Advertisement
ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೋತ್ಸವ, ಸಾಹಸ ಕ್ರೀಡೆ, ಆಹಾರೋತ್ಸವ, ಗೂಡುದೀಪ ಸ್ಪರ್ಧೆ, ಮರಳು ಶಿಲ್ಪ, ಗಾಳಿಪಟ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು ಅದಕ್ಕಾಗಿ ಸಂಘಟಕರಿಂದ ಪೂರ್ವ ತಯಾರಿಗಳು ನಡೆಯುತ್ತಿವೆ. ಕಾರ್ಯಕ್ರಮಕ್ಕೆ ಬೃಹತ್ ಗಾತ್ರದ ವೇದಿಕೆಯ ನಿರ್ಮಾಣದ ಕೆಲಸಗಳು ನಡೆಯುತ್ತಿವೆ. ಕರಕುಶಲ ವಸ್ತುಗಳು ಸೇರಿದಂತೆ ಆಹಾರ ಮೇಳಗಳ ಪ್ರದರ್ಶನ ಮತ್ತು ಮಾರಾಟದ 30 ಮಳಿಗೆಗಳನ್ನು ತೆರೆಯಲಾಗುತ್ತದೆ.
ಮುಂಜಾಗ್ರತೆಗಾಗಿ ಈಗಿರುವ 7 ಸಿಸಿ ಕೆಮರಾ ಅಲ್ಲದೆ ಹೆಚ್ಚುವರಿಯಾಗಿ 12 ಕೆಮರಾಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮದ ವೀಕ್ಷಣೆಗಾಗಿ ಸುಮಾರು 5 ಸಾವಿರ ಮಂದಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಡಿ. 29ರಂದು ಸಂಜೆ 6 ಗಂಟೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕಾ ಖರ್ಗೆ ಅವರು ಚಾಲನೆ ನೀಡಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಶಿವಮಣಿ ಅವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.
Related Articles
ರಾಷ್ಟ್ರಮಟ್ಟದ ಓಪನ್ ಸ್ವಿಮ್ಮಿಂಗ್ ಸ್ಪರ್ಧೆಗಳು ಡಿ. 30ರಂದು ಬೆಳಗ್ಗೆ 7 ಕ್ಕೆ ಮಲ್ಪೆ ಅರಬ್ಬಿ ಸಮುದ್ರದಲ್ಲಿ ನಡೆಯಲಿದೆ. ಭಾರತದಲ್ಲಿ ನಡೆಯುವ ಏಕೈಕ ಓಪನ್ ಈಜು ಸ್ಪರ್ಧೆ ಇದಾಗಿದೆ. ಈಗಾಗಲೇ 270 ಮಂದಿ 14, 16, 18 ವಯೋ ವಿಭಾಗದಲ್ಲಿ ನೋಂದಣಿ ಮಾಡಿದ್ದಾರೆ.ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ತರಲಾಗಿದ್ದು, ರಾಷ್ಟ್ರೀಯ ಸ್ವಿಮ್ಮಿಂಗ್ ಫೆಡರೇಶನಿನ ಕಾರ್ಯದರ್ಶಿ ಬಂದು ಸ್ಥಳದ ಪರಿವೀಕ್ಷಣೆ ನಡೆಸಿದ್ದಾರೆ. ಇಲ್ಲಿ ವಿಜೇತರಾದವರು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಅಂದು ಬೆಳಗ್ಗೆ 11 ಗಂಟೆಗೆ ಮಹಿಳೆಯರಿಗೆ ಮತ್ತು ಪುರುಷರಿಗೆ ಬೀಚ್ ಹಗ್ಗಜಗ್ಗಾಟವೂ ನಡೆಯಲಿದೆ.
Advertisement
ಸಾಹಸ ಸ್ಪರ್ಧೆಉಡುಪಿ ಪರ್ಬದ ಅಂಗವಾಗಿ ಟೆರಿಸ್ಟ್ರೀಯ ಅಡ್ವೆಂಚರ್ ನ್ಪೋರ್ಟ್ಸ್ ಗಳಾದ ಬೋಲ್ಡಿಂಗ್ ಸ್ಲೇಕ್‌ಲೈನ್, ಜುಮ್ಮರಿಂಗ್, ಬರ್ಮಾಬ್ರಿಡ್ಜ್, ಕಮಾಂಡೋ ಬ್ರಿಡ್ಜ್, ಸೇಕ್‌ಲೈನ್ ಸುರಕ್ಷತಾ ಕಾರ್ಯಾಗಾರಗಳು ನಡೆಯಲಿವೆೆ. 125 ಕಿ. ಮೀ. ಸೈಕಲ್ ಸ್ಪರ್ಧೆ, ಈಜು, ಎಕ್ಟ್ರೀಮ್ ಸೋ³ರ್ಟ್ಸ್, ಬಿಎಂಎಕ್ಸ್, ಸೇಟ್ ಬೋರ್ಡಿಂಗ್, ಸಾರ್ವಜನಿಕರಿಗೆ ರಿಯಾಯಾತಿ ದರದಲ್ಲಿ ಜೆಟ್‌ಸ್ಕೈ, ವಿಂಡ್ ಸರ್ಫಿಂಗ್, ಬನಾನ ರೈಡ್, ಕಯಾಕಿಂಗ್ ನಡೆಸಲಾಗುವುದು. ನಟರಾಜ್ ಮಲ್ಪೆ
ಚಿತ್ರಗಳು: ಆಸ್ಟ್ರೋ ಮೋಹನ್