Advertisement

ಅನ್ಯಧರ್ಮೀಯರ ವಿರುದ್ಧ ಹೇಳಿಕೆ: ವ್ಯಾಪಕ ಟೀಕೆಗೆ ಗುರಿಯಾದ ನಟ ಸುರೇಶ್ ಗೋಪಿ

08:29 PM Feb 20, 2023 | Team Udayavani |

ಎರ್ನಾಕುಲಂ: ಮಲಯಾಳಂ ನಟ ಹಾಗೂ ಬಿಜೆಪಿಯ ಮಾಜಿ ರಾಜ್ಯಸಭಾ ಸಂಸದ ಸುರೇಶ್ ಗೋಪಿ ಅವರು ಅನ್ಯಧರ್ಮೀಯರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ನೆಟಿಜನ್‌ಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

Advertisement

ಶಿವರಾತ್ರಿ ಆಚರಣೆಯ ನಿಮಿತ್ತ ಜಿಲ್ಲೆಯಲ್ಲಿ ನಡೆದ ದೇವಸ್ಥಾನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೋಪಿ, ಅನ್ಯಧರ್ಮೀಯರ ಸಂಪೂರ್ಣ ನಾಶಕ್ಕಾಗಿ ದೇವರನ್ನು ಪ್ರಾರ್ಥಿಸುವುದಾಗಿ ಹೇಳಿದ್ದರು ಮತ್ತು ಎಲ್ಲರೂ ಹಾಗೆಯೇ ಮಾಡಬೇಕೆಂದು ಒತ್ತಾಯಿಸಿದ್ದರು. ಅನ್ಯಧರ್ಮೀಯರಲ್ಲಿ ಯಾರೂ ಈ ಜಗತ್ತಿನಲ್ಲಿ ಸಂತೋಷ ಮತ್ತು ಶಾಂತಿಯುತ ಜೀವನವನ್ನು ಹೊಂದಿರಬಾರದು ಎಂದಿದ್ದರು.

“ನನ್ನ ದೇವರನ್ನು ಪ್ರೀತಿಸುವಾಗ, ನಾನು ಪ್ರಪಂಚದ ಎಲ್ಲ ಭಕ್ತರನ್ನು ಒಂದೇ ಸಮಯದಲ್ಲಿ ಪ್ರೀತಿಸುತ್ತೇನೆ, ನಂಬಿಕೆಯಿಲ್ಲದವರ ಮೇಲೆ ನನಗೆ ಪ್ರೀತಿ ಇಲ್ಲ ಎಂದು ಧೈರ್ಯದಿಂದ ಹೇಳುತ್ತೇನೆ. ಭಕ್ತರ ಹಕ್ಕುಗಳಿಗೆ ಧಕ್ಕೆ ತರಲು ಪ್ರಯತ್ನಿಸುವ ಯಾವುದೇ ಶಕ್ತಿಗಳನ್ನು ನಾನು ಸಹಿಸುವುದಿಲ್ಲ ಮತ್ತು ಅವರ ಸಂಪೂರ್ಣ ನಾಶಕ್ಕಾಗಿ ನಾನು ಗರ್ಭಗುಡಿಯ ಮುಂದೆ ಪ್ರಾರ್ಥಿಸುತ್ತೇನೆ. ಎಲ್ಲರೂ ಹಾಗೆ ಮಾಡಬೇಕು” ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.