Advertisement

Malpe: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

11:47 PM Oct 24, 2023 | Team Udayavani |

ಮಲ್ಪೆ: ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿದ ಮೀನುಗಾರನೋರ್ವ ಆಯತಪ್ಪಿ ಬೋಟಿನಿಂದ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಮಲ್ಪೆಯಲ್ಲಿ ನಡೆದಿದೆ.

Advertisement

ಆಂಧ್ರಪ್ರದೇಶ ಮೂಲದ ಮಾಗುಪಳ್ಳಿ ಹರಿಬಾಬು (52) ಮೃತಪಟ್ಟಿದ್ದು, ಶನಿವಾರ ಸಂಜೆ ವೇಳೆ ಮೀನುಗಾರಿಕಾ ಬೋಟಿನಲ್ಲಿ ಬಲೆ ಬೀಸುತ್ತಿದ್ದಾಗ ಸಮುದ್ರ ಅಲೆಗಳ ರಭಸಕ್ಕೆ ಸಿಕ್ಕ ಮೀನುಗಾರ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು.

ನಾಪತ್ತೆಯಾದ ಮೀನುಗಾರನನ್ನು ಉಳಿದ ಮೀನುಗಾರರು ಹುಡುಕಾಟ ನಡೆಸಿದ್ದು, ಸುಮಾರು 15 ನಾಟಿಕಲ್‌ ಮೈಲು ದೂರದಲ್ಲಿ ಐಲ್ಯಾಂಡ್‌ ಬಳಿ ಮೀನುಗಾರನ ಮೃತದೇಹ ಪತ್ತೆಯಾಗಿದೆ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next