Advertisement

ಮಳೆಬಿಲ್ಲು ಕಾರ್ಯಕ್ರಮ ಮಕ್ಕಳ ಕಲಿಕೆಗೆ ಸಹಕಾರಿ

01:20 PM May 25, 2022 | Team Udayavani |

ಅಮೀನಗಡ: ಮಕ್ಕಳಲ್ಲಿನ ಸೃಜನಶೀಲ ಸಾಮರ್ಥ್ಯ ವೃದ್ಧಿಸುವ ಉದ್ಧೇಶದಿಂದ ಸರ್ಕಾರ ಜಾರಿಗೊಳಿಸಿದ ಮಳೆಬಿಲ್ಲು ಕಾರ್ಯಕ್ರಮ ಕಲಿಕೆಗೆ ಸಹಕಾರಿಯಾಗಿದೆ.

Advertisement

ಮುರಡಿ ಗ್ರಾಮದ ಹಾಲಿನ ಕೇಂದ್ರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಮಳೆಬಿಲ್ಲು ಕಾರ್ಯಕ್ರಮದಡಿಯಲ್ಲಿ ಆಟಿಕೆ ತಯಾರಿಕೆ ಚಟುವಟಿಕೆ ನಿರ್ವಹಿಸಿ ಸಂಭ್ರಮಿಸಿದರು.

ಶಿಕ್ಷಕಿ ಸಾವಿತ್ರಿ ಮಾಶ್ಯಾಳ ಅವರು ಮಣ್ಣಿನಿಂದ ಎಲೆ, ಚಮಚ, ಮೊಬೈಲ್‌ ಫೋನ್‌, ಮಡಿಕೆ-ಕುಡಿಕೆ, ದೋಸೆ ಹಂಚು, ಅಡುಗೆ ಸಾಮಗ್ರಿ, ಕುರ್ಚಿ, ಟೇಬಲ್‌, ತೊಟ್ಟಿಲು, ಬಸವ, ಗಣೇಶ ಮೂರ್ತಿ ತಯಾರಿಸಲು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಮಕ್ಕಳು ಲವಲವಿಕೆಯಿಂದ ಭಾಗವಹಿಸಿ ಸೃಜನಶೀಲ ಚಟುವಟಿಕೆ ನಿರ್ವಹಿಸಿದರು.

ಏನಿದು ಮಳೆಬಿಲ್ಲು? 2022-23ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರ ಶಾಲೆಯಲ್ಲಿ ಮಳೆಬಿಲ್ಲು ಕಾರ್ಯಕ್ರಮ ಜಾರಿಗೆ ತಂದಿದೆ. ಕಾರ್ಯಕ್ರಮವೂ ಮಗುವಿಗೆ ಕೊಠಡಿಯ ಅನುಭವ ಕೊಡದೆ ಮುಕ್ತವಾಗಿ ಒಳಗೊಳ್ಳುವ, ತಾನು ತನ್ನಂತಿರುವ, ಸಂಭ್ರಮಿಸುವ ತನ್ನ ಯೋಚನೆ ಮತ್ತು ಯೋಜನೆಗಳಿಗೆ ಯಾವ ಅಡಚಣೆ ಇಲ್ಲದೇ ತಾನು ಎಲ್ಲವನ್ನು ಮಾಡಬಲ್ಲೇ, ಎಲ್ಲವನ್ನು ನೋಡಬಲ್ಲೇ ಮತ್ತು ಎಲ್ಲವನ್ನು ಅನುಭವಿಸಬಲ್ಲೆ ಎಂಬ ವಾತಾವರಣ ಸೃಷ್ಟಿಯಾಗಬೇಕು. ಮಕ್ಕಳ ಅಭಿವ್ಯಕ್ತಿಗೆ ಹೆಚ್ಚು ಅವಕಾಶ ಸಿಗಲಿ ಎಂಬ ದೃಷ್ಟಿಕೋನದಿಂದ ಸರ್ಕಾರ ಈ ಕಾರ್ಯಕ್ರಮ ಜಾರಿಗೆ ತಂದಿದೆ.

ಮಕ್ಕಳಲ್ಲಿನ ಸೃಜನಶೀಲ ಸಾಮರ್ಥ್ಯವನ್ನು ವೃದ್ಧಿಸುವ ಕಲಾ ಸಮ್ಮಿಳಿತ ಯೋಜನೆಯೇ ಮಳೆಬಿಲ್ಲು ಕಾರ್ಯಕ್ರಮದ ಉದ್ದೇಶವಾಗಿದೆ. ಸರ್ಕಾರ ಶಾಲೆ ಆರಂಭದಿಂದ ಎರಡು ವಾರಗಳ ಕಾಲ ಮೇ 30ರವರೆಗೆ ಮಕ್ಕಳ ಹಬ್ಬದ ರೀತಿ ಬೋಧನಾ ಪೂರ್ವ ಚಟುವಟಿಕೆಯಾಗಿ ಜಾರಿಯಲ್ಲಿರುವ ಕಾರ್ಯಕ್ರಮ. ಮಕ್ಕಳ ಅಭಿರುಚಿ, ಆಸಕ್ತಿಗೆ ತಕ್ಕಂತೆ ಮಗು ಕೇಂದ್ರಿತ ವಿವಿಧ ಚಟುವಟಿಕೆ ಆಧಾರಿತ ಕಾರ್ಯಕ್ರಮ ಮಳೆಬಿಲ್ಲು. ಇದರಲ್ಲಿ ಮಕ್ಕಳು ದಿನಕ್ಕೊಂದು ಚಟುವಟಿಕೆ ನಿರ್ವಹಿಸುವುದು ಶಿಕ್ಷಕರು ಅದಕ್ಕೆ ಅನುಕೂಲ ಕಲ್ಪಿಸುವುದು ಕಡ್ಡಾಯ.

Advertisement

ದಿನಾಲೂ ಒಂದೊಂದು ವಿನೂತನ ಚಟುವಟಿಗಳಲ್ಲಿ ಮಕ್ಕಳು ಭಾಗವಹಿಸುತ್ತಿರುವುದರಿಂದ ಅವರು ಶಾಲೆಯತ್ತ ಆಕರ್ಷಿತರಾಗಿದ್ದಾರೆ. ನಾವು ನೀಡಿದ ಚಟುವಟಿಕೆಗೆ ನಮ್ಮ ನಿರೀಕ್ಷೆ ಮೀರಿ ಮಕ್ಕಳು ಸ್ಪಂದಿಸುತ್ತಿದ್ದಾರೆ. ಮಕ್ಕಳ ಹಾಜರಾತಿ ಹೆಚ್ಚಾಗಿದೆ. ಮಳೆಬಿಲ್ಲು ಮಕ್ಕಳ ಸೃಜನಶೀಲತೆಯ ಉತ್ತೇಜನಕ್ಕೆ ಇದು ಮಾದರಿ ಯೋಜನೆಯಾಗಿದೆ.  –ಸಾವಿತ್ರಿ ಮಾಶ್ಯಾಳ, ಶಿಕ್ಷಕಿ

ಮೊದಲು ಶಾಲೆ ಆರಂಭಗೊಂಡಾಗ ಓದಲು, ಬರೆಯಲು ಕಲಿಸುತ್ತಿದ್ದರು. ಈ ವರ್ಷ ಆಟಗಿ ಸಾಮಗ್ರಿ ಮಾಡಲು, ಚಿತ್ರ ಬರೆಯಲು, ನಾಟಕ ಮಾಡಲು ಕಲಿಸುತ್ತಿದ್ದಾರೆ. ನಮಗೆ ಬಹಳ ಖುಷಿಯಾಗಿದೆ. –ಕಾವೇರಿ ಭಾವಿ, 5ನೇ ತರಗತಿ

ನಾವು ಶಾಲೆಯಲ್ಲಿ ಹಾಳೆಯಿಂದ ಕ್ಯಾಪ್‌, ಏರೋಪ್ಲೇನ್‌, ಕ್ಯಾಮೆರಾ, ಹಡಗು ಎಲ್ಲ ಮಾಡಿದ್ದು ನೋಡಿ ನಮ್ಮ ತಮ್ಮ-ತಂಗೀನೂ ನಮ್ಮ ಶಾಲೆಗೆ ಬರುತ್ತೇವೆ ಎಂದು‌ ಹಠ ಮಾಡುತ್ತಿದ್ದಾರೆ. ನಮಗೆ ಪ್ರತಿ ದಿನ ತಪ್ಪದ ಶಾಲೆಗೆ ಬರುವಂತಾಗಿದೆ. ಬಹಳ ಖುಷಿಯಾಗಿದೆ. –ಶಾಂತಾ ವಾಲೀಕಾರ, 4ನೇ ತರಗತಿ           

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next