ಕೆರೂರ: ಪಟ್ಟಣ ಪಂಚಾಯತ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳಲ್ಲಿ ಪೌರ ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳಿದ್ದು, ಅವುಗಳಅರಿವಿನ ಕೊರತೆಯಿಂದ ಪೌರಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.
ಕೆರೂರ ಪ.ಪಂ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿವಿಧ ಯೋಜನೆಗಳ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಾಬು ಜಗಜೀವನರಾಮ ಯೋಜನೆ, ವಾಲ್ಮೀಕಿ ನಿಗಮವುಸೇರಿದಂತೆ ವಿವಿಧ ನಿಗಮಗಳಿಂದ ಅಭಿವೃದ್ಧಿ ಪರಯೋಜನೆಗಳ ಪ್ರಯೋಜನ ಪಡೆಯುವ ಕುರಿತುವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ, ಪೌರ ಕಾರ್ಮಿಕರಮಕ್ಕಳಿಗೆ ಶಿಷ್ಯ ವೇತನ, ಉಚಿತ ವಸತಿ ಶಾಲೆ, ಸ್ವಯಂ ಉದ್ಯೋಗ ಹೊಂದಲು ಸಾಲ ಯೋಜನೆ ಸೇರಿದಂತೆ ಅನೇಕ ಯೋಜನೆಗಳಿವೆ.ಪೌರ ಕಾರ್ಮಿಕರು ಪೂರಕ ಮಾಹಿತಿ ಪಡೆದುಅವುಗಳ ಸದ್ಬಳಕೆಯ ಜತೆಗೆ ಅಭಿವೃದ್ಧಿ ಪಥದತ್ತ ಮುನ್ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ.ಪಂ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಮಾತನಾಡಿ, ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ. ಯೋಜನೆಗಳ ಪರಿಚಯ, ತಿಳಿವಳಿಕೆ ಇಲ್ಲದಕಾರಣ ಸೌಲಭ್ಯ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದರು.
ಆರೋಗ್ಯ ನಿರೀಕ್ಷಕ ಶಿವಾನಂದ ಶಾವರಿ, ಅನಿಲಕುಮಾರ ಕಪಾಟೆ, ಗೀತಾ ಬೆಳಗಲಿ, ಬಿ.ಸಿ.ಕಟ್ಟಿಮನಿ, ಎ.ಎಸ್.ರಂಗನ ಗೌಡ, ಫಕ್ರುದ್ದಿನ್ ಹುಲ್ಲಿಕೇರಿ, ರಾಚಣ್ಣ ತೋಟಗೇರ ಭಾಗವಹಿಸಿದ್ದರು. ವಾರ್ಡನ್ ಶ್ರೀನಿವಾಸ ಚಂದುರಕರ ಸ್ವಾಗತಿಸಿದರು. ನಾರಾಯಣ ನಾಯಕ ನಿರೂಪಿಸಿದರು. ವಾರ್ಡನ್ ಎಸ್.ಎ. ಹದ್ಲಿ ವಂದಿಸಿದರು.