Advertisement
ಮೀನುಗಾರಿಕೆ ಬಂದರಿನೊಳಗೆ ಸುಮಾರು 100ಕ್ಕೂ ಅಧಿಕ ಗಾಡಿ ಅಂಗಡಿಗಳಿವೆ. ಕಳೆದ ಎರಡು ತಿಂಗಳಿನಿಂದ ಲಾಕ್‌ಡೌನ್ ಕಾರಣಕ್ಕೆ ಎಲ್ಲ ಅಂಗಡಿಗಳು ಮುಚ್ಚಿವೆ. ಇದೀಗ ವಾರದ ಹಿಂದೆ ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡಿದ್ದರೂ ಸಾಮಾ ಜಿಕ ಅಂತರ ಕಾಯ್ದುಕೊಳ್ಳುವ ಸಮಸ್ಯೆಯಿಂದಾಗಿ ಗಾಡಿ ಅಂಗಡಿಗಳನ್ನು ತೆರೆಯಲು ಅವಕಾಶ ಸಿಕ್ಕಿಲ್ಲ. ಗಾಡಿ ಆಂಗಡಿ ವ್ಯಾಪಾರಿಗಳು ಹೆಚ್ಚು ದುಡಿ ಯುತ್ತಿದ್ದ ಮಾರ್ಚ್ ನಿಂದ ಮೇ ತಿಂಗಳ ಅವಧಿಯಲ್ಲಿ ಕೋವಿಡ್-19 ಕಾಟ ಹೆಚ್ಚಿದ ಪರಿಣಾಮ ದುಡಿಮೆಯೇ ಇಲ್ಲದಂತಾ ಗಿದೆ. ಇದನ್ನೆ ನಂಬಿ ಜೀವನ ಸಾಗಿಸುತ್ತಿದ್ದವರ ಬದುಕು ಅತಂತ್ರವಾಗಿದೆ. ಮುಂಬರುವ ಮಳೆಗಾಲ ಎರಡು ತಿಂಗಳ ಅವಧಿಯಲ್ಲಿ ಮೀನುಗಾರಿಕೆ ಸ್ಥಗಿತವಾಗುವುದರಿಂದ ವ್ಯಾಪಾರ ವ್ಯವಹಾರಗಳು ಇಲ್ಲದೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ.
ಉತ್ತಮ ವ್ಯಾಪಾರ ಇರುವ ಮೀನುಗಾರಿಕೆ ಋತು ಅಂತ್ಯದ ಮೂರು ತಿಂಗಳು ಕೊರೊನಾ ಕೈಬಿಡುವಂತಾಗಿದೆ. ಬಂದರಿನಲ್ಲಿ ಪುಟ್ಟ ಅಂಗಡಿಯನ್ನು ಇಟ್ಟು ಜೀವನ ಸಾಗಿಸುವ ಬಡವರ ಬಗ್ಗೆ ಸರಕಾರ ಕಾಳಜಿ ತೋರಬೇಕು. ನಮಗೂ ಉಳಿದವರಂತೆ ಸಹಾಯಧನ ಒದಗಿಸಬೇಕು
-ಅಶೋಕ್ ಎಸ್. ಸುವರ್ಣ,
ಅಧ್ಯಕ್ಷರು, ಗಾಡಿ ಅಂಗಡಿ ವ್ಯಾಪಾರಸ್ಥರ ಸಂಘ, ಮಲ್ಪೆ