ಮಹಾನಗರ: ಮಂಗಳಾದೇವಿ ದೇವಸ್ಥಾನದ ಶ್ರೀ ಭಗವದ್ಗೀತಾ ಸಪ್ತಾಹ ಪಠಣ ಕೇಂದ್ರದ ಗೀತಾ ಜಯಂತಿ ಪ್ರಯುಕ್ತ ಜರಗಿದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಪ್ರಸಿದ್ಧ ಕಲಾವಿದ ಮಲ್ಪೆ ಆರ್.ವಾಸುದೇವ ಸಾಮಗರನ್ನು ಸಮ್ಮಾನಿಸಲಾಯಿತು.
ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಘವೇಂದ್ರ ರಾವ್ ಎ. ಮಾತನಾಡಿ, ಭಗವದ್ಗೀತೆಯ ಸಾರವನ್ನು ಇಂದಿನ ಮಕ್ಕಳಿಗೆ ಹೇಳುವ ಅಗತ್ಯ ಇದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಜನರು ಬರುವುದು ಕಡಿಮೆಯಾಗಿದೆ. ತಾನು ಚಿಕ್ಕವನಿದ್ದಾಗ ಯಕ್ಷಗಾನವನ್ನು ಬೆಳಗ್ಗಿನವರೆಗೆ ನೋಡುತ್ತಿದ್ದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಹೋರಾಟಗಾರ ಎಂ.ಜಿ. ಹೆಗಡೆ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರದಲ್ಲಿ ಜನರು ಸೇರದೇ ಘೋಷಣೆಗಳಿದ್ದಲ್ಲಿ ಮಾತ್ರಜನ ಸೇರುವ ಪ್ರವೃತ್ತಿ ಬೆಳೆದಿದೆ ಎಂದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಮಲ್ಪೆ ಆರ್. ವಾಸುದೇವ ಸಾಮಗರು, ಈಗಿನ ಕಾಲದಲ್ಲಿ ಸಮ್ಮಾನ ಮಾಡಲು ಆಯ್ಕೆ ಮಾಡುವ ಮಾನದಂಡವೇ ಬೇರೆಯಾಗಿದ್ದರೂ ಇಲ್ಲಿ ಹಾಗಾಗಲಿಲ್ಲ, ನನ್ನನ್ನು ಗುರುತಿಸಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಶ್ರೀಧರ ಹೆಗಡೆ, ಲಕ್ಶ್ಮೀ, ಅರುಣಾ, ಸುಜಯ್ ಕೆ., ಶ್ರೀಧರ ಡಿ.ಎಸ್., ಸೀತಾರಾಮ ಭಟ್ ಸೆರಾಜೆ ಉಪಸ್ಥಿತರಿದ್ದರು. ಸಂಘಟಕರಾದ ಕೇಶವ ಹೆಗಡೆ ಸ್ವಾಗತಿಸಿದರು. ಅನ್ನಪೂರ್ಣಾ ಶಾಸ್ತ್ರಿ ವಂದಿಸಿದರು. ಸುಧಾಕರ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.