Advertisement
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕುರಿತು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳು ಸಂಘಟಿತರಾಗಿ ಮೊದಲು ಗ್ರಾಪಂ ಮೂಲಕ ಉದ್ಯೋಗ ಚೀಟಿ ಪಡೆದುಕೊಂಡು, ನೋಂದಣಿ ಮಾಡಿಸಬೇಕು. 256 ಮಾದರಿಯ ಕಾಮಗಾರಿ ಮಾಡಿ, ಆರ್ಥಿಕವಾಗಿ ಸದೃಢರಾಗುವ ಜೊತೆಗೆ ಗ್ರಾಮದಲ್ಲಿ ಉತ್ತಮ ವಾತಾವರಣಸೃಷ್ಟಿಸಲು ಅವಕಾಶಗಳಿವೆ ಎಂದು ವಿವರಿಸಿದರು.
ಅಂಗನವಾಡಿ ಕೇಂದ್ರ, ಮಳೆ ನೀರು ಸಂರಕ್ಷಣೆ ಮಾಡಲು ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ, ಶಾಲಾ ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸಲು ಕಾಂಪೌಂಡ್ ನಿರ್ಮಾಣ, ಅಂರ್ತಜಲ ಮಟ್ಟವನ್ನು ವೃದ್ಧಿಗೊಳಿಸಲು ಗೋಕುಂಟೆ, ಕಲ್ಯಾಣಿ, ಕೆರೆ ಅಭಿವೃದ್ಧಿಗೊಳಿಸುವ ಜೊತೆಗೆ ಬಹುಕಮಾನ್ ಚೆಕ್‌ಡ್ಯಾಂ,ಕಾಲುವೆ ನಿರ್ಮಿಸಲಾಗಿದೆ ಎಂದು ತಿಳಿಸಿದರು. ತಾಂತ್ರಿಕ ತೊಂದರೆ ಇದ್ರೆಕರೆ ಮಾಡಿ:ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗಾಗಿ ಅನೇಕ ಯೋಜನೆ ಜಾರಿಗೊಳಿಸಿದೆ. ನರೇಗಾ ಮೂಲಕ ಕೆಲಸವನ್ನು ಮಾಡಲು ಗ್ರಾಪಂನಿಂದ ಏನಾದರೂ ತೊಂದರೆಯಾಗುತ್ತಿದ್ದರೆ ಅಥವಾ ತಾಂತ್ರಿಕ ದೋಷಗಳ ನೆಪದಲ್ಲಿ ಅನಗತ್ಯವಾಗಿ ಸಹಕರಿಸದಿದ್ದಲ್ಲಿ ನೇರವಾಗಿ ತಮ್ಮ ಮೊಬೈಲ್ ಸಂಖ್ಯೆಗಳಿಗೆಕರೆ ಮಾಡಿ ಹೇಳಿದರು.
Related Articles
Advertisement
ಎಲ್ಲಾ ರೀತಿಯ ನೆರವು: ನಾವು ತಕ್ಷಣ ತಮ್ಮ ದೂರುಗಳಿಗೆ ಸ್ಪಂದಿಸಿ ಸರ್ಕಾರದ ಯೋಜನೆಯ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವ ಜೊತೆಗೆ ಇಲಾಖೆಯ ಅಧಿಕಾರಿಗಳಿಂದ ಎಲ್ಲಾ ರೀತಿಯ ಸಹಕಾರ ಮತ್ತು ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರು.
ಅನೇಕ ಅವಕಾಶಗಳು: ಉದ್ಯೋಗಖಾತ್ರಿ ಯೋಜನೆ ಮೂಲಕ ಅನೇಕ ಕಾಮಗಾರಿ ನಡೆಸಲು ಮಹಿಳಾ ಸ್ವಸಹಾಯ ಸಂಘಗಳಿಗೆ ಅವಕಾಶಗಳಿವೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೃಷಿ ಚಟುವಟಿಕೆ ಅಥವಾ ವೈಯಕ್ತಿಕ ಕಾಮಗಾರಿ ನಡೆಸಲು ಸಹ ಅವಕಾಶಗಳಿದೆ. ವಿಶೇಷವಾಗಿ ಅಪ್ಪಳ, ಗೃಹ ಬಳಕೆಗಳ ವಸ್ತುಗಳ ತಯಾರಿಕೆ, ಇನ್ನಿತರೆ ಆದಾಯೋತ್ಪನ್ನ ಚಟುವಟಿಕೆ ನಡೆಸಲು ಜಿಪಂ, ತಾಪಂ ಹಾಗೂಗ್ರಾಪನಿಂದ ಎಲ್ಲಾ ರೀತಿಯ ಮಾರ್ಗದರ್ಶನ ನೀಡುತ್ತೇವೆ ಎಂದು ವಿವರಿಸಿದರು. ಘನ ತ್ಯಾಜ್ಯ ವಿಲೇವಾರಿಗೆ ಅವಕಾಶ: ರಾಜ್ಯದ ನಾನಾ ಭಾಗಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳು, ಗ್ರಾಮ ನೈರ್ಮಲ್ಯ ಕಾಪಾಡುವ ಕೆಲಸ ಮಾಡಿ, ಗ್ರಾಮವನ್ನು ಸ್ವತ್ಛ ಹಾಗೂ ಸುಂದರವಾಗಿಡುವ ಜೊತೆಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ.ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆ ಮಾಡಲು ಸಹ ಅವಕಾಶಗಳಿವೆ ಎಂದು ವಿವರಿಸಿದರು. ಶುಲ್ಕ ಪಾವತಿಸಿ: ಪ್ರತಿಯೊಂದು ಮನೆಗೆ ತಲಾ 30 ರೂ. ತೆರಿಗೆವಸೂಲಿ ಮಾಡಲುಅವಕಾಶ ಕಲ್ಪಿಸಲಾಗಿದೆ. ನಾಗರಿಕರು ಸಹ ತ್ಯಾಜ್ಯ ವಿಲೇವಾರಿ ಮಾಡಲು ಸಹಕರಿಸಿ ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಭರಿಸಲು ಗ್ರಾಮೀಣ ಪ್ರದೇಶವನ್ನು ಸ್ವತ್ಛವಾಗಿಡಲು ಸಹಕರಿಸಬೇಕು ಎಂದು ವಿವರಿಸಿದರು. ನರೇಗಾ ಯೋಜನೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಎನ್‌ಆರ್‌ಎಲ್‌ಎಂ ಯೋಜನೆ ಸಲಹೆಗಾರ ರಾಮಸ್ವಾಮಿ, ಡಿಎಂಐಎಸ್ ಮುಖಂಡ ಮಧು, ಐ.ಇ.ಸಿ ಸಂಯೋಜಕ ಪ್ರಶಾಂತ್, ಎನ್‌ಆರ್‌ಎಲ್ ಎಂ ಜಿಲ್ಲಾ ಸಂಯೋಜಕ ಬಿರಾದರ್, ತಾಪಂನ ಕನಕಮ್ಮ, ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಸದಸ್ಯರು ಉಪಸ್ಥಿತರಿದ್ದರು ಸಂಘದ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೌಲಭ್ಯಗಳ ಮಾಹಿತಿ: ಚಂದ್ರಕಾಂತ್
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಜಾರಿಗೊಳಿಸುವಯೋಜನೆಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜೊತೆಗೆ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ನರೇಗಾ ಮತ್ತು ಸ್ವತ್ಛಭಾರತ ಮಿಷನ್, ಇನ್ನಿತರೆ ಯೋಜನೆಗಳ ಸೌಲಭ್ಯಗಳ
ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ತಾಪಂ ಇಒ ಚಂದ್ರಕಾಂತ್ ಹೇಳಿದರು. ತಾಲೂಕು ಕಚೇರಿಯ ಸಭಾಂಗಣದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕುರಿತು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಗ್ರಾಪಂಗಳಲ್ಲಿ ಉದ್ಯೋಗವನ್ನು ಬೇಕೆಂದು ಬರುವರಿಗೆ ಕಡ್ಡಾಯವಾಗಿ ಉದ್ಯೋಗ ಚೀಟಿಯನ್ನು ನೀಡಲು ಸೂಚನೆ ನೀಡಲಾಗಿದೆ. ಮಹಿಳೆಯರು ಕೌಶಲ್ಯವನ್ನು ಬೆಳೆಸಿಕೊಂಡು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸದೃಢರಾಗಬೇಕೆಂದು ಸಲಹೆ ನೀಡಿದರು. ಸಭೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಗ್ರಾಪಂನಲ್ಲಿ ಉದ್ಯೋಗ ಚೀಟಿ ಮತ್ತು ಕಾಮಗಾರಿ ನಡೆಸಲು ಆಗುತ್ತಿರುವ ತೊಂದರೆಯನ್ನು ಜಿಪಂ ಉಪ ಕಾರ್ಯದರ್ಶಿ ಮತ್ತು ತಾಪಂ ಇಒ ಗಮನಕ್ಕೆ ತಂದು ಪರಹಾರ ಕಲ್ಪಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಪ್ರತಿಯೊಂದು ಹಂತದಲ್ಲಿ ಅಗತ್ಯ ಸಹಕಾರ ಮತ್ತು ನೆರವು ನೀಡುವುದಾಗಿ ಭರವಸೆ ನೀಡಿ, ತಮ್ಮ ಮೊಬೈಲ್ ಸಂಖ್ಯೆಗಳನ್ನು ನೀಡಿ ಕರೆ ಮಾಡಿ ಎಂದರು