Advertisement
ಮಳೆಯಲ್ಲಿ ನಿರ್ಮಾಣವಾದ ಹೊಂಡಗಳನ್ನು ಮುಚ್ಚಲು ಹೆದ್ದಾರಿ ಇಲಾಖೆ ಇಲ್ಲಿನ ರಸ್ತೆಗಳಿಗೆ ಸಿಮೆಂಟ್ ಮಿಶ್ರಿತ ಜಲ್ಲಿ ಪುಡಿಗಳನ್ನು ಬಳಸಿದ್ದರಿಂದ ಈಗ ಎಲ್ಲಾ ಕಡೆ ಧೂಳು ಆವರಿಸಿದೆ. ಧೂಳಿನಿಂದಾಗಿ ವಾಹನ ಸವಾರರಲ್ಲದೆ ರಸ್ತೆ ಬದಿಯ ಅಂಗಡಿ ಮುಂಗಟ್ಟು, ಸ್ಥಳೀಯರು ತತ್ತರಿಸಿ ಹೋಗಿದ್ದಾರೆ. ಮಳೆರಾಯ ಗುಂಡಿ ನಿರ್ಮಾಣ ಮಾಡಿದರೆ, ಸಂಬಂಧಪಟ್ಟ ಇಲಾಖೆ ಜನತೆಗೆ ಧೂಳು ನೀಡುತ್ತಿದೆ ಎಂದು ಶಾಪ ಹಾಕುವಂತಾಗಿದೆ. ಧೂಳು ಏಳದಂತೆ ನೀರು ಸಿಂಪಡಿಸಲಾಗುತ್ತಿದೆಯಾದರೂ ಅದು ಸಾಲದಾಗಿದೆ. ಶೀಘ್ರ ರಸ್ತೆ ನಿರ್ಮಿಸುವಂತೆ ನಾಗರಿಕರು ಸಂಬಂಧಪಟ್ಟ ಆಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.
ಇಲ್ಲಿನ ರಸ್ತೆ ಬದಿಯ ಮನೆಯಲ್ಲಿ ವಾಸವಾಗಿ ರುವವರು ಧೂಳಿನಿಂದ ಬೇಸತ್ತು ದಿನವಿಡೀ ಮನೆಗಳ ಬಾಗಿಲು ಮುಚ್ಚಿಕೊಳ್ಳುವಂತಾಗಿದೆ. ಅಂಗಡಿ ಮುಂಗಟ್ಟು, ಹೊಟೇಲ್, ಬೇಕರಿಗಳ ಒಳಗೆ ಧೂಳು ಬರುವುದರಿಂದ ತಿಂಡಿ ತಿನಸುಗಳ ಮೇಲೂ ಪರಿಣಾಮ ಬೀರುತ್ತದೆ. ಆನೇಕರು ಧೂಳಿನಿಂದ ಕೆಮ್ಮು, ಉಸಿರಾಟದ ಸಮಸ್ಯೆಗೆ ಸಿಲುಕಿದ್ದಾರೆ.
Related Articles
ಈ ಭಾಗದಲ್ಲಿ ಸಂಚರಿಸುವ ಜನರು ನಿತ್ಯ ಸಂಕಷ್ಟ ಪಡುವಂತಾಗಿದೆ. ಲಾರಿ ಬಸ್ ಹಿಂದೆ ಹೋದರೆ ಮುಖಕ್ಕೆ ಧೂಳು ರಾಚುವುದರಿಂದ ಆನಿವಾರ್ಯವಾಗಿ ಧೂಳು ಸೇವಿಸಿಕೊಂಡೆ ಓಡಾಡುವಂತಾಗಿದೆ.
– ಭುವನೇಂದ್ರ ಮೈಂದನ್, ಬಂಕೇರಕಟ್ಟ
Advertisement