ಮಂಗಳೂರು: ಡಬಲ್ ಎಂಜಿನ್ ಸರಕಾರದ ಸುಳ್ಳನ್ನು ಜನರಿಗೆ ತಿಳಿಸದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಉಳಿಯದು. ಪಕ್ಷ, ವ್ಯಕ್ತಿ ಪ್ರತಿಷ್ಠೆ, ಅಸಮಾಧಾನ ಎಲ್ಲ ಬಿಟ್ಟು ಜನವಿರೋಧಿ ಬಿಜೆಪಿಯನ್ನು ಬದಲಾಯಿಸಿ ಕಾಂಗ್ರೆಸ್‌ಗೆ ಮರಳಿ ಅವಕಾಶ ಕೊಡಿಸಲು ಶ್ರಮಿಸೋಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಟಿಎಂಎ ಪೈ ಕನ್ವೆನ್ಶನ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯ ಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತ ನಾಡಿದರು. ದೇಶದಲ್ಲಿ ಎಲ್ಲರಿಗೂ ಒಂದು ಕಾನೂನಿದ್ದು, ಮೋದಿ ಸರಕಾರ ಮಾತ್ರ ಕಾರ್ಪೊರೆಟ್ ಕಂಪೆನಿ ಗಳಿಗೆ ವಿನಾಯಿತಿ ನೀಡಿ, ಮೃದು ಧೋರಣೆ ಅನುಸರಿಸುತ್ತಿದೆ. ವಿಮಾನ ನಿಲ್ದಾಣ, ಬಂದರನ್ನು ಸಾರ್ವಜನಿಕ ಸಂಸ್ಥೆಯಲ್ಲಿ ಅನುಭವವೇ ಇಲ್ಲದ ಸಂಸ್ಥೆಗಳಿಗೆ ಒಪ್ಪಂದ ಮೇಲೆ ನೀಡ ಲಾಗುತ್ತಿದೆ ಎಂದರು.
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಬಿಜೆಪಿಯವರು ಕೇಳುತ್ತಾರೆ. ಆದರೆ ಸ್ವಾತಂತ್ರÂಕ್ಕಾಗಿ ಬಿಜೆಪಿ, ಆರ್‌ಎಸ್‌ಎಸ್ ಅಥವಾ ಹಿಂದಿನ ಜನ ಸಂಘದ ಎಷ್ಟು ಮಂದಿ ಜೈಲಿಗೆ ಹೋಗಿ ದ್ದರು ಎಂಬುದರ ಪಟ್ಟಿ ನೀಡಲಿ. ಇಲ್ಲಿ ಯವರೆಗೆ ಸಂವಿಧಾನ ಉಳಿಸಿದ್ದು, ಸಾರ್ವಜನಿಕ ಸಹಭಾಗಿತ್ವದ ಸಂಸ್ಥೆ ಉಳಿಸಿದ್ದು ಕಾಂಗ್ರೆಸ್ ಎಂದರು.
ಅದಾನಿಯವರ ಏಳಿಗೆಗಾಗಿ ಪೌಷ್ಟಿಕ ಆಹಾರವನ್ನು ಮೋದಿ ಸರಕಾರ ನೀಡು ತ್ತಿದೆ. ಎಲ್‌ಐಸಿ, ಬ್ಯಾಂಕ್ ಸಾಲ, ಪಿಎಫ್ ಹಣ ಸೇರಿ ದಂತೆ ಎಲ್ಲಾ ಮೂಲಗಳಿಂದ ನೆರವು ನೀಡಲಾಗುತ್ತಿದೆ. ಮೋದಿ ಅವರು ಹೊರದೇಶಕ್ಕೆ ಹೋಗುವಾಗ ಅದಾನಿಯವರೇ ಜತೆಯಾಗಿ ಹೋಗು ವುದು ಯಾಕೆ? ಎಷ್ಟು ಸಲ ಅವರನ್ನು ಕರೆದುಕೊಂಡು ಹೋಗಿದ್ದೀರಿ ಎಂಬುದನ್ನು ಮೋದಿಯವರೇ ಜನ ರಿಗೆ ತಿಳಿಸಬೇಕು. ಸಾರ್ವಜನಿಕ ಸಹ ಭಾಗಿತ್ವದ ಕಂಪೆನಿಗಳನ್ನು ಮುಚ್ಚಿ ಲಕ್ಷಾಂತರ ಮಂದಿಯ ಉದ್ಯೋಗ ನಷ್ಟ ಮಾಡಿದ್ದು ಬಿಜೆಪಿಯಾ ಸಾಧನೆಯಾ ಎಂದು ಅವರು ಪ್ರಶ್ನಿಸಿದರು.
ಉತ್ತರಾಖಂಡದ ಶಾಸಕ ಭುವನ್, ನಾಗಪುರ ಶಾಸಕ ಸುನೀಲ್ ಕೇದಾರ್, ಎಐಸಿಸಿ ಮಹಿಳಾ ಕಾಂಗ್ರೆಸ್‌ನ ಶಿಬಾ ರಾಮಚಂದ್ರನ್, ಮುಖಂಡರಾದ ಬಿ. ಇಬ್ರಾಹಿಂ, ಅಭಯಚಂದ್ರ, ಶಾಲೆಟ್ ಪಿಂಟೋ, ಶಾಹುಲ್ ಹಮೀದ್, ನವೀನ್ ಡಿ’ಸೋಜಾ, ಪದ್ಮರಾಜ್ ಆರ್., ಮಮತಾ ಗಟ್ಟಿ, ಸುರೇಶ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಸ್ತಾವಿಸಿದರು. ಮಾಜಿ ಸದಸ್ಯ ಐವನ್ ಡಿ’ಸೋಜಾ ವಂದಿಸಿದರು.
ಅದಾನಿ ಆಸ್ತಿ ಏರಿಕೆ ಯಾವ ಜಾದೂ?
2014ರಲ್ಲಿ 50 ಸಾವಿರ ಕೋಟಿ ರೂ. ಇದ್ದ ಅದಾನಿ ಸಂಪತ್ತು 2022ರಲ್ಲಿ 2 ಲಕ್ಷ ಕೋ.ಗೆ ಏರಿಕೆಯಾಗಿದೆ.
ಅನಂತರದ ಎರಡೂವರೆ ವಷಗಳಲ್ಲಿ ಅದು 12 ಲಕ್ಷ ಕೋ.ರೂ.ಗೆ ಏರಿದೆ. ಇದು ಯಾವ ಜಾದೂ ಎಂದು ಪ್ರಶ್ನಿಸಿದ ಖರ್ಗೆ, ಈ ರೀತಿ ಹಣ ಮಾಡುವ ವಿಧಾನವನ್ನು ಜನರಿಗೂ ತಿಳಿಸಿಕೊಟ್ಟರೆ ಉದ್ಧಾರವಾಗುತ್ತಾರೆ. ಉಚಿತ ಗ್ಯಾಸ್ ನೀಡುವ ಅಗತ್ಯವೇ ಇರದು ಎಂದು ಲೇವಡಿ ಮಾಡಿದರು.