Advertisement

ವಿಜಯ್‌ ಮಲ್ಯ ಗ್ರೇಟ್‌ ಎಸ್ಕೇಪ್‌ ಸಿಬಿಐ ಪ್ರಾಯೋಜಿತ: ರಾಹುಲ್‌ ಗಾಂಧಿ

04:39 PM Sep 14, 2018 | Team Udayavani |

ಹೊಸದಿಲ್ಲಿ : ಮದ್ಯ ದೊರೆ ವಿಜಯ್‌ ಮಲ್ಯ ಒಂಬತ್ತು ಸಾವಿರ ಕೋಟಿ ರೂ. ಬ್ಯಾಂಕ್‌ ಸಾಲ ಬಾಕಿ ಇರಿಸಿ  ವಿದೇಶಕ್ಕೆ ಪಲಾಯನ ಮಾಡುವಲ್ಲಿ ಆತನಿಗೆ ಸಿಬಿಐ ನೆರವಾಗಿದೆ ಮತ್ತು ಮಲ್ಯ ವಿರುದ್ಧದ ಲುಕ್‌ ಔಟ್‌ ನೊಟೀಸನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅನುಮತಿ ಮೇರೆಗೆ ಬದಲಾಯಿಸಲಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. 

Advertisement

“ಮಲ್ಯ ಗ್ರೇಟ್‌ ಎಸ್ಕೇಪ್‌ಗೆ ಸಿಬಿಐ ನೆರವಾಗಿದೆ; ಆತನನ್ನು ವಶಕ್ಕೆ ತೆಗೆದುಕೊಳ್ಳಿ ಎನ್ನುವ ಲುಕ್‌ ಔಟ್‌ ನೊಟೀಸನ್ನು ಪ್ರಧಾನಿ ಮೋದಿ ಸೂಚನೆ ಪ್ರಕಾರ “ಮಾಹಿತಿ ನೀಡಿ’ ಎಂದು ಬದಲಾಯಿಸಲಾಗಿದೆ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

“ಸಿಬಿಐ ನೇರವಾಗಿ ಪ್ರಧಾನಿ ಕೈಕೆಳಗೆ ಕೆಲಸ ಮಾಡುತ್ತದೆ. ಪ್ರಧಾನಿ ಅನುಮತಿ ಇಲ್ಲದೆ ವಿಜಯ್‌ ಮಲ್ಯ ರಂತಹ ಹೈ ಪ್ರೊಫೈಲ್‌ ಮತ್ತು ವಿವಾದಾತ್ಮಕ ಕೇಸಿನಲ್ಲಿ ಹೊರಡಿಸಲಾಗಿದ್ದ  ಲುಕ್‌ ಔಟ್‌ ನೊಟೀಸನ್ನು ಸಿಬಿಐ, ಮೋದಿ ಸೂಚನೆ ಇಲ್ಲದೆ, ಬದಲಾಯಿಸಬಹುದು ಎನ್ನುವುದನ್ನು ಯಾರೂ ಊಹಿಸಲಾರರು’ ಎಂದು ರಾಹುಲ್‌ ಹೇಳಿದ್ದಾರೆ. 

“ವಿಜಯ್‌ ಮಲ್ಯ ಅವರನ್ನು ವಶಕ್ಕೆ ತೆಗೆದುಕೊಳ್ಳಬೇಕೆಂದು ಹೇಳುವ ಲುಕ್‌ ಔಟ್‌ ನೊಟೀಸನ್ನು “ಆತನ ಚಲನವಲನಗಳನ್ನು ತಿಳಿಸಿ’ ಎಂಬ ರೀತಿಯಲ್ಲಿ ತಾನು ಬದಲಾಯಿಸಿರುವುದು ತನ್ನ ತೀರ್ಮಾನದಲ್ಲಾಗಿರುವ ಪ್ರಮಾದ ಎಂದು ಸಿಬಿಐ ನಿನ್ನೆ ಗುರುವಾರ ಹೇಳಿತ್ತು. ಮಲ್ಯ ವಿರುದ್ಧ ಮೊದಲ ಎಲ್‌ಓಸಿಯನ್ನು 2015ರ ಅಕ್ಟೋಬರ್‌ 12ರಂದು ಹೊರಡಿಸಲಾಗಿತ್ತು; ಮಲ್ಯ ಅದಾಗಲೇ ವಿದೇಶದಲ್ಲಿದ್ದರು’ ಎಂದು ಸಿಬಿಐ ಹೇಳಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next