Advertisement
ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ 22 ಇದ್ದು, ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ತೀವ್ರ ಇಳಿಮುಖ ಕಂಡುಬರುವುದರ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದಾರಿಯಾಗಿದೆ. ಸರ್ಕಾರ ಅಂಗನವಾಡಿಗಳಲ್ಲಿ ಹಾಲು, ಮೊಟ್ಟೆ ವಿತರಣೆ ಮಾಡುತ್ತಿರುವುದು ಸಹಕಾರಿಯಾಗಿದೆ. ಅಪೌಷ್ಟಿಕ ನಿವಾರಣೆಗೆ ಪೋಷಕರು ಮಾತ್ರವಲ್ಲದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಮ್ಮಿ ಕೊಳ್ಳುವ ಪೋಷಣ ಅಭಿಯಾನ ಕಾರ್ಯಕ್ರಮವು ಕೂಡ ಪ್ರಮಾಣ ತಗ್ಗಿಸುವಲ್ಲಿ ನೆರವಾಗಿದೆ. ಕಳೆದ 4 ವರ್ಷಗಳಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಇಳಿ ಮುಖವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.
Related Articles
Advertisement
ಅಪೌಷ್ಟಿಕ ಮಕ್ಕಳು ಜಿಲ್ಲೆಯಲ್ಲಿ 22 ಇದ್ದು, ತಾಲೂಕುವಾರು ಅಂಕಿ-ಅಂಶ ಪ್ರಕಾರ ದೇವನ ಹಳ್ಳಿ-4, ದೊಡ್ಡಬಳ್ಳಾಪುರ-13, ಹೊಸಕೋಟೆ-2, ನೆಲಮಂಗಲ-3 ಅಪೌಷ್ಟಿಕ ಮಕ್ಕಳಿದ್ದಾರೆ. 2016- 17ರಲ್ಲಿ 169, 2017-18ರಲ್ಲಿ 120, 2018-19ರಲ್ಲಿ 35 ಹಾಗೂ 2019-20ರಲ್ಲಿ 26, ಪ್ರಸ್ತುತ ವರ್ಷದಲ್ಲಿ 22 ಅಪೌಷ್ಟಿಕ ಮಕ್ಕಳನ್ನು ಹೊಂದಿದೆ
ಅಪೌಷ್ಟಿಕ ಮಕ್ಕಳು ಕಂಡುಬಂದಲ್ಲಿ ಅವರಿಗೆ ತಕ್ಷಣ ಚಿಕಿತ್ಸೆ ಕೊಡಿಸುವುದು. ಬೇರೆ ಜಿಲ್ಲೆಗೆಹೋಲಿಸಿದರೆ, ನಮ್ಮಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆಕಡಿಮೆಯಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ,ಆರೋಗ್ಯವಂತ ಮಕ್ಕಳನ್ನಾಗಿ ಮಾಡಲಾಗುತ್ತದೆ. ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದೆಂಬುವುದು ನಮ್ಮ ಗುರಿ. –ಪುಷ್ಪಲತಾ ರಾಯ್ಕರ್, ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ