Advertisement
ಮುತ್ತಪ್ಪನ್ ಆ್ಯಂಡ್ ಮಲಬಾರ್ ಕ್ಯೂಸಿನ್ ಕ್ರೂಸ್, ಕಾಂಡ್ಲ ಕ್ರೂಸ್. ದೈವ(ತೈಯ್ಯಂ) ಕಲೆಗಳ ಕ್ರೂಸ್ ಎಂಬೀ ಯೋಜನೆಗಳಿಗಾಗಿ 84 ಕೋಟಿ ರೂ. ಮಂಜೂರು ಮಾಡಲಾಗುವುದೆಂದು ಸಂಸದೆ ಪಿ.ಕೆ.ಶ್ರೀಮತಿ ಟೀಚರ್ ಅವರಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.
ಈ ಮಹತ್ವದ ಯೋಜನೆಗೆ ಅನುಮತಿ ನೀಡಬೇಕೆಂದು ಸಂಸದೆ ಪಿ. ಕೆ. ಶ್ರೀಮತಿ ಟೀಚರ್ ಹಲವು ಬಾರಿ ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದರಂತೆ ಕೇಂದ್ರ ಸರಕಾರ ನೇಮಿಸಿದ ಸಲಹಾ ಸಮಿತಿ ಪದಾಧಿಕಾರಿಗಳು ಬೋಟ್ ಯಾತ್ರೆ ನಡೆಸಿ ವರದಿ ಪರಿಗಣಿಸಿ ಪ್ರಥಮ ಹಂತದ ಮೊತ್ತವನ್ನು ಮಂಜೂರು ಮಾಡಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ತಜ್ಞ ಸಮಿತಿ ಶಿಫಾರಸು ಮಾಡಿತ್ತು.
Related Articles
– ವಳಪಟ್ಟಣ ಹೊಳೆಯಲ್ಲಿ ವಳಪಟ್ಟಣದಿಂದ ಆರಂಭಿಸಿ ಪರಶ್ಶಿನಿಕಡವಿನ ಮೂಲಕ ಮಲಪ್ಪುಟ್ಟಂ ಮುನಂಬುಕಡವು ತನಕ ಮುತ್ತಪ್ಪನ್ ಕ್ರೂಸ್.
– ಭಗತ್ ಸಿಂಗ್, ಸಿ.ಎಚ್.ಮುಹಮ್ಮದ್ ಕೋಯ, ಎ.ಕೆ.ಜಿ. ಹೆಸರಿನಲ್ಲಿರುವ ಜಟ್ಟಿಗಳಿಗೆ ತಲುಪುವ ಪ್ರವಾಸಿಗಳಿಗೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಸೌಲಭ್ಯಗಳ ಸ್ಥಾಪನೆ.
– ಪಾಂಬುರುತಿಯನ್ನು ಪ್ರವಾಸೋದ್ಯಮ ಗ್ರಾಮವಾಗಿ ಅಭಿವೃದ್ಧಿ.
– ಪ್ರಾದೇಶಿಕ ವೈವಿಧ್ಯತೆಗಳ ಊಟೋಪಚಾರ ಕೇಂದ್ರಗಳ ಸ್ಥಾಪನೆ.
– 50, 15, 10 ಎಂಬಂತೆ ಸೀಟುಗಳಿರುವ ಪ್ರಯಾಣ ಸೌಕರ್ಯ.
– ವಳಪಟ್ಟಣನಿಂದ ಅಳಿಕಲ್ ಫೆರಿ, ಮಾಟ್ಟೂಲ್, ತೆಕ್ಕುಂಬಾಟ್, ಪಳಯಂಗಾಡಿ, ವಡಿಕಲ್‌ಗಳಲ್ಲಿ ದೈವ ಕ್ರೂಸ್- ಇದಕ್ಕಾಗಿ 41.48 ಕೋ. ರೂ. ಮಂಜೂರು ಮಾಡಲಾಗಿದೆ.
– ತೆಕ್ಕುಂಬಾಟ್ ದ್ವೀಪವನ್ನು ಪ್ರವಾಸೋದ್ಯಮ ಗ್ರಾಮವಾಗಿ ಅಭಿವೃದ್ಧಿ.
– ವಿದೇಶಿ ಪ್ರವಾಸಿಗರಿಗೆ ಸಹಿತ ದೈವಗಳ ವೈವಿಧ್ಯತೆ ವೀಕ್ಷಿಸಲು ಮಡಕ್ಕರದಲ್ಲಿ ಓಪನ್ ಏರ್ ಥಿಯೇಟರ್, ವಾಡಿಕಲ್‌ನಲ್ಲಿ ಖಾಯಂ ರಂಗಭೂಮಿ ವೇದಿಕೆ ನಿರ್ಮಾಣ, ಹೌಸ್ ಬೋಟು ಸೌಕರ್ಯ – ಇದಕ್ಕಾಗಿ 22.23 ಕೋಟಿ ರೂ. ಮಂಜೂರು ಮಾಡಲಾಗಿದೆ.
– ಪಳಯಂಗಾಡಿಯಿಂದ ಕುಪ್ಪತ್‌ಗೆ ಕಾಂಡ್ಲಾ ಕ್ರೂಸ್.
– ಮುತ್ತುಕುಡದಲ್ಲಿ ದೋಣಿ ಸ್ಪರ್ಧೆ ಪವಿಲಿಯನ್, ಹೊಳೆಯಲ್ಲಿ ಸಂಚಾರಿ ಥಿಯೇಟರ್.
– ಕಾಂಡ್ಲಾ ಸಂಪತ್ತು ಬಗ್ಗೆ ಅಧ್ಯಯನ ಮಾಡಲು ಪ್ರತ್ಯೇಕ ವ್ಯವಸ್ಥೆ – ಇದಕ್ಕಾಗಿ 18.84 ಕೋಟಿ ರೂ. ಮಂಜೂರು.
Advertisement