ಮುಂಬಯಿ: ಬಹುಕೋಟಿ ನಿರ್ಮಾಣದ ʼರಾಮಾಯಣʼ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ. ನಿತೇಶ್ ತಿವಾರಿ ಅವರ ʼರಾಮಾಯಣʼಲೋಕದಲ್ಲಿ ಬಹು ತಾರಾಗಣ ಇರಲಿದೆ.
ಸಿನಿಮಾ ಸಟ್ಟೇರುವ ಮುನ್ನವೇ ಸದ್ದು ಮಾಡುತ್ತಿದೆ. ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ನಮಿತ್ ಮಲ್ಹೋತ್ರಾ ಹಾಗೂ ಮಧು ಮಂಟೇನಾ ಅವರೊಂದಿಗೆ “ಪಿಂಕ್ ವಿಲ್ಲಾ” ನಡೆಸಿದ ಮಾತುಕತೆಯಲ್ಲಿ ಸಿನಿಮಾದ ಬಗ್ಗೆ ಎಕ್ಸ್ಕ್ಲೂಸಿವ್ ಮಾಹಿತಿ ಹೊರಬಿದ್ದಿದೆ.
“ಸಿನಿಮಾ ಈ ವರ್ಷದ ಕೊನೆಯಲ್ಲಿ ಸಟ್ಟೇರಲಿದೆ. ಇದರೊಂದಿಗೆ ಸಿನಿಮಾದ ಪೂರ್ವ ಸಿದ್ದತೆಯೂ ಜೋರಾಗಿ ನಡೆಯುತ್ತಿದೆ” ಎಂದಿದ್ದಾರೆ.
ಇದನ್ನೂ ಓದಿ: ಒಂದೇ ಚಿತ್ರದಲ್ಲಿ ಕರಾವಳಿಯ ‘RRR’: ರಕ್ಷಿತ್ ಶೆಟ್ಟಿಯದೇ ಕಥೆ: Raj B Shetty ಹೇಳಿದ್ದೇನು?
“ರಾಮಾಯಣ ದ ಪ್ರಿ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಸಿನಿಮಾದಲ್ಲಿನ ಸೆಟ್ ವಿನ್ಯಾಸಗಳು, ವಿಎಫ್ ಎಕ್ಸ್, ನಿರೂಪಣೆ ಇವೆಲ್ಲದರ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗುತ್ತಿದೆ. ಸಿನಿಮಾಕ್ಕಾಗಿ ಮುಖ್ಯವಾದ ಟೆಸ್ಟ್ ಶೂಟ್ ವೊಂದು ನಡೆಯಲಿದೆ. ಇದಕ್ಕಾಗಿ ಈಗಾಗಲೇ ಫಿಲ್ಮ್ ಸಿಟಿಯಲ್ಲಿ ಒಂದು ಸಣ್ಣ ಸೆಟ್ ನ್ನು ಹಾಕುತ್ತಿದ್ದಾರೆ. ಶೂಟ್ ಸರಿಯಾಗಿ ಆಗಲು ಸೂಕ್ತವಾಗಿ ಎಲ್ಲಾ ರೀತಿಯ ತಯಾರಿಯನ್ನು ಮಾಡಲಾಗುತ್ತಿದೆ. ಟೆಸ್ಟ್ ಶೂಟ್ ಜುಲೈ ಅಂತ್ಯಕ್ಕೆ ಆಗಲಿದೆ. ತಾತ್ಕಾಲಿಕವಾಗಿ ಜುಲೈ 28 ರಂದು ಈ ಶೂಟ್ ನಡೆಯಲಿದೆ” ಎಂದು ಹೇಳಿರುವುದಾಗಿ “ಪಿಂಕ್ ವಿಲ್ಲಾ” ವರದಿ ಮಾಡಿದೆ.
ಆದರೆ ಈ ಟೆಸ್ಟ್ ಶೂಟ್ ನಲ್ಲಿ ಯಾವ ನಟರು ಭಾಗವಹಿಸಲಿದ್ದಾರೆ ಎನ್ನುವುದರ ಬಗ್ಗೆ ಇನ್ನು ಮಾಹಿತಿ ಹೊರಬಿದ್ದಿಲ್ಲ ಎಂದು ವರದಿ ತಿಳಿಸಿದೆ.
ರಣಬೀರ್ ಕಪೂರ್, ಆಲಿಯಾ ಭಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಯಶ್ ರಾವಣನ ಪಾತ್ರವನ್ನು ಮಾಡಲಿದ್ದಾರೆ ಎಂದು ಮೊದಲು ಹೇಳಲಾಗಿತ್ತು ಆದರೆ ಅದು ಇನ್ನು ಅಧಿಕೃತವಾಗಿಲ್ಲ.