Advertisement

ಮಲಾಡ್‌ ಇರಾನಿ ಕಾಲನಿ: ಶನಿಜಯಂತಿ ಆಚರಣೆ

04:56 PM Jun 06, 2019 | Team Udayavani |

ಮುಂಬಯಿ: ಮಲಾಡ್‌ ಪೂರ್ವದ ಇರಾನಿ ಕಾಲನಿಯ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ವತಿಯಿಂದ ಶ್ರೀ ಶನಿಜಯಂತಿ ಆಚರಣೆಯು ಜೂ. 3 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ವೇದಮೂರ್ತಿ ಕೆ. ಗೋವಿಂದ ಮೂರ್ತಿ ಭಟ್‌ ಇವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ ವಾಗಿ ಬೆಳಗ್ಗೆ 7ರಿಂದ ಗಣಹೋಮ, ಪಂಚಾಮೃತ ಅಭಿಷೇಕ, ನವಕ ಕಲಶ ಅಭಿಷೇಕ ಜರಗಿತು. ಬಳಿಕ ಸಾಮೂಹಿಕ ಶನಿಶಾಂತಿ ಹೋಮ ನೆರವೇರಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಮಸ್ತ ಭಕ್ತಾದಿಗಳು ಹೋಮಕುಂಡಕ್ಕೆ ತಿಲ, ಎಳ್ಳೆಣ್ಣೆ ಸುರಿಯುವ ಮೂಲಕ ಶನಿಜಯಂತಿಯನ್ನು ಆಚರಿಸಿದರು.

ಮಧ್ಯಾಹ್ನ 12ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ 4ರಿಂದ ಕಲಶ ಮುಹೂರ್ತ, ಶನಿ ಗ್ರಂಥ ಪಾರಾಯಣ, ಸಮಿತಿಯ ಸದಸ್ಯರಿಂದ ಭಜನೆ ಹಾಗೂ ರಾತ್ರಿ 8.30ರಿಂದ ಮಂಗಳಾರತಿ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು. ಸುಮಾರು 63 ವರ್ಷಗಳ ಹಿಂದೆ ಸಮಾನ ಮನಸ್ಕ ಆಧ್ಯಾತ್ಮಿಕ ಚಿಂತಕರಿಂದ ಭಜನೆಯ ಮೂಲಕ ಪ್ರಾರಂಭಗೊಂಡ ಮಲಾಡ್‌ ಪೂರ್ವದ ಇರಾನಿ ಕಾಲನಿಯಲ್ಲಿ ಸ್ಥಾಪನೆಗೊಂಡ ಪೂಜಾ ಸಮಿತಿಯು ಇದೀಗ ನಗರದಲ್ಲಿ ಆರಾಧನಾ ಮಂದಿರವಾಗಿ ಪ್ರಸಿದ್ಧಿ ಪಡೆದಿದೆ.

1963ರಲ್ಲಿ ಪೂಜಾ ಕೊಠಡಿಯನ್ನು ಖರೀದಿಸಿ ಅಲ್ಲಿಂದ ನಿರಂತರವಾಗಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸುತ್ತಾ ಬಂದಿದ್ದು, ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ 1965 ರಲ್ಲಿ ಶ್ರೀ ಶನಿದೇವರ ರಜತ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

2005ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿದ ಸಮಿತಿಯು ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನೆರವೇರಿ
ಸಿತು. ಜತೆಗೆ ಸಾಮಾಜಿಕ, ವೈದ್ಯಕೀಯ, ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಸಹಕರಿಸುತ್ತಿದೆ. ವಾರ್ಷಿಕ ಹಬ್ಬ ಹರಿದಿನಗಳನ್ನು ಆಚರಿಸುವುದರ ಜತೆಗೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದು ಈ ಸಮಿತಿಯ ವಾಡಿಕೆ. ಸಾಂಸ್ಕೃತಿಕವಾಗಿ ಕರಾವಳಿಯ ಸಮಗ್ರ ಕಲೆ ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡುತ್ತಾ, ಸಮಾಜಪರ ಕಾರ್ಯಕ್ರಮಗಳೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

Advertisement

ಭವಿಷ್ಯದಲ್ಲಿ ಜೀರ್ಣೋದ್ಧಾರದ ಆಶಯವನ್ನು ಸಮಿತಿಯು ಹೊಂದಿದ್ದು, ಇಂದಿನ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ಸಮಿತಿಯ ಅಧ್ಯಕ್ಷ ಬಿ. ದಿವಾಕರ ಡಿ. ಶೆಟ್ಟಿ, ಕಾರ್ಯದರ್ಶಿ
ಗಳಾದ ಎಚ್‌. ಎಸ್‌. ಕರ್ಕೇರ, ಎಂ. ಎನ್‌. ಸುವರ್ಣ, ಗೌರವ ಕೋಶಾಧಿಕಾರಿಗಳಾದ ಎಂ. ಜಿ. ಬಂಗೇರ, ಕೆ. ಎನ್‌. ಸಾಲ್ಯಾನ್‌, ಸಮಿತಿಯ ಸದಸ್ಯ
ರಾದ ಎಸ್‌. ಪಿ. ದೇವಾಡಿಗ, ಎಸ್‌. ಯು. ಬಂಗೇರ, ಕೆ. ಎನ್‌. ಸಾಲ್ಯಾನ್‌, ಎಸ್‌. ಎ. ಸಾಲ್ಯಾನ್‌, ಎಂ. ಎನ್‌.
ಕೋಟ್ಯಾನ್‌, ಪಿ. ಆರ್‌. ಸಾಲ್ಯಾನ್‌, ಬಿ. ಎಚ್‌. ಹೆಜ್ಮಾಡಿ, ಜಯಾ ಎಂ. ಬಂಗೇರ, ಅತುಲ್‌ ಓಜಾ, ಅರ್ಚಕರಾದ ಸುಧಾಕರ ಎಂ. ಶೆಟ್ಟಿ, ಭುವಾಜಿ ಯು. ಎಸ್‌. ಬಂಗೇರ ಅವರು ಸಹಕರಿಸಿದರು.

ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next