Advertisement

ಸೇವಾ ಸಿಂಧು ಆ್ಯಪ್‌ ಸದುಪಯೋಗಿಸಿಕೊಳ್ಳಿ

06:49 AM Jun 24, 2020 | Lakshmi GovindaRaj |

ತಿಪಟೂರು: ಕೋವಿಡ್‌-19ನಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ನೊಂದ ಜನರಿಗೆ ಸಹಾಯ ಮಾಡಲು ಹಲವು ಕಾರ್ಯ ಕ್ರಮಗಳನ್ನು ರೂಪಿಸಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ  ಸಂಕಷ್ಟದಲ್ಲಿರುವ ಎಲ್ಲ ನೇಕಾರ ರಿಗೂ 2 ಸಾವಿರ ಸಹಾಯಧನ ಘೋಷಣೆ ಮಾಡಿ ದ್ದಾರೆ ಎಂದು ಶಾಸಕ ಬಿ.ಸಿ.  ನಾಗೇಶ್‌ ಹೇಳಿದರು.

Advertisement

ನಗರದ ಹಳೇಪಾಳ್ಯ ಶ್ರೀ ರಂಗನಾಥ ಕಲ್ಯಾಣ ಮಂಟಪದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ  ಯಿಂದ ಆಯೋಜಿಸಿದ್ದ ಸೇವಾಸಿಂಧು ಆ್ಯಪ್‌ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹಣ ಪಡೆದುಕೊಳ್ಳಲು ನೇಕಾರರು ಸೇವಾಸಿಂಧು ಆ್ಯಪ್‌ ಮೂಲಕ ತಮ್ಮ ವಿವರಗಳನ್ನು ನೀಡಿ ಯೋಜನೆಯ ಉಪಯೋಗಪಡೆಯಬೇಕು  ಎಂದರು. ಮನೆಯ ಆರ್‌ಆರ್‌ ನಂಬರ್‌ ನಮೂದಿಸುವ ಜತೆಗೆ ನೇಯ್ಗೆ ಕಾರ್ಮಿಕರಾಗಿ ಕೆಲಸ ಮಾಡುವವರು ಮಾಲೀಕರಿಂದ ಅಫಿಡವಿಟ್‌ ಸಲ್ಲಿಸಬೇಕಾಗಿದೆ.

ಜಗತ್ತಿಗೆ ಕೊರೊನಾ ಮಹಾಮಾರಿ ಹಬ್ಬಲು ಕಾರಣ ವಾದ ದೇಶವೇ ಭಾರತದ ಯೋಧರನ್ನು  ಬಲಿ ಪಡೆದಿದ್ದು, ಪ್ರತಿಯೊಬ್ಬ ಭಾರತೀಯರು ಸ್ವದೇಶಿ ಉತ್ವನ್ನಗಳನ್ನ ಹೆಚ್ಚು ಹೆಚ್ಚು ಬಳಸಬೇಕು. ಸ್ವದೇಶಿ ಉತ್ವನ್ನಗಳ ಬಳಕೆಯಿಂದ ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯವಾಗುತ್ತದೆ. ಚೀನಾ ವಸ್ತುಗಳನ್ನ ಸ್ವಯಂ  ಪ್ರೇರಣೆಯಿಂದ ಬಹಿಷ್ಕರಿಸುವ ಮೂಲಕ ನಮ್ಮ ಯೋಧರ ಬಲಿದಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ತಿಳಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ಭಾರತಿ, ಸಹಾಯಕ ಅಧಿಕಾರಿ ಸುರೇಶ್‌, ನಗರಸಭೆ  ಸದಸ್ಯರಾದ ಮೋಹನ್‌ರಾಜ್‌, ಮಾವಿನ ಕೆರೆ ಜಯರಾಮ್‌, ಮಲ್ಲೇಶ್‌ನಾಯ್ಕ, ಮಾಜಿ ಸದಸ್ಯ ಜಿ.ಆರ್‌. ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next