Advertisement

5 ವರ್ಷಗಳ ನಂತರ ತವರಿಗೆ ಬಂದ ಮಲಾಲಾ

09:55 AM Mar 30, 2018 | Team Udayavani |

ಇಸ್ಲಾಮಾಬಾದ್‌: ಅತ್ಯಂತ ಕಿರಿಯ ವಯಸ್ಸಿನ ನೊಬೆಲ್‌ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ಝಾಯ್‌, ತನ್ನ ಮೇಲೆ ತಾಲಿಬಾನ್‌ ಉಗ್ರರ ದಾಳಿಯಾದ 5 ವರ್ಷಗಳ ಬಳಿಕ  ಪಾಕಿಸ್ತಾನಕ್ಕೆ ಆಗಮಿಸಿದ್ದಾರೆ. ಅವರಿಗೆ ಪಾಕಿಸ್ತಾನದಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ. 4 ದಿನಗಳ ಕಾಲ ಪಾಕ್‌ನಲ್ಲಿರುವ ಅವರಿಗೆ ಬಿಗಿ ಭದ್ರತೆ ನೀಡಲಾಗಿದ್ದು, ಮಲಾಲಾ ಪ್ರಧಾನಿ ಕಚೇರಿಗೆ ತೆರಳಿ ಪ್ರಧಾನಿ ಶಹೀದ್‌ ಖಾಖನ್‌ ಅಬ್ಟಾಸಿ ಮತ್ತು ಇತರ ಗಣ್ಯರನ್ನು ಭೇಟಿಯಾಗಿದ್ದಾರೆ. 2012ರಲ್ಲಿ ಮಲಾಲಾ ಮೇಲೆ ದಾಳಿ ನಡೆಸಲಾಗಿತ್ತು. ಜೀವಬೆದರಿಕೆ ಇರುವ ಕಾರಣ ಆಕೆ ತನ್ನ ಪೋಷಕರ ಜೊತೆ ಬ್ರಿಟನ್‌ನಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next