Advertisement
“ರಸಋಷಿ’ ಕುವೆಂಪು ವಿರಚಿತ “ಮಲೆಗಳಲ್ಲಿ ಮದುಮಗಳು’ ಕಾದಂಬರಿಗೆ ಕೆ.ವೈ. ನಾರಾಯಣ ಸ್ವಾಮಿ ಅವರ ರಂಗರೂಪಕ್ಕೆ ನೀಡಿದ್ದು, ಸಿ. ಬಸವಲಿಂಗಯ್ಯ ನಿರ್ದೇಶನ ಮಾಡಿದ್ದಾರೆ. ನಾಯಿಗುತ್ತಿ, ಪೀಂಚಲು ಪಾತ್ರಗಳು ಕೊನೆಯ ತನಕವೂ ಪ್ರೇಕ್ಷಕನನ್ನು ಸೆಳೆಯುತ್ತಾ, ದಟ್ಟ ಕಾಡಿನಲ್ಲಿ ಮನಸ್ಸನ್ನು ಅಲೆದಾಡಿಸುತ್ತವೆ. ಅಂದಹಾಗೆ, ಈ ನಾಟಕವು 3ನೇ ಅವತರಿಣಿಕೆಯಲ್ಲಿ ಬೃಹತ್ ಪ್ರದರ್ಶನ ಕಾಣುತ್ತಿದ್ದು, 5 ರಂಗವೇದಿಕೆಯಲ್ಲಿ ಪ್ರಯೋಗಗೊಳ್ಳಲಿದೆ. ಹಂಸಲೇಖ ಅವರು ರಚಿಸುವ ರಂಗಗೀತೆಗಳ ಮಾಧುರ್ಯಕ್ಕೆ ಮನಸೋಲುವುದು ನಿಶ್ಚಿತ. ಮುಂಗಡ ಬುಕಿಂಗ್‌ಗಾಗಿ ಬುಕ್ ಮೈ ಶೋ ಜಾಲತಾಣಕ್ಕೆ ಭೇಟಿ ನೀಡಬಹುದು.
ಎಲ್ಲಿ?: ಕಲಾಗ್ರಾಮ, ಮಲ್ಲತ್ತಹಳ್ಳಿ
ಪ್ರವೇಶ ದರ: 249 ರೂ.