ಬೆಂಗಳೂರು:ದೇಶದಲ್ಲಿ ಪ್ರಥಮ ದಲಿತ ಮುಖ್ಯಮಂತ್ರಿ ಚೆನ್ನಿಯವರ ಸರ್ಕಾರ ಕೆಳಗಿಳಿಸೋಕೆ ಬಿಜೆಪಿಯವರು ಭದ್ರತಾ ಲೋಪದ ಜವಾಬ್ದಾರಿಯನ್ನು ಕಟ್ಟಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ ಎಂದು ಮಾಡ್ತಿದ್ದಾರೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಪಂಜಾಬ್ ರ್ಯಾಲಿಗೆ ತಡೆ ವಿಚಾರದಲ್ಲಿ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ನೀಡಲಾಗ್ತಿದೆ. ಸರ್ಕಾರ ಹಾಗೂ ಬಿಜೆಪಿ ವಕ್ತಾರರು ಬಾಯಿಗೆ ಬಂದಂತೆ ಹೇಳಿಕೆ ನೀಡ್ತಿದ್ದಾರೆ. ಪಂಜಾಬ್ ಸರ್ಕಾರದ ಮೇಲೆ ಗೂಬೆ ಕೂರಿಸೋಕೆ ಹೊರಟಿದ್ದಾರೆ ಎಂದು ಆರೋಪಿಸಿದರು.
ಪಂಜಾಬ್ ನಲ್ಲಿ ದಲಿತ ಮುಖ್ಯಮಂತ್ರಿ ಇದ್ದಾರೆ. ದೇಶದಲ್ಲಿ ಪ್ರಥಮ ದಲಿತ ಮುಖ್ಯಮಂತ್ರಿ ಸಿಎಂ ಚೆನ್ನಿಯವರು ಸರಳ,ಮೃದುಭಾಷಿ.ಅಂತ ವ್ಯಕ್ತಿ ಮೇಲೆ ಆರೋಪ ಮಾಡ್ತಿದ್ದಾರೆ. ಪಂಜಾಬ್ ಸರ್ಕಾರ ಕೆಳಗಿಳಿಸೋಕೆ ಬಿಜೆಪಿಯವರು ಯೋಜನೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಅವರ ಅಪೇಕ್ಷೆಯಂತೆ ರ್ಯಾಲಿಗೆ ಜನ ಸೇರಿಲ್ಲ. 70 ಸಾವಿರ ಜನ ಸೇರ್ತಾರೆಂಬ ನಿರೀಕ್ಷೆ ಅವರಿಗಿತ್ತು. ಆದರೆ ಅಲ್ಲಿ ಸೇರಿದ್ದು ಕೇವಲ ೭೦೦ ಜನ ಮಾತ್ರ. ಪೊಲೀಸರೇ ನಾಲ್ಕೈದು ಸಾವಿರ ಜನ ಇದ್ದರು. ಹೀಗಾಗಿ ಅವರೇ ರದ್ಧು ಮಾಡೋಕೆ ಹೊರಟಿದ್ದಾರೆ. ಅದಕ್ಕೆ ಕಾರಣಬೇಕಲ್ಲ ಅದಕ್ಕೆ ಈ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿಗೆ ಅತಿಹೆಚ್ಚಿನ ಸೆಕ್ಯೂರಿಟಿ ಇರುತ್ತದೆ. ನೆಹರು,ಇಂದಿರಾ,ರಾಜೀವ್ ಗೆ ಇಷ್ಟು ಸೆಕ್ಯೂರಿಟಿ ಇರಲಿಲ್ಲ. ಈಗ ಮೋದಿಯವರಿಗೆ 10 ಪಟ್ಟು ಸೆಕ್ಯೂರಿಟಿ ಇದೆ. ಉತ್ತಮ ಉಪಕರಣಗಳು ಲಭ್ಯವಿವೆ. ಆದರೂ ಪಂಜಾಬ್ ಸಿಎಂ ಮೇಲೆ ಗೂಬೆ ಕೂರಿಸ್ತಾರೆ ಎಂದು ಆರೋಪಿಸಿದರು.
ಪ್ರಧಾನಿ ಸೆಕ್ಯೂರಿಟಿ ಪೆಲ್ಯೂರ್ ಆಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಪಂಜಾಬ್ ಸಿಎಂ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ಕಮಿಟಿ ಮಾಡಿದ್ದಾರೆ.ಮೂರು ದಿನದಲ್ಲಿ ವರದಿ ಕೊಡ್ತಾರೆ .ಪ್ರಚಾರಕ್ಕಾಗಿ ಈ ರೀತಿ ಮಾಡಿದರೆ ಇದು ಪಂಜಾಬ್ ಜನತೆಗೆ ಅನ್ಯಾಯ ಮಾಡಿದಂತೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.