Advertisement

Kollegala;ಮಾಕಳಿ ಅರಣ್ಯದಲ್ಲಿ ಗಂಡಾನೆಗಳ ಕಾದಾಟ: ಒಂದು ಆನೆಯ ಮೃತ್ಯು

10:28 PM Sep 06, 2023 | Team Udayavani |

ಕೊಳ್ಳೇಗಾಲ: ಎರಡು ಗಂಡಾನೆಗಳ ನಡುವೆ ಪರಸ್ಪರ ಕಾದಾಟ ನಡೆದ ಪರಿಣಾಮ 18ರಿಂದ 20 ವರ್ಷ ವಯಸ್ಸಿನ ಆನೆಯೊಂದು ತಾಲೂಕಿನ ಜಾಗೇರಿ ಸಮೀಪದ ಮಾಕಳಿ ಅರಣ್ಯದಲ್ಲಿ ಬುಧವಾರ ಮೃತಪಟ್ಟಿದೆ.

Advertisement

ಕಳೆದ ಎರಡು ಮೂರು ದಿನಗಳಿಂದ ಆನೆಗಳ ಕೂಗಾಟ ಹೆಚ್ಚಾಗಿತ್ತು ಎಂದು ಸಮೀಪದ ಗ್ರಾಮಸ್ಥರು ಹೇಳುತ್ತಿದ್ದಾರೆ. ಆನೆಗಳ ಕಾದಾಟ ನಡೆದ ಪರಿಣಾಮ ಮೃತಪಟ್ಟ ಆನೆಯ ಹೊಟ್ಟೆ ಭಾಗಕ್ಕೆ ಮತ್ತು ಕತ್ತಿನ ಭಾಗಕ್ಕೆ ತೀವ್ರ ಗಾಯಗೊಂಡಿದೆ. ಹಾಗಾಗಿ ಮೃತಪಟ್ಟ ಆನೆ ರಕ್ತಸ್ರಾವದಿಂದ ಮೃತಪಟ್ಟಿದೆ ಎಂದು ಪಶುವೈದ್ಯ ಡಾ. ಶಿವಕುಮಾರ್ ತಿಳಿಸಿದ್ದಾರೆ.

ದೊಡ್ಡಮಾಕಳಿ ಅರಣ್ಯ ಪ್ರದೇಶದ ಸಿಬಂದಿಗಳು ಬೀಟ್ ಗೆ ಹೋಗಿದ್ದ ಸಂದರ್ಭದಲ್ಲಿ ಆನೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಆನೆ ಸತ್ತು ಒಂದು ದಿನ ಕಳೆದಿದೆ ಆದರೆ ಸಿಬಂದಿಗೆ ಮಾಹಿತಿ ತಿಳಿದಿರುವುದು ಬುಧವಾರ. ವಿಷಯ ತಿಳಿದ ತತ್ ಕ್ಷಣ ಸ್ಥಳಕ್ಕಾಗಮಿಸಿದ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ್ ಕುಮಾರ್, ಎ.ಸಿ.ಎಫ್ ಶಶಿಧರ್. ಆರ್.ಎಫ್.ಒ ಭರತ್ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಮರಣೋತ್ತರ ಪರೀಕ್ಷೆ ನಡೆದ ನಂತರ ಆನೆ ದಂತಗಳನ್ನು ಅರಣ್ಯ ಇಲಾಖೆಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ.ಆನೆ ದಂತ ಶೇಖರಣೆಯ ಬಳಿಕ ಆನೆ ಮೃತದೇಹವನ್ನು ಅರಣ್ಯದ ಪ್ರದೇಶದಲ್ಲಿ ಸಮಾದಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next