Advertisement
ಗಮನಿಸಬೇಕಾದ ಇನ್ನಿಷ್ಟು ಮಹತ್ವದ ವಿಷಯಗಳನ್ನು ನೋಡಲೇ ಬೇಕು. ಮೂಲಾ ನಕ್ಷತ್ರದಂಥ ನಕ್ಷತ್ರಗಳನ್ನು ಗಮನಿಸಿ ಲೆಕ್ಕಾಚಾರ ಹಾಕಿ ನೋಡಿದರೆ ಜಾತಕದ ಇತರ ಬಲಾಬಲಗಳ ಮೇಲಿಂದ ಉತ್ತಮ ಫಲಿತಾಂಶವನ್ನು ದಾಂಪತ್ಯಕ್ಕೆ ಹಾಗೂ ಕುಟುಂಬಕ್ಕೆ ಒದಗಿಸಿಕೊಡಬಲ್ಲವು. ಕೂಡದೇ ಇದ್ದರೆ ಅಶುಭವೇ ಕಟ್ಟಿಟ್ಟ ಬುತ್ತಿ ಎಂದು ಜನರು ಅಭಿಪ್ರಾಯಪಡುವ ಕುಜಶುಕ್ರ ಸಂಯೋಜನೆಗಳು ಅಪಾರವಾದ ಸೌಭಾಗ್ಯಗಳನ್ನು ಒದಗಿಸಬಲ್ಲವು. ಕುಜ, ದೋಷದ ಜಾತಕವನ್ನು ಸರಿಯಾದ ಸಂಯೋಜನೆಯೊಂದಿಗೆ ದೋಷವೇ ಮಾಯವಾಗುವ ಸಂಪನ್ನತೆಯತ್ತ ಹೊರಳಿಸಬಹುದು.
ಒಬ್ಬರು ದೂರದ ಗಂಗಾವತಿಯಿಂದ ಸಂಪರ್ಕಿಸಿ ಹೆಣ್ಣು ಗಂಡು ಅರಿತುಕೊಂಡು ಬಾಳಿದರೆ ಗ್ರಹಗಳ ಹಂಗೇಕೆ ಎಂದು ವ್ಯಂಗ್ಯದ ದನಿಯಲ್ಲಿ ಕೇಳಿದರು. ಆದರೆ ಪರಸ್ಪರರು ಅರಿತು ಬಾಳುವ ಚಾರ ಅಷ್ಟು ಸುಲಭವಾದದ್ದಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಪರಸ್ಪರ ಅರಿತು ಒಗ್ಗೂಡಿ ಹೆಜ್ಜೆ ಇಟ್ಟರೆ ಬಿಜೆಪಿ ಅವರಿಗೆ ಒಂದು ಲೆಕ್ಕವೇ ಅಲ್ಲ. ಆದರೆ ಅರಿಯಲು ಸಾಧ್ಯವಾಗದ ಪರಿಸ್ಥಿತಿ ಏಕೆ ಉಂಟಾಗಿದೆ?
ನಮಗೆ ನಮ್ಮ ಮೋರೆಯನ್ನು ದಿನವೂ ಪ್ರತಿದಿನ ನೋಡಿಕೊಂಡರೂ ಬೇಸರವಾಗಬಾರದು. ಯಾಕೆಂದರೆ ನಮ್ಮದು ನಮ್ಮದೇ ಮುಖ.ಬೇರ್ಪಡಿಸಲಾಗದು. ನೆರೆಮನೆಯವನ ಮೋರೆ ನೋಡಿದರೆ ಉರಿದು ಬೀಳುತ್ತೇವೆ ಯಾಕೆ? ಎಲ್ಲಾ ಕಡೆ ಎಂದಲ್ಲ ಎಲ್ಲೋ , ನೂರರಲ್ಲಿ ನಾಲ್ಕೈದು ನೆರೆಮನೆಯವರ ನಡುವಣ
ಈ ರೀತಿಯಲ್ಲೇ ತಂದೆ-ಮಗ, ತಾಯಿ ಮಗಳು, ಅಣ್ಣ ,ತಮ್ಮ, ಅಕ್ಕ, ತಂಗಿ, ಗೆಳೆಯ ಗೆಳತಿ ನಡುವೆಯೇ ಸಂಬಂಧ ಹದಗೆಟ್ಟು ಹೋಗುತ್ತದೆ. ಇನ್ನು ಗಂಡ ಹೆಂಡತಿಯ ನಡುವೆಯಂತೂ ಕೇಳುವುದೇ ಬೇಡ. ಹಾವು ಮುಂಗುಸಿ ಸಂಬಂಧ ಉಂಟಾದೀತು. ಇದಕ್ಕೆ ಪಶ್ಚಿಮ ದೇಶಗಳಲ್ಲಿ ಲಗ್ನದ ಸಂಬಂಧ ಸ್ವರ್ಗದಲ್ಲಿಯೇ ನಿಷ್ಕರ್ಷೆಗೊಳಿಸುವಂಥದ್ದು ಎಂಬ ಮಾತು ಬಂತು. ನಾವು ಭಾರತೀಯರು ಜನ್ಮ ಜನ್ಮಾಂತರದ ಅನುಬಂಧ, ಏಳೇಳು ಜನ್ಮದ ಬಂಧ ಎಂದು ಕರೆದೆವು. ಕಾರಣವೇನೆಂದರೆ ಎಷ್ಟೇ ಒತ್ತಡದಲ್ಲೂ ಗಂಡಹೆಂಡಿರ ಸಂಬಂಧ ಹಳಸಬಾರದೆಂದು. ಹಳಸಿದರೆ ಗಂಡಹೆಂಡತಿಯ ಜಗಳದಲ್ಲಿ ಕೂಸು ಬಡವಾಗುವ ಮನೆತನ, ಮನೆತನಗಳ ನಡುವೆ ಮನಃಶಾಂತಿಯೇ ಹಾಳಾಗುವ ಸಾಧ್ಯತೆ ಹೇರಳ. ಮನಸ್ಸು ಮನಸ್ಸು ಛಿದ್ರ ಛಿದ್ರ ಆಗಿಯೂ ಪೊಲೀಸು ಕೋರ್ಟ್, ಆಕ್ರೋಶ, ಜಗಳ ಹೊಡೆದಾಟ ಸವಾಲು ಪ್ರತಿ ಸವಾಲು ಈ ರಗಳೆ ವೈರಿಗೂ ಬೇಡ ಎಂದು ಸಂಬಂಧಿಸಿದವರ ಅಳಲು ಕೇಳಿದಾಗ ಅಯ್ಯೋ ಎನಿಸುತ್ತದೆ. ಎಲಿಜಿಬೆತ್ ಟೇಲರ್ ಮತ್ತು ಎಂಟು ಮದುವೆಗಳು
ಯಾಕೆ ಎಲಿಜಿಬೆತ್‌ಗೆ ಎಂಟು ಮದುವೆಗಳು ಸಾಧ್ಯವಾಯ್ತು? ವೈವಾಹಿಕ ವೈಫಲ್ಯಗಳೇಕೆ ಉಂಟಾಯ್ತು? ಮದುವೆ ಎನ್ನುವುದೇ ಒಂದು ಫ್ಯಾಷನ್ ಆಯೆ¤à ಆಕೆಗೆ? ಹಾಗಾದರೆ ವೈವಾಹಿಕ ಹೊಂದಾಣಿಕೆ ಯಾತಕ್ಕೆ ಸಾಧ್ಯವಾಗಲಿಲ್ಲ. ಈ ತಾರೆಯ ಜಾತಕವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕೇಂದ್ರಾಧಿಪತ್ಯ, ದೋಷ ಹೊಂದಿದ ಗುರುಗ್ರಹ ಮೇಲ್ನೋಟಕ್ಕೆ ಅತ್ಯುತ್ತಮ ಶಕ್ತಿ ಪಡೆದ ಎಲಿಜಿಬೆತ್ ಜಾತಕಕ್ಕೆ ಲಾಭಸ್ಥಾನವಾದ ಕರ್ಕಾಟಕದಲ್ಲಿದ್ದರೂ ಪೂರ್ಣ ಪ್ರಮಾಣದ ಉಚ್ಚತ್ವವನ್ನು ಪಡೆದಿರಲಿಲ್ಲ.
ಕೇಂದ್ರಾಧಿಪತ್ಯ ದೋಷ ನಿವಾರಣೆ ಆಗಲೇ ಇಲ್ಲ. ಹೀಗಾಗಿ ಮೇಲಿಂದ ಮೇಲೆ ಡೈವೊರ್ಸ್ ಸ್ಥಾನದ ಅಧಿಪತಿ ಪ್ರಬಲ ಶನಿ ಮಹಾರಾಜನಿಂದ ಗುರುವಿನ ಶಕ್ತಿಗೆ ಸಂಪೂರ್ಣ ಧಕ್ಕೆಯಾಗಿದೆ. ಶನೈಶ್ಚರನ ದೃಷ್ಟಿಯಿಂದ ದಾಂಪತ್ಯ ಸಿದ್ಧಿ ಸಾಧ್ಯವಾಗದು. ಅಷ್ಟಮದಲ್ಲಿ ಬುಧನ ಉಪಸ್ಥಿತಿ ಸೂರ್ಯನ ಉರಿಯಿಂದ ಅಸ್ತಂಗತ ದೋಷಕ್ಕೆ ಒಳಗಾಗಿದೆ. ಯಾವುದೇ ನಿರ್ಧಾರ ಅವಸರದ್ದೇ ಆಗಿರುತ್ತದೆ. ಬಾಳ ಸಂಗಾತಿಯ ಸ್ಥಾನದಲ್ಲೂ ಉತ್ಛನಾಗಿದ್ದರೂ, ಸಂಸಾರ ಸ್ಥಾನದ ಅಧಿಪತಿ ಶುಕ್ರ ಸರ್ಪ ದೋಷದಿಂದ ಬಸವಳಿದಿದೆ. ಶನೈಶ್ಚರನ ದೃಷ್ಟಿಯೂ ಸೇರಿ ಇನ್ನಷ್ಟು ಸವಕಳಿಯಾಗಿದೆ. ಕುಜ ದೋಷವೂ ಇದ್ದಿದ್ದರಿಂದ ಸುಖಸ್ಥಾನವಾದ ಧನುರ್ ರಾಶಿಗೆ ವಿಶೇಷವಾದ ವೈವಾಹಿಕ ಜೀವನವನ್ನು ಸಂವರ್ಧಿಸುವ ಬಲ ಇಲ್ಲದೇ ಹೋದದ್ದು ಸಫಲತೆಗೆ ಸೇರಿಸದ ವೈವಾಹಿಕ ಸಂಬಂಧಗಳನ್ನು ನಂತರ ಬೇರ್ಪಡಲಿಕ್ಕಾಗಿ ಕೋರ್ಟ್ ಅಲೆದಾಟಕ್ಕೆ ಕಾರಣವಾಯಿತು.
Related Articles
ಚತುರ್ಭಾಷಾ ನಟಿಯಾಗಿ ಹಿಂದಿ ಚಿತ್ರರಂಗದಲ್ಲಿ ಪ್ರಖ್ಯಾತಳಾದ ರೇಖಾ ಯಶಸ್ಸಿನ ತುತ್ತ ತುದಿಯಲ್ಲಿದ್ದಳು. ನಟಿ ರೇಖಾ ವೈವಾಹಿಕ ಜೀವನದಲ್ಲಿ ಸುಖವಾಗಿದ್ದಾಳೆ? ಎಂದು ಕೇಳಿದರೆ ಇಲ್ಲ ಎಂದೇ ಹೇಳಬೇಕು. ಬಾಳ ಸಂಗಾತಿ ಸ್ಥಾನದಲ್ಲಿ ಕೇತು ಎಬ್ಬಿಸಿದ ಬಿರುಗಾಳಿ ಅಸಾಮಾನ್ಯ.
ತಾನೀಗ ಸುಖೀ ಎಂದು ಕೊಂಡಾಗಲೇ ಗಂಡು ಅಸುರಕ್ಷತೆಗಳನ್ನು ನಿರ್ಮಿಸುತ್ತಲೋ ಇಷ್ಟೇನಾ ಮದುವೆ ಎಂದರೆ ಎಂಬ ಮನೋಸ್ಥೈರ್ಯವೇ ಛಿದ್ರಗೊಂಡ ಅನುಭವವೇ ಎದುರಾಗಿ ಬಂತು. ಸಣ್ಣ ಪ್ರಮಾಣದಲ್ಲಿ ಬಾಳ ಸಂಗಾತಿ ಸ್ಥಾನದ ಅಧಿಪತಿಗೆ ಶನೈಶ್ಚರನ ಕಾಟ ಜೊತೆಗೆ ಪರಿಪೂರ್ಣ ಕೇಂದ್ರಾಧಿಪತ್ಯ ದೋಷ ಸುಖ ಸ್ಥಾನಕ್ಕೆ ಸೂರ್ಯ ಶಕ್ತಿವಂತನಾಗಿ ಕಂಡಂತಿದ್ದರೂ ಸೂರ್ಯ ನೀಡುವ ಸುಖ ಬರಬೇಕಾದರೆ 72 ವರ್ಷ ವಯಸ್ಸಾಗಿರುತ್ತದೆ. 72 ವಯಸ್ಸಿನಲ್ಲಿ ಮದುವೆಯ ಬಂಧನ ದೊರಕಬಹುದೇ? ಒಟ್ಟಿನಲ್ಲಿ ಭಾಗ್ಯವಿದ್ದರೂ ಸುಖವಿಲ್ಲ. ರೇಖಾ ಒಂಟಿಯಾದಳು.
Advertisement
ತರುಣಿಯರ ಹೃದಯ ಕದ್ದ ದೇವಾನಂದ್ಯೋಗಕಾರಕ ಮರಣಸ್ಥಾನದ ಅಧಿಪತಿಯಾಗಿ ವೈವಾಹಿಕ ಜೀವನದ ಏರಿಳಿತಗಳು ಎದುರಾದ ಗೆಳತಿಯರು ಸುಂದರಿಯರು ಹೇಗೆ ದೇವಾನಂದರನ್ನು ನಿರಂತರ ತಲ್ಲಣದಲ್ಲಿಟ್ಟರೆಂಬುದನ್ನು ಅವರ ಆತ್ಮಚರಿತ್ರೆಯಾದ ಮೈ ರೊಮಾನ್ಸಿಂಗ್ ಡೇಸ್ ಪುಸ್ತಕದಲ್ಲಿ ಸುಸ್ಪಷ್ಟ. ಕುಜದೋಷ ಕುಜ ಮತ್ತು ಶುಕ್ರರ ಯುತಿಯೋಗ ಎದುರಾಗುವ ಬಾಳ ಸಂಗಾತಿಯ ವಿಷಯದಲ್ಲಿ ನಿರ್ಣಯಗಳು ತಂತಾನೆ ತತ್ತರಿಸಿ ಹೋಗುವ ವಿಚಾರವೆಲ್ಲ ಸಾಮಾನ್ಯವಾಗಿ ಹೋಗಿತ್ತು. ತನ್ನ ಮೊದಲ ಸಿನಿಮಾದ ನಾಯಕಿಯನ್ನು ತುಂಬಾ ಆರಾಧಿಸಿದ್ದನಾದರೂ ಅವಳ ಎಪ್ಪತ್ತರ ವಯಸ್ಸಿನಲ್ಲಿ ಎದುರಾದಾಗ ಅವಳನ್ನು ತಾನೇ ಗುರುತಿಸದೇ ಹೋಗಿದ್ದನಂತೆ. ಅಂದರೆ ವಯಸ್ಸು ಆಕರ್ಷಣೆಗಳು ಮಾತ್ರ ದೇವಾನಂದನ ಆಸಕ್ತಿಗಳಾಗಿದ್ದವೇ? ಹೌದು ಕುಜಶುಕ್ರರು ಇಂಥದೊಂದು ದೌರ್ಬಲ್ಯವನ್ನು ಇವರ ಜಾತಕದಲ್ಲಿ ಸೃಷ್ಟಿಸಿದ್ದಾರೆ. ಇನ್ನು ಅವರ 53ನೇ ವಯಸ್ಸಿನಲ್ಲಿ ಇವರಿಗಿಂತ 27 ವರ್ಷಗಳಷ್ಟು ಚಿಕ್ಕವಳಾದ ಜೀನತ್‌ಗೆ ಮನಸೋತಿದ್ದರು. ಆದರೆ ಆಕೆ ಅನಿರೀಕ್ಷಿತವಾಗಿ ಇವರಷ್ಟೇ ವಯಸ್ಸಿನ ರಾಜ್ ಕಪೂರ್ ಬಾಹು ಬಂಧನಕ್ಕೆ ಕಣ್ಣೆದುರೇ ಸಿಲುಕಿದಾಗ ಅಲ್ಲೇ ಜೀನತ್‌ನನ್ನು ದೇವಾನಂದ್ ಕೈಬಿಟ್ಟರು. ಆದರೆ ಒಂಟಿಯಾದಂತೆನಿಸಿ ಅತ್ತು ಬಿಕ್ಕಳಿಸಿದರಂತೆ. ಅಂದರೆ ಸುಖ ನೀಡಬೇಕಾದ ಶನೈಶ್ಚರ ಬಾಳ ಸಂಗಾತಿಯ ವಿಷಯದಲ್ಲಿ ಗಾಢತೆ ಉಂಟು ಮಾಡಬೇಕಿದ್ದ ಶುಕ್ರ ಇವರೊಟ್ಟಿಗೆ ಉರಿಪಿಂಡದಂತೆ ಉರಿದು ಶುಭಗ್ರಹಗಳನ್ನು ಸುಟ್ಟು ಸೂರ್ಯ ದೇವಾನಂದರ ಪ್ರೀತಿಯ ಜೀವನವಕ್ಕೆ ಖಳನಾಯಕನಾಗಿದ್ದ. ದೇವಾನಂದ್ ಬಾಳಸಂಗಾತಿಯ ವಿಷಯದಲ್ಲಿ ನಿರಂತರವಾಗಿ ತಲ್ಲಣಗಳನ್ನು ಎದುರಿಸಬೇಕಾಗಿ ಬಂದದ್ದು ಒಂದು ಪರ್ಯಾಸ. ಸಾವಿರ ತರುಣಿಯರ ಮನಗೆದ್ದಿದ್ದ ಸುಂದರಾಂಗನೂ ಒಂಟಿಯಾಗಿದ್ದನೇ? ಇದು ವಿಧಿ ವಿಪರ್ಯಾಸ. ಗ್ರಹಗಳು ನಡೆಸಿದ ದುಷ್ಟತನದ ಪರಮಾವಧಿ. ಅನಂತಶಾಸ್ತ್ರಿ