Advertisement

ರಾಜಕೀಯ ಸಭೆ ದೃಢೀಕರಿಸದ ಬೀಜಿಂಗ್‌: ಮಮತಾ ಚೀನ ಭೇಟಿ ರದ್ದು

12:12 PM Jun 23, 2018 | udayavani editorial |

ಕೋಲ್ಕತ : ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಚೀನ ಭೇಟಿಯನ್ನು ರದ್ದು ಮಾಡಿದ್ದಾರೆ. 

Advertisement

ಸಮರ್ಪಕ ಮಟ್ಟಗಳಲ್ಲಿ ನಡೆಯಬೇಕಿರುವ ರಾಜಕೀಯ ಸಭೆಗಳನ್ನು ಚೀನದ ಸಂಬಂಧಿತ ಅಧಿಕಾರಿಗಳು ಇನ್ನೂ ದೃಢೀಕರಿಸದಿರುವುದೇ ಮಮತಾ ಚೀನ ಭೇಟಿ ರದ್ದಿಗೆ ಕಾರಣವಾಗಿದೆ. ಪಶ್ಚಿಮ ಬಂಗಾಲದ ಹಣಕಾಸು ಸಚಿವ ಅಮಿತ್‌ ಮಿತ್ರಾ ಅದನ್ನು ದೃಢೀಕರಿಸಿದ್ದಾರೆ. 

ಮಮತಾ ಬ್ಯಾನರ್ಜಿ ಅವರು ಶುಕ್ರವಾರ ರಾತ್ರಿ ಚೀನಕ್ಕೆ ಪ್ರಯಾಣಿಸುವುದಿತ್ತು. ಚೀನದ ಕಮ್ಯುನಿಸ್ಟ್‌ ಪಕ್ಷದ ಅಂತಾರಾಷ್ಟ್ರೀಯ ವಿಭಾಗವು ಭಾರತ ಸರಕಾರದೊಂದಿಗೆ ಹಮ್ಮಿಕೊಂಡಿರುವ ವಿನಿಮಯ ಕಾರ್ಯಕ್ರಮದ ಅಂಗವಾಗಿ ಟಿಎಂಸಿ ಮುಖ್ಯಸ್ಥೆ ಮಮತಾ ಅವರು ಚೀನಕ್ಕೆ ನಿಯೋಗವೊಂದನ್ನು ಒಯ್ಯುವವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next