ನವದೆಹಲಿ : ಪಾಕಿಸ್ತಾನದ ಹೋರಾಟಗಾರ್ತಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸೂಫ್ ಮದುವೆಯಾಗಿದ್ದು, ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆ ಸಂಬ್ರಮದ ಫೋಟೋಗಳನ್ನು ಶೇರ್ ಮಾಡಿರುವ ಮಲಾಲಾ, ಇಂದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನವಾಗಿದೆ. ಅಸ್ಸರ್ ಮತ್ತು ನಾನು ನಮ್ಮ ಜೀವನದ ಪಾಲುದಾರರಾಗಿದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ಬರ್ಮಿಂಗ್ ಹ್ಯಾಮ್ ನಲ್ಲಿರುವ ಮನೆಯಲ್ಲಿ ನಿಕ್ಕಾ ಸಮಾರಂಭವನ್ನು ಆಚರಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳನ್ನು ನಮಗೆ ಕಳುಹಿಸಿ. ಮುಂದಿನ ಪ್ರಯಾಣಕ್ಕಾಗಿ ನಾವು ಒಟ್ಟಿಗೆ ನಡೆಯಲು ಉತ್ಸುಕರಾಗಿದ್ದೇವೆ ಎಂದು ಬರೆದಿದ್ದಾರೆ.
ಈ ಹಿಂದೆ ಮಲಾಲಾ ಮದುವೆ ವಿಚಾರವಾಗಿ ಮಾತನಾಡಿದ್ದು ಪಾಕಿಸ್ತಾನ ಇಸ್ಲಾಂ ಸಮುದಾಯಲ್ಲಿ ಚರ್ಚೆಯಾಗಿದ್ದರು, ಅನೇಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆ ಜೀವನದ ಬಗ್ಗೆ ಹೇಳಿಕೊಳ್ಳೋದನ್ನ ನೋಡಿ ನನಗೆ ಆಶ್ಚರ್ಯವಾಗಿದೆ. ನೀವು ಒಬ್ಬರನ್ನ ನೀವು ನಂಬಬೇಕೋ ಬೇಡವೋ ಅನ್ನೋದರ ಬಗ್ಗೆ ನೀವು ಖಚಿತತೆ ಹೊಂದಲು ಹೇಗೆ ಸಾಧ್ಯ..? ಜನರು ಯಾಕೆ ಮದುವೆಯಾಗುತ್ತಾರೆ ಅನ್ನೋದೇ ನನಗೆ ಅರ್ಥವಾಗೋದಿಲ್ಲ.
ನಿಮ್ಮ ಜೀವನಕ್ಕೆ ಒಬ್ಬ ಸಂಗಾತಿ ಬೇಕು ಎನಿಸಿದ್ರೆ ನೀವು ಮದುವೆ ನೋಂದಣಿ ಪತ್ರಕ್ಕೆ ಏಕೆ ಸಹಿ ಹಾಕಬೇಕು..? ಸುಮ್ಮನೇ ನೀವು ಪಾರ್ಟ್ನರ್ಗಳಂತೆ ಇರಬಹುದಲ್ಲವೇ..? ಎಂದು ಪ್ರಶ್ನಿಸಿದ್ದಾರೆ.