Advertisement
ಪರಿಷತ್ ಚುನಾವಣೆಗೆ ತಮ್ಮನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನನಗೆ ಅವಕಾಶ ನೀಡಿದ್ದಕ್ಕೆ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ ಸೇರಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು.
ಚೆನ್ನಾಗಿದ್ದಾರೆ ಗಂಡುಗಳು ಜಾಸ್ತಿ ಬರ್ತಾವೆ’ ಎಂದು ಚಟಾಕಿ ಹಾರಿಸಿದರು. “ಮುಖ್ಯಮಂತ್ರಿ ಸಿದ್ದರಾಮಯ್ಯ
ಜತೆ ಯಾವುದೇ ಮುನಿಸಿಲ್ಲ. ಅವರು ನನ್ನ ಹಳೆಯ ಸ್ನೇಹಿತರು. ಅವರು ಉಪ ಮುಖ್ಯಮಂತ್ರಿಯಾದಾಗಿದ್ದಕ್ಕಿಂತ
ಈಗ ಹೆಚ್ಚು ಜವಾಬ್ದಾರಿ ಅವರ ಮೇಲಿದೆ’ ಎಂದರು. “ನನಗೊಂದು ಜವಾಬ್ದಾರಿ ನೀಡಲಿ ಎನ್ನುವುದು ಜನರ ಅಭಿಪ್ರಾಯವಾಗಿತ್ತು. ಅದರಂತೆ ವಿಧಾನ ಪರಿಷತ್ತಿಗೆ ಅವಕಾಶ ಕಲ್ಪಿಸಿದ್ದಾರೆ. ಎರಡು ಹುದ್ದೆಯಲ್ಲಿ ಮುಂದುವರಿಯುವುದು ಬೇಡ ಎಂಬ ಕಾರಣಕ್ಕೆ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸೋಮವಾರ ಮೇಲ್ಮನೆ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ ‘ಎಂದು ತಿಳಿಸಿದರು.