ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅವರು ನಾಯಕತ್ವ ತ್ಯಜಿಸಬೇಕು ಎಂದು ಮಾಜಿ ನಾಯಕ ಶೋಯೆಬ್ ಮಲಿಕ್ ಹೇಳಿದ್ದಾರೆ.
ಅಹಮದಾಬಾದ್ ನಲ್ಲಿ ಭಾರತದ ವಿರುದ್ಧದ ವಿಶ್ವಕಪ್ ಪಂದ್ಯದ ಸೋಲಿನ ಬಳಿಕ ಮಲಿಕ್ ಅವರು ಈ ಅಭಿಪ್ರಾಯ ಪಟ್ಟಿದ್ದಾರೆ.
ಮಲಿಕ್ ಅವರು ನಾಯಕನಾಗಿ ಸೃಜನಾತ್ಮಕವಾಗಿ ಯೋಚಿಸುವ ಬಾಬರ್ ಅಜಂ ಅವರ ಸಾಮರ್ಥ್ಯವನ್ನು ಸಾರ್ವಜನಿಕವಾಗಿ ಪ್ರಶ್ನಿಸಿದರು. ಬಾಬರ್ ಅಜಂ ನಾಯಕನಾಗಿ ವಿಶೇಷವಾಗಿ ಯೋಚಿಸುತ್ತಿಲ್ಲ. ನಾಯಕತ್ವದಲ್ಲಿ ಯಾವುದೇ ಸುಧಾರಣೆ ಬಂದಿಲ್ಲ. ಅವರು ಜವಾಬ್ದಾರಿಯಿಂದ ಕೆಳಕ್ಕಿಳಿಯಬೇಕು ಎಂದು ಮಲಿಕ್ ಹೇಳಿದರು.
“ಬಾಬರ್ ಆಜಂ ನಾಯಕತ್ವ ತೊರೆಯಬೇಕು ಎಂದು ನಾನು ಈ ಹಿಂದೆಯೂ ಅಭಿಪ್ರಾಯ ನೀಡಿದ್ದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಬಾಬರ್ ನಾಯಕನಾಗಿ ಔಟ್ ಆಫ್ ದಿ ಬಾಕ್ಸ್ ಯೋಚಿಸುವುದಿಲ್ಲ, ಅವರು ನಾಯಕತ್ವವನ್ನು ಮಾಡುತ್ತಿದ್ದಾರೆ, ಆದರೆ ಸುಧಾರಣೆ ಬರುತ್ತಿಲ್ಲ. ಒಬ್ಬ ಆಟಗಾರನಾಗಿ ಪಾಕಿಸ್ತಾನಕ್ಕೆ ಅದ್ಭುತ ಕೊಡುಗೆ ನೀಡಬಹುದು’ ಎಂದಿದ್ದಾರೆ.
ಇದನ್ನೂ ಓದಿ:Kissing scenes ಮಾಡಲು ಹೆಚ್ಚಿನ ಸಂಭಾವನೆ ಪಡೆಯುತ್ತಾರಾ ಕಿರಿಕ್ ಬೆಡಗಿ ರಶ್ಮಿಕಾ?
ಭಾರತದ ವಿರುದ್ಧದ ಪಂದ್ಯದ ಮೊದಲು, ಬಾಬರ್ ಅವರು ಭಾರತ ವಿರುದ್ಧದ ಒಂದು ವಿಶ್ವಕಪ್ ಪಂದ್ಯದ ಫಲಿತಾಂಶದಿಂದ ತನ್ನ ನಾಯಕತ್ವದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಮಾತನ್ನು ತಳ್ಳಿಹಾಕಿದ್ದರು. “ಈ ಒಂದು ಪಂದ್ಯದ ಸೋಲಿನಿಂದ ನಾಯಕತ್ವದ ಹೋಗುತ್ತದೆ ಎಂಬ ಬಗ್ಗೆ ಯೋಚಿಸುವುದಿಲ್ಲ. ದೇವರು ನನಗಾಗಿ ಏನು ಬರೆದಿದ್ದಾರೋ ಅದು ನನಗೆ ಸಿಗುತ್ತದೆ ಅಷ್ಟೇ. ನಾನು ಒಂದು ಪಂದ್ಯದ ಕಾರಣದಿಂದ ನಾಯಕತ್ವ ಪಡೆಯಲಿಲ್ಲ, ಹಾಗೆ ಒಂದು ಪಂದ್ಯದ ಕಾರಣದಿಂದ ನಾಯಕತ್ವ ಕಳೆದುಕೊಳ್ಳುವುದಿಲ್ಲ’ ಎಂದಿದ್ದರು.