Advertisement

ದಲಿತನಿಗೆ ಮಲಬಳಿದ ಪ್ರಕರಣ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

10:07 PM Jul 24, 2023 | Team Udayavani |

ಭೋಪಾಲ್‌: ಬಿಜೆಪಿ ಆಡಳಿತಾರೂಢ ಮಧ್ಯಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ವರದಿಯಾಗುತ್ತಲೇ ಇರುವುದರ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರ ಸಬ್‌-ಕಾ ಸಾಥ್‌ ಸಬ್‌-ಕಾ ವಿಕಾಸ್‌ ಘೋಷಣೆ ಬರೀ ಪ್ರಚಾರವಾಗುಳಿದಿದೆ ಎಂದು ಟೀಕಿಸಿದ್ದಾರೆ.

Advertisement

ಇತ್ತೀಚೆಗಷ್ಟೇ ದಲಿತ ಸಮುದಾಯದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ, ಥಳಿತ ಸೇರಿದಂತೆ ಅನೇಕ ಪ್ರಕರಣಗಳು ವರದಿಯಾಗಿದ್ದವು. ಆ ಬೆನ್ನಲ್ಲೇ, ಛತ್ತರ್‌ಪುರದಲ್ಲಿ ದಲಿತ ವ್ಯಕ್ತಿಯೊಬ್ಬರು ಅಕಸ್ಮಾತ್‌ ಆಗಿ ಗ್ರೀಸ್‌ ಮೆತ್ತಿದ ಕೈನಲ್ಲಿ ಪತ್ರವೊಂದನ್ನು ಮುಟ್ಟಿದ್ದಕ್ಕಾಗಿ, ಒಬಿಸಿ ಸಮುದಾಯದ ವ್ಯಕ್ತಿಯು, ದಲಿತ ವ್ಯಕ್ತಿಗೆ ಮನುಷ್ಯನ ಮಲವನ್ನು ಮೆತ್ತಿರುವ ಘಟನೆ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಖರ್ಗೆ ಟ್ವೀಟ್‌ ಮಾಡಿದ್ದಾರೆ. ” 2021ರ ಎನ್‌ಸಿಆರ್‌ಬಿ ವರದಿಗಳ ಪ್ರಕಾರ ದಲಿತರ ವಿರುದ್ಧದ ದೌರ್ಜನ್ಯಗಳು ಮಧ್ಯಪ್ರದೇಶದಲ್ಲಿ ಹೆಚ್ಚಾಗಿವೆ. ದಿನವೊಂದಕ್ಕೆ 7ಕ್ಕೂ ಅಧಿಕ ಅಪರಾಧಗಳು ವರದಿಯಾಗುತ್ತಿದೆ. ನಮ್ಮ ದಲಿತರು, ಬುಡಕಟ್ಟು ಜನರು ಹಾಗೂ ಹಿಂದುಳಿದವರು ಮಧ್ಯಪ್ರದೇಶದಲ್ಲಿ ದಿನವೂ ಅವಮಾನ ಅನುಭವಿಸುತ್ತಿದ್ದಾರೆ. ಬಿಜೆಪಿಯ ಧ್ಯೇಯವಾಕ್ಯ ಬರೀ ಜಾಹಿರಾತಿಗೆ ಸೀಮಿತವಾಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next