Advertisement

ಮಲ್ಪೆ ಬೀಚ್‌: ಸಮುದ್ರದಲ್ಲಿ ತೇಲು ಸೇತುವೆ ಉದ್ಘಾಟನೆ

01:50 AM Dec 26, 2022 | Team Udayavani |

ಮಲ್ಪೆ: ಮಲ್ಪೆ ಬೀಚ್‌ನ ಸಮುದ್ರದಲ್ಲಿ ತೇಲುವ ಸೇತುವೆ (ಫ್ಲೋಟಿಂಗ್‌ ಬ್ರಿಜ್‌)ಯನ್ನು ಶಾಸಕ ಕೆ. ರಘುಪತಿ ಭಟ್‌ ರವಿವಾರ ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇರಳ ಬಿಟ್ಟರೆ ಇಡೀ ದೇಶದಲ್ಲಿ ಮಲ್ಪೆ ಬೀಚ್‌ನಲ್ಲಿ ಮಾತ್ರ ನಿರ್ಮಾಣಗೊಂಡಿರುವ ಸೇತುವೆ ಇದಾಗಿದ್ದು ಪ್ರವಾಸಿಗರು ಇನ್ನಷ್ಟು ಖುಷಿ ಪಡಬಹುದು ಎಂದರು.

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಎಸ್‌ಪಿ ಅಕ್ಷಯ್‌ ಹಾಕೆ ಮುಖ್ಯ ಅತಿಥಿಗಳಾಗಿದ್ದರು. ಕಳೆದ ಮೇ ತಿಂಗಳ ಮಧ್ಯೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರವಾಸಿಗರ ಆಕರ್ಷಣೆಗೆ ತೇಲು ಸೇತುವೆಯನ್ನು ಆರಂಭಿಸಲಾಗಿತ್ತು. ಕೆಲವೊಂದು ತಾಂತ್ರಿಕ ಕಾರಣದಿಂದ ಕೆಲವೇ ದಿನಗಳಲ್ಲಿ ಅದು ಸ್ಥಗಿತಗೊಂಡಿತ್ತು.

ಕೇರಳ ಮತ್ತು ರಾಜ್ಯದ ತಜ್ಞರ ತಂಡ ಪರಿಶೀಲನೆಗೆ ಆಗಮಿಸಿದ್ದು, ತೇಲುವ ಸೇತುವೆಯ ಸಾಮರ್ಥ್ಯ ಕಾರ್ಯಕ್ಷಮತೆಯನ್ನು ಪರೀಕ್ಷೆಗೆ ಒಳಪಡಿಸಿ ದೃಢೀಕರಿಸಿದೆ. ವೈಜ್ಞಾನಿಕ ವಾಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಈ ಸೇತುವೆಯ ಬ್ಲಾಕ್‌ಗಳು ಮಾಂಡೌಸ್‌ ಚಂಡಮಾರುತಕ್ಕೂ ಹಾನಿಯಾಗಿಲ್ಲ. ಹೆಚ್ಚು ದೃಢವಾದ ಜೋಡಣೆಯಿಂದ ಗಟ್ಟಿಯಾಗಿದೆ. ವರದಿ ಆಧಾರದಲ್ಲಿ ಜಿಲ್ಲಾಡಳಿತವು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ರವಿವಾರ ಆರಂಭಗೊಂಡಿದೆ.

ಸಂಸ್ಥೆಯ ಪಾಲುದಾರರಾದ ಶೇಖರ್‌ ಪುತ್ರನ್‌, ಧನಂಜಯ ಕಾಂಚನ್‌, ಸುದೇಶ್‌ ಶೆಟ್ಟಿ ಮೊದ ಲಾದವರು ಪಾಲ್ಗೊಂಡಿದ್ದರು.

Advertisement

ಸುರಕ್ಷೆಗೆ ಹೆಚ್ಚಿನ ಮಹತ್ವ
120 ಮೀ. ಉದ್ದ, 3.5 ಮೀ. ಅಗಲವಾಗಿದ್ದು ಸೇತುವೆಯ ಇಕ್ಕೆಲಗಳಲ್ಲಿ ಸುರಕ್ಷೆಗಾಗಿ ರ್ಯಾಲಿಂಗ್‌ ಸಿಸ್ಟಮ್‌ ಇದೆ. ಏಕಕಾಲಕ್ಕೆ 100ಕ್ಕೂ ಹೆಚ್ಚು ಮಂದಿ ನಡೆಯಬಹುದಾಗಿದೆ. 15 ಮಂದಿ ಲೈಫ್‌ ಗಾರ್ಡ್‌, 50 ಲೈಫ್ಬಾಯ್‌, ಸೇತುವೆಯ ತುದಿಯಲ್ಲಿ ಒಂದು ಬೋಟನ್ನು ಇರಿಸಲಾಗಿದೆ. ಸೇತುವೆ ಏರುವ ಪ್ರತಿಯೊಬ್ಬರೂ ಲೈಫ್ ಜಾಕೆಟ್‌ ಧರಿಸಬೇಕು. ಮುಂಬಯಿಯ ಎಚ್‌ಎನ್‌ ಮರೈನ್‌ ಲಿಮಿಟೆಡ್‌ ದೃಢೀಕರಿಸಿದೆ. ಎಚ್‌ಡಿಸಿ ಮೆಟೀರಿಯಲ್‌ ಬಳಕೆ ಮಾಡಲಾಗಿದೆ ಎಂದು ಸುದೇಶ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next