Advertisement

ಕೇಜ್ರಿಗೆ ಖರ್ಗೆ ಕರೆ: ಹೊಸ ರಾಜಕೀಯ ಸಮೀಕರಣ?

12:21 AM Apr 16, 2023 | Team Udayavani |

ಹೊಸದಿಲ್ಲಿ: ಕೇಜ್ರಿವಾಲ್‌ಗೆ ಸಿಬಿಐ ಸಮನ್ಸ್‌ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಕರೆ ಮಾತಾಡಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಶುಕ್ರವಾರ ಸಂಜೆ ಖರ್ಗೆ-ಕೇಜ್ರಿವಾಲ್‌ ಮಾತುಕತೆ ನಡೆದಿದೆ, ಆದರೆ ಏನು ಮಾತುಕತೆ ನಡೆದಿದೆ ಎನ್ನುವುದು ಗೊತ್ತಾಗಿಲ್ಲ.

Advertisement

ಇದುವರೆಗೆ ಕಾಂಗ್ರೆಸ್‌ ಆಪ್‌ ವಿರುದ್ಧ ಒಂದು ಅಂತರ ಕಾಯ್ದುಕೊಂಡಿತ್ತು. ಆಪ್‌ ಕೂಡ ಇಂತಹದ್ದೇ ನೀತಿ ಹೊಂದಿತ್ತು. ಹೀಗಿದ್ದರೂ ಖರ್ಗೆ ತಾವೇ ಕರೆ ಮಾಡಿರುವುದು ರಾಷ್ಟ್ರೀಯ ರಾಜಕಾರಣದಲ್ಲಿ ಬದಲಾಗುತ್ತಿರುವ ವಿಪಕ್ಷಗಳ ಸಮೀಕರಣವನ್ನು ಸೂಚಿಸಿದೆ.

ಕೇಜ್ರಿವಾಲ್‌ಗೆ ಸಮನ್ಸ್‌ ನೀಡಿರುವ ಸಿಬಿಐ ಕ್ರಮವನ್ನು ದಿಲ್ಲಿ ಕಾಂಗ್ರೆಸ್‌ ಘಟಕ ಸ್ವಾಗತಿಸಿದೆ. ಇನ್ನು ಪಂಜಾಬ್‌ ಘಟಕ, ಆಪ್‌ಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯಾವುದೇ ನೈತಿಕತೆಯಿಲ್ಲ ಎಂದು ಹರಿಹಾಯ್ದಿದೆ. ಇದರ ಮಧ್ಯೆಯೂ ಖರ್ಗೆ ಕರೆ ಮಾಡಿರುವುದು ಬಹಳ ಮಹತ್ವದ ವಿಷಯ! ಹಾಗೆಯೇ ಕಾಂಗ್ರೆಸ್‌ ವಿರುದ್ಧ ಆಪ್‌ ನೀತಿ ಇತ್ತೀಚೆಗೆ ತುಸು ಬದಲಾಗುತ್ತಿರುವುದು ಗಮನಾರ್ಹ. ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದಾಗ ಮೊದಲು ಅದನ್ನು ವಿರೋಧಿಸಿದ್ದು ಆಪ್‌. ಬಿಜೆಪಿ ವಿರುದ್ಧ ವಿಪಕ್ಷಗಳನ್ನು ಕಾಂಗ್ರೆಸ್‌ ಒಗ್ಗೂಡಿಸಬೇಕು ಎಂದು ಶರದ್‌ ಪವಾರ್‌ ಹೇಳಿದಾಗ ಅದಕ್ಕೂ ಆಪ್‌ ದನಿಗೂಡಿಸಿತ್ತು. ಹೀಗಾಗಿ ಆಪ್‌-ಕಾಂಗ್ರೆಸ್‌ ಒಗ್ಗೂಡಿ ಬಿಜೆಪಿಯನ್ನು ಎದುರಿಸಬಹುದಾ ಎಂಬ ಪ್ರಶ್ನೆಗಳು ಶುರುವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next