ಮಧ್ಯಾಹ್ನ ವೈಖಾನಸಾಗಮ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಸಾವಿರಾರು ಭಕ್ತ ಸಮೂಹದ ನಡುವೆ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.
Advertisement
ರಾಜ್ಯದಲ್ಲಿ ಚಿಕ್ಕ ತಿರುಪತಿ ಎಂದೇ ಇತಿಹಾಸ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ ಅಮರಗಿರಿ ಮಾಲೇಕಲ್ ತಿರುಪತಿಯ ಜಾತ್ರಾ ಮಹೋತ್ಸವವು ಪ್ರತಿವರ್ಷ ಆಷಾಢ ಶುದ್ಧ ಪಂಚಮಿಯಂದು ಧ್ವಜಾರೋಹಣ ಮತ್ತು ಅಂಕುರಾರ್ಪಣೆಯಿಂದ ಪ್ರಾರಂಭವಾಗಿ ದ್ವಾದಶಿಯ ದಿನದಂದು ಬೆಳಗ್ಗೆ ಮೂಲ ಸನ್ನಿಧಿಯ ಶ್ರೀ ಗೋವಿಂದರಾಜಸ್ವಾಮಿಯವರಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಲಕ್ಷ್ಮೀವೆಂಕಟರಮಣಸ್ವಾಮಿ ಉತ್ಸವಮೂರ್ತಿಗೆ ಪ್ರಾಕಾರೋತ್ಸವ, ಸೂರ್ಯಮಂಡಲೋತ್ಸವ, ರಥ ಮಂಟಪ ಸೇವೆ,
Related Articles
Advertisement
ನವ ದಂಪತಿಗಳಿಂದ ದರ್ಶನ: ಜಾತ್ರಾಗೆ ಆಗಮಿಸಿದ್ದ ಭಕ್ತರೂ ಅದರಲ್ಲೂ ನವದಂಪತಿಗಳು ಕಡಿದಾದ 1,250 ಮೆಟ್ಟಿಲುಳ್ಳ ಮಾಲೇಕಲ್ ತಿರುಪತಿ ಬೆಟ್ಟವನ್ನೇರಿ ಅಲ್ಲಿನ ಶ್ರೀನಿವಾಸ ಮತ್ತು ಪದ್ಮಾವತಿ ಅಮ್ಮ ನವರ ದರ್ಶನ ಭಾಗ್ಯವನ್ನು ಪಡೆದರೆ, ಬೆಟ್ಟವನ್ನು ಹತ್ತಲಾರದ ಭಕ್ತವೃಂದ ತಪ್ಪಲಿನಲ್ಲಿರುವ ಗೋವಿಂದರಾಜಸ್ವಾಮಿ ಮತ್ತು ಲಕ್ಷ್ಮೀದೇವಿ ಅಮ್ಮನವರ ದರ್ಶನ ಭಾಗ್ಯವನ್ನು ಗಂಟೆ ಗಟ್ಟಲೆ ಸಮಯ ಸರದಿಯ ಸಾಲಿನಲ್ಲಿ ನಿಂತು ಪಡೆದು ಪುನೀತರಾದರು.
ಗಣ್ಯರ ಉಪಸ್ಥಿತಿ: ಜಾತ್ರಾಮಹೋತ್ಸವದಲ್ಲಿ ಉಪಾಧ್ಯಕ್ಷ ತಹಶೀಲ್ದಾರ್ ಸಂತೋಷ್ ಕುಮಾರ್, ಡಿವೈಎಸ್‌ಪಿ ಸದಾನಂದ ತಿಪ್ಪಣ್ಣನವರ್, ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರುಣ್ ಕುಮಾರ್,ಉತ್ಸವ ಸಮಿತಿ ಅಧ್ಯಕ್ಷ ಟಿ.ಎ.ನಾಗರಾಜು, ಸದಸ್ಯರಾದ ವೆಂಕಟೇಶ್‌ಬಾಬು, ಎನ್.ಸಿ.ಗೋವಿಂದರಾಜು, ಟಿ.ಆರ್.ಚಂದ್ರು, ಪರಮಶಿವಯ್ಯ, ರಂಗರಾಜ್, ವಿಶ್ವನಾಥ್, ನಗರಸಭಾ ಸದಸ್ಯರು, ತಾ.ಪಂ. ಸದಸ್ಯರು, ಸರ್ಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಾಮೂಹಿಕ ಅನ್ನ ಸಂತರ್ಪಣೆ: ಸಾಮೂಹಿಕ ಅನ್ನಸಂತರ್ಪಣೆಯನ್ನು ದೇವಾಂಗ ಸಮಾಜದವತಿಯಿಂದ ಭಕ್ತಾದಿಗಳಿಗೆ ಎರ್ಪಡಿಸಲಾಗಿತ್ತು, ಬೆಟ್ಟದ ತಪ್ಪಲಿನಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಸಹಸ್ರಾರು ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪ್ರಸಾದದ ವ್ಯವಸ್ಥೆಯನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದರು.
ಬಸ್ಸಿಲ್ಲದೇ ಪರದಾಟ: ಪ್ರತಿವರ್ಷದ ಜಾತ್ರಾಮಹೋತ್ಸವದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಬೆಳಗಿನಿಂದ ರಾತ್ರಿವರೆಗೂ ತುಂಬಾ ಅಚ್ಚುಕಟ್ಟಿನಿಂದ ಮಾಡುತ್ತಿದ್ದರು.
ಆದರೆ ಈ ವರ್ಷ ದೇವಾಲಯದ ಹಿಂಭಾಗದಲ್ಲಿ ಬಸ್ ನಿಲ್ದಾಣಕ್ಕೆ ದೇವಾಲಯ ಆಡಳಿತ ಮಂಡಳಿ ಅವಕಾಶ ಕಲ್ಪಿಸದ ಕಾರಣ ದೇವರ ದರ್ಶನ ಪಡೆದು ನಗರಕ್ಕೆ ವಾಪಸಾಗುವ ಭಕ್ತಾದಿಗಳಿಗೆ ಬಸ್ ಸೌಲಭ್ಯ ದೊರೆಯದೇ ತುಂಬಾ ಅವ್ಯವಸ್ಥೆಯಾಗಿದ್ದು, ಆಟೋ ಚಾಲಕರಿಗೆ ಒಳ್ಳೇಯ ವರದಾನವಾಯಿತು. ಪೊಲೀಸರು ಬೆಟ್ಟದ ಮೇಲೆ ಮತ್ತು ಜಾತ್ರಾ ಮಹೋತ್ಸವದ ಸೂಕ್ಷ್ಮಸ್ಥಳಗಳಲ್ಲಿ ಭಕ್ತಾದಿಗಳಿಗೆ ಬಿಗಿ ಬಂದೊಬಸ್ತ್ ಏರ್ಪಡಿಸಲಾಗಿತ್ತು.