ಮಲ್ಪೆ: ಮೀನಿಗೆ ಸರಿಯಾದ ದರ ನಿಗದಿ ಸೇರಿದಂತೆ, ಮೀನುಗಾರಿಕೆ ಬಂದರುಗಳ ಮೂಲಸೌಕರ್ಯ ವೃದ್ಧಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ನೀಡಿದ್ದರೂ ಸರಕಾರವು ಈ ಬಗ್ಗೆ ಯಾವುದೇ ಸಭೆ ನಡೆಸದೆ ಮೀನುಗಾರರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಅನಿವಾರ್ಯ ಎಂದು ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ನಿರ್ಧರಿಸಿದೆ ಎಂದು ಕ್ರಿಯಾ ಸಮಿತಿಯ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಹೇಳಿದರು.
ಕ್ರಿಯಾ ಸಮಿತಿ ವತಿಯಿಂದ ಉಡುಪಿಯ ಕಾರ್ತಿಕ್ ಎಸ್ಟೇಟ್‌ನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಬಂದರಿನ ನಿರ್ವಹಣೆ, ಮೂಲಸೌಕರ್ಯದ ಕೊರತೆ ಯಿಂದಾಗಿ ಮೀನುಗಾರರು ದೈನಂದಿನ ಚಟುವಟಿಕೆಗಳಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮತ್ಸ್ಯ ದಿಂದ ಬಳಲುತ್ತಿರುವ ಮೀನುಗಾರರಿಗೆ ಉಪಯೋಗಿಸುತ್ತಿರುವ ಡೀಸೆಲ್ ಖರೀದಿ ಮೇಲೆ ಲೀಟರ್‌ಗೆ 1.01 ರೂ. ಹೆಚ್ಚುವರಿ ವಸೂಲಿ ಮಾಡುತ್ತಿರುವುದು ಖೇದಕರ ಎಂದರು. ನ್ಯಾಯಯುತ ಬೇಡಿಕೆಗೆ ಅನೇಕ ವರ್ಷಗಳಿಂದ ಹೋರಾಡುತ್ತಿರುವ ಹೊನ್ನಾವರ ಮೀನುಗಾರರ ಮೇಲೆ ಲಾಠಿ ಪ್ರಹಾರ ಮಾಡಿರುವುದಕ್ಕೆ ಖಂಡನೆ ವ್ಯಕ್ತವಾಯಿತು.
ಬಜೆಟ್‌ನಲ್ಲಿ ಹಣ
ಕಾದಿರಿಸಲು ಆಗ್ರಹ
ಮೀನುಗಾರ ಸಚಿವ ಮಂಕಾಳ ವೈದ್ಯ ಬಂದರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮೀನುಗಾರರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ದು ಅಲ್ಲಿ ಸಮಾಲೋಚನೆ ನಡೆಸಿ ಮುಂದಿನ ಬಜೆಟ್ಟಿನಲ್ಲಿ ಮೀನುಗಾರಿಕೆಯ ಆವಶ್ಯಕತೆಗೆ ತಕ್ಕಂತೆ 1 ಸಾವಿರ ಕೋ ರೂ. ಕಾದಿರಿಸಬೇಕೆಂದು ಒತ್ತಾಯಿಸಲಾಯಿತು.
ಶಾಸಕ ಯಶಪಾಲ್ ಸುವರ್ಣ, ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಸಂಘದ ಉಪಾಧ್ಯಕ್ಷರಾದ ರಮೇಶ್ ಕೋಟ್ಯಾನ್, ರಾಮಚಂದ್ರ ಕುಂದರ್, ಮೋಹನ್ ಬೆಂಗ್ರೆ, ಆನಂದ ಉಪ್ಪುಂದ, ಪ್ರಧಾನ ಕಾರ್ಯದರ್ಶಿ ಕಿಶೋರ್ ಡಿ. ಸುವರ್ಣ, ಸಂಘಟನ ಕಾರ್ಯದರ್ಶಿ ವಿನಯ ಕರ್ಕೇರ, ಕಾರ್ಯದರ್ಶಿ ಬಾಬು ಕುಬಲ್, ವಿವಿಯನ್ ಫೆರ್ನಾಂಡಿಸ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ್ ಕೆ. ಸುವರ್ಣ, ಮಂಗಳೂರು ಟ್ರಾಲ್ ಬೋಟ್ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ, ಮಲ್ಪೆ ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಸುಭಾಷ್ ಮೆಂಡನ್, ಮಲ್ಪೆ ಪಸೀìನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ಮಲ್ಪೆ ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಕುಂದರ್, ಆಳಸಮುದ್ರ ತಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಟ್ರಾಲ್‌ಬೋಟ್ ತಂಡೇಲರ ಸಂಘದ ಅಧ್ಯಕ್ಷ ನಾಗರಾಜ ಕುಂದರ್, ಉತ್ತರ ಕನ್ನಡ ಫೆಡರೇಶನ್ ನಿರ್ದೇಶಕ ಮಹೇಶ್ ಮೂಡಂಗಿ, ತದಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಉಮಾಕಾಂತ್ ಹೊಸಕಟ್ಟ, ನಾಡದೋಣಿ ಮೀನುಗಾರರ ಕಾರ್ಯದರ್ಶಿ ಗೋಪಾಲ ಆರ್.ಕೆ., ಮಲ್ಪೆ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಕರುಣಾಕರ ಸಾಲ್ಯಾನ್, ರತ್ನಾಕರ ಸಾಲ್ಯಾನ್, ಅಣ್ಣಯ್ಯ ಬೈಂದೂರು, ಮುರಳೀಧರ ಬೈಂದೂರು, ಸಂತೋಷ್ ಎಸ್. ಬಂಗೇರ, ಉಮೇಶ್ ಬಡಾನಿಡಿಯೂರು ಉಪಸ್ಥಿತರಿದ್ದರು.