬಲಿತ ಹೊಸ ಪಕ್ಷ ಹುಟ್ಟಿಕೊಂಡಿದೆ : ಮಮತಾ

05:16 PM Mar 25, 2021 | Team Udayavani |

ಪಥರಾಪ್ರತಿಮ/ ಪಶ್ಚಿಮ ಬಂಗಾಳ : ವಿಧಾನ ಸಭೆ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ಮತಗಳನ್ನು ಒಡೆಯಲು ಹೊಸ ಪಕ್ಷವನ್ನು ಬಿಜೆಪಿ ಬೆಂಬಲಿಸುತ್ತಿದೆ  ಎಂದು ತೃಣಮೂಲ ಕಾಂಗ್ರೆಸ್ ನ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

Advertisement

ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಚುನಾವಣಾ ಮತ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹೊಸ ಪಕ್ಷವೊಂದು ಚುನಾವಣೆಯಲ್ಲಿ ಕುತಂತ್ರ ಮಾಡುವುದಕ್ಕೆ ಬಿಜೆಪಿಯಿಂದ ಹಣದ ಸಹಾಯವನ್ನು ಪಡೆದಿದೆ ಎಂದು ಯಾರ ಮತ್ತು ಯಾವ ಪಕ್ಷದ ಹೆಸರನ್ನು ಉಲ್ಲೇಖಿಸದೇ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಓದಿ : ಸಿಎಂ ಕಾರಂತ ಬಡಾವಣೆ ಕೈಬಿಡುವ ಭರವಸೆ ನೀಡಿಲ್ಲ : ವಿಶ್ವನಾಥ್ ಸ್ಪಷ್ಟನೆ

ಅಲ್ಪ ಸಂಖ್ಯಾತರ ಮತವನ್ನು ಒಡೆಯುವ ಉದ್ದೇಶದಿಂದ ಚುನಾವಣೆಯ ಸಂದರ್ಭದಲ್ಲಿ  ಬಿಜೆಪಿ ಬೆಂಬಲಿತ ಹೊಸದೊಂದು ಪಕ್ಷ ರಾಜ್ಯದಲ್ಲಿ ಹುಟ್ಟಿಕೊಂಡಿದೆ. ಆ ಬಿಜೆಪಿ ಬೆಂಬಲಿತ ಪಕ್ಷದ ಅಭ್ಯರ್ಥಿಗಳಿಗೆ ದಯವಿಟ್ಟು ಮತ ಚಲಾವಣೆ ಮಾಡಬೇಡಿ ಎಂದು ಮಮತಾ ಜನರನ್ನು ಕೇಳಿಕೊಂಡಿದ್ದಾರೆ.

ಸಿಪಿಐ(ಎಮ್) ಹಾಗೂ ಕಾಂಗ್ರೆಸ್ ನ್ನು ಕೂಡ ತರಾಟೆಗೆ ತೆಗೆದುಕೊಂಡ ಮಮತಾ, ಆ ಎರಡು ಪಕ್ಷಗಳು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿವೆ ಎಂದಿದ್ದಾರೆ.

Advertisement

ತೃಣಮೂಲ ಕಾಂಗ್ರೆಸ್ ಮಾತ್ರ ರಾಜ್ಯದಲ್ಲಿ ಸಿಎಎ ಮತ್ತು ಎನ್ ಪಿ ಆರ್  ಅನುಷ್ಠಾನವನ್ನು ತಡೆಯುವಲ್ಲಿ ಕಾರ್ಯ ನಿರ್ವಹಿಸುತ್ತದೆ. ಸಮಾಜದಲ್ಲಿನ ಎಲ್ಲಾ ಸಮುದಾಯಗಳಲ್ಲಿ ಸೌಹಾರ್ದತೆಯನ್ನು ತರಲು ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಓದಿ :  ಕಂಠ ಪೂರ್ತಿ ಕುಡಿಸಿ ತನ್ನ ತಂದೆಯನ್ನೇ ಜೀವಂತವಾಗಿ ಸುಟ್ಟು ಹಾಕಿದ ಮಹಿಳೆ. ಕಾರಣವೇನು?

Advertisement

Udayavani is now on Telegram. Click here to join our channel and stay updated with the latest news.

Next