Advertisement

ಮಲ್ಪೆ; ಇಡೀ ಕಟ್ಟಡ ಕುಸಿದರೂ ಕದಲದ ಮಾರುತಿ ಫೋಟೋ!

10:14 AM Aug 13, 2019 | Nagendra Trasi |

ಮಲ್ಪೆ: ಗಾಳಿ ಮಳೆ ತೀವ್ರತೆಗೆ ಆ ಹಳೆಯ ವ್ಯಾಯಾಮ ಶಾಲೆ ಸಂಪೂರ್ಣ ಕುಸಿದು ಬಿದ್ದಿದೆ. ಇದರೊಂದಿಗೆ ಅಚ್ಚರಿಯ ಘಟನೆಯೂ ಘಟಿಸಿದೆ. ಅದೇನೆಂದರೆ, ಅಲ್ಲಿರುವ ವೀರಮಾರುತಿಯ ಫೋಟೋಕ್ಕೆ ಒಂದು ಚೂರೂ ಹಾನಿಯಾಗಿಲ್ಲ. ಅದರು ಸ‌ದಲದೇ ಹಾಗೆಯೇ ಇತ್ತು!

Advertisement

ವ್ಯಾಯಾಮ ಶಾಲೆ ಸಂಪೂರ್ಣ ಕುಸಿದಿದ್ದು, ಇನ್ನೇನಿದ್ದರೂ ಹೊಸತೇ ಕಟ್ಟಬೇಕು ಎಂಬಂತಿದೆ. ಆದರೆ ಮಾರುತಿಯ ಫೊಟೋಕ್ಕೆ ಏನೂ ಆಗದಿರುವುದು ಅಚ್ಚರಿ ಮೂಡಿಸಿದೆ. ಈ ಘಟನೆ ಬಳಿಕ ದೇವರ ಫೋಟೋವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಮಲ್ಪೆ ಕೊಳ ರಸ್ತೆಯಲ್ಲಿ ಸುಮಾರು 55 ವರ್ಷ ಇತಿಹಾಸವಿರುವ ವೀರಮಾರುತಿ ವ್ಯಾಯಾಮ ಶಾಲೆ ಇದಾಗಿದ್ದು, ಸೋಮವಾರ ಕುಸಿದಿದೆ. ವ್ಯಾಯಾಮ ಶಾಲೆಯ ಗೋಡೆ ಹಾಗೂ ಮಾಡು ನೆಲಸಮವಾಗಿದ್ದು ಅಪಾರ ನಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next