Advertisement
Related Articles
Advertisement
ಪಶ್ಚಿಮಘಟ್ಟ ಪ್ರದೇಶ, ದಕ್ಷಿಣಕ್ಕೆ ನೀಲಗಿರಿ, ಕೇರಳ, ಆಂಧ್ರ, ಅಸ್ಸಾಂ, ಫಿಲಿಫೈನ್ಸ್, ಅಮೆರಿಕಾಗಳಲ್ಲೂ ಇದರ ಪ್ರಬೇಧಗಳಿವೆ. ಆದರೆ ನಿಕೋಬಾರ್‌ನಲ್ಲಿರುವ ಉಪಜಾತಿ ಸ್ವಲ್ಪ ಬೇರೆಯಾಗಿದೆ. ಈ ಹಕ್ಕಿಗೆ ಗಾಬರಿಯಾದಾಗ ಈ ಜುಟ್ಟು ನಿಮಿರಿ- ನಿಲ್ಲುವುದು. ಕ್ವಾಕ್, ಕ್ವಾಕ್ ಎಂದು ಕೂಗುತ್ತಾ ಹಾರಿ, ಮರಗಳ ಅಥವಾ ಬಿದಿರು ಮೆಳೆಗಳಲ್ಲಿ ಮಾಯವಾಗುವುದು. ಇದು ಕುಳಿತಾಗ ಮುಂಭಾಗದಿಂದ ನೋಡಿದರೆ -ರೆಕ್ಕೆಯ ಪ್ರ„ಮರಿ ಗರಿಗಳ ಎರಡೂ ಅಂಚಿನಲ್ಲಿರುವ ಬಿಳಿ ಬಣ್ಣ- ಇದರ ಕಂದುಗೆಂಪು ರೆಕ್ಕೆ ಅಂಚಿನಲ್ಲಿ ಕಾಣುತ್ತದೆ. ಬಿಳಿ ಮತ್ತು ಕಪ್ಪು ರೇಖೆಯಿಂದ ಕೂಡಿದ ಇದರ ಕುತ್ತಿಗೆ, ಎದೆಯ ಮಧ್ಯ ಇರುವ ಚುಕ್ಕೆ ಕಾಣುತ್ತದೆ. ದೂರದಿಂದ ನೋಡಿದಾಗ ಇದು ಮರದ ಬಿರುಕಲು ಒಟ್ಟೆಯಂತೆ ಭಾಸವಾಗುವುದು. ಈ ಕೊಕ್ಕರೆ ಕುತ್ತಿಗೆಯನ್ನು ಉದ್ದಮಾಡಿ ಕುಳಿತಾಗ ಪರ್ಪಲ್ ಹೆರಾನದ ಬದನೆಕಾಯಿ ಬಣ್ಣದ ಕೊಕ್ಕರೆಯೋ ಎಂಬ ಭ್ರಮೆ ಮೂಡಿಬಿಡುತ್ತದೆ. ಕುತ್ತಿಗೆ ಭಾಗದಲ್ಲಿ ಗಾಳಿ ತುಂಬಿಕೊಂಡಾಗ ದೊಡ್ಡ ಚೀಲದಂತೆ ಕಾಣಿಸುತ್ತದೆ. ಕಾಡು, ಬಿದಿರು, ದೊಡ್ಡ ಮರಗಳಿರುವ ಜಾಗ ಇದಕ್ಕೆ ಪ್ರಿಯ. ಪ್ರಬುದ್ಧಾವಸ್ಥೆà ತಲುಪಿದ ಹಕ್ಕಿ ಮತ್ತು ಮರಿ-ಇನ್ನೂ ಪ್ರೌಢಾವಸ್ಥೆ ತಲುಪದ ಹಕ್ಕಿಯ ಬಣ್ಣದಲ್ಲಿ ಬದಲಾವಣೆ ಕಾಣಬಹುದು.
ಇತರೆ ಕೊಕ್ಕರೆಗಳಿಗೆ ಹೋಲಿಸಿದರೆ ಇದರ ಚುಂಚು ಚಿಕ್ಕದು. ಚಿಕ್ಕ ಹಕ್ಕಿಗಳ ಚುಂಚು ಗುಲಾಬಿ ಬಣ್ಣ ಇದ್ದರೆ -ಬೆಳೆದ ಹಕ್ಕಿಯ ಚುಂಚು ಕಂದುಗಪ್ಪಿನಿಂದ ಕೂಡಿರುತ್ತದೆ. ಇದು ಕೊಕ್ಕರೆಯಾದರೂ ನೀರ ಸಮೀಪದಲ್ಲಿ ಇರದೇ -ಸಮಶೀತೋಷ್ಣ ಮತ್ತು ದೊಡ್ಡ ಮರದ ಕಾಡಿನಲ್ಲೇ ಇರುವುದೇ ಹೆಚ್ಚು. ಇದು ಕೆಲವೊಮ್ಮೆ ನೆಲದ ಮೇಲೆ ಓಡಾಡಿ, ಎರೆಹುಳುಗಳನ್ನು ಎಲೆ ಇಲ್ಲವೇ, ಮಣ್ಣು ಕೆದಕಿ ಸಣ್ಣು ಪುಟ್ಟ ಹುಳುಗಳನ್ನು ಹಿಡಿಯುತ್ತದೆ. ಇದರ ಚಿಕ್ಕ ಚುಂಚು ಮತ್ತು ರೆಕ್ಕೆಯಲ್ಲಿರುವ ಬಿಳಿ ಬಣ್ಣ ಇದನ್ನು ಇತರ ಗುಪ್ಪಿಗಳಿಂದ ಪ್ರತ್ಯೇಕವಾಗಿ ಗುರುತಿಸಲು ಸಹಾಯಕವಾಗಿದೆ. ನೀರಿಗೆ ಹತ್ತಿರವಿರುವ ಕಾಡು, ಮರಗಳನ್ನೇ ಗೂಡು ಕಟ್ಟಲು ಆಯ್ಕೆ ಮಾಡಿಕೊಳ್ಳುತ್ತದೆ. ಮರದ ಟಿಸಿಲು ಇರುವ ಜಾಗ-ಭೂಮಿಗೆ ಸಮಾನಾಂತರವಾದ ಟೊಂಗೆಯಲ್ಲಿ-ಸುಮಾರು 5 ರಿಂದ 10 ಮೀ ಎತ್ತರದಲ್ಲಿ ಗೂಡು ಕಟ್ಟುತ್ತದೆ. ಜನ ನಡೆದಾಡುವ ದಾರಿಯ ಮೇಲ್ಬದಿಯಲ್ಲೂ ಇದು ಗೂಡು ಗಂಡು -ಹೆಣ್ಣು ಸೇರಿ ಗೂಡು ಕಟ್ಟುತ್ತದೆ. ಗೂಡು ಕಟ್ಟಿ ಮುಗಿಸಿದಾಗ ಮೊದಲ ಮೊಟ್ಟೆ ಇಡುವುದು ಸ್ವಲ್ಪ ಅಂತರದಲ್ಲಿ ಒಂದೊಂದೇ ಮೊಟ್ಟೆ ಇಡುವುದು. 43 ದಿನದಲ್ಲಿ ಮೊಟ್ಟೆ ಒಡೆದು ಮರಿಯಾಗುತ್ತದೆ. ಪೂರ್ಣ ಪ್ರಮಾಣದ ಹಕ್ಕಿಯಾಗಲು 2 ವರ್ಷವಾಗುತ್ತದೆ. ಪಿ. ವಿ. ಭಟ್ ಮೂರೂರು