Advertisement
ಸಮಾವೇಶವನ್ನುದ್ದೇಶಿಸಿ ಮಾತನಾಡಿ, ”ಇದು ಸಂಗ್ರಾಮದ ವೇದಿಕೆ. ಕಾಂಗ್ರೆಸ್ ಕುಟುಂಬದ ರಾಜಕುಮಾರರು ಹೊಸ ಅವತಾರ ತಾಳಿ ಬರುತ್ತಿದ್ದಾರೆ. ಭಾರತ ಜೋಡಿಸಲು ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ದೇಶ ಇಬ್ಬಾಗ ಮಾಡಿದ್ದು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕರ್ನಾಟಕವನ್ನೇಕೆ ನಿರ್ಲಕ್ಷ್ಯ ಮಾಡಿದ್ದರು? . ಮೋದಿ ಸರ್ಕಾರ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯೋಜನಾ ಆಯೋಗದ ಮೂಲಕ 5000 ಕೋಟಿ ರೂ. ನೀಡಲಾಗಿದೆ. ಹೈ ವೇ ನಿರ್ಮಾಣ ಮಾಡಲು ಕರ್ನಾಟಕಕ್ಕ. 9000 ಕೋಟಿ ಹಣ ನೀಡಿದೆ. ಭಾರತ ಮಾಲಾ ಯೋಜನೆ ಅಡಿಯಲ್ಲಿ 55 ಸಾವಿರ ಕೋಟಿ ರೂ. ಯೋಜನೆ ಜಾರಿಗೆ ಬರಲಿದೆ” ಎಂದರು.
Related Articles
Advertisement
”ಪ್ರಧಾನಿ ಕೋವಿಡ್ ಸಂದರ್ಭದಲ್ಲಿ ನಮ್ಮದೇ ಲಸಿಕೆ ಉತ್ಪಾದನೆ ಮಾಡಿ ಎಲ್ಲರಿಗೂ ನೀಡಲಾಗುವುದು ಎಂದು ಎಲ್ಲರಿಗೂ ನೀಡಿದ್ದೇವೆ.ಭಾರತ ಜೋಡೊ ಯಾತ್ರೆಯಲ್ಲಿ ಯಾರ ಜತೆ ಹೆಜ್ಜೆ ಹಾಕುತ್ತಿದ್ದೀರಿ. ಭಾರತ ತುಕ್ಡೆ ತಿಕ್ಡೆ ಹೋಂಗೆ ಅಂತ ಹೇಳಿದವರನ್ನು ಜೊತೆಗೆ ಕರೆದುಕೊಂಡು ಹೊಗುತ್ತಿದ್ದೀರಿ.ರಾಹುಲ್ ಗಾಂಧಿ ಈ ದೇಶದ ರಾಜ್ಯಗಳ ಸ್ಬರಾಜ್ಯಕ್ಕಾಗಿ ಹೋರಾಡುವುದಾಗಿ ಹೇಳಿದ್ದೀರಿ. ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೆವೆ. ಈ ರೀತಿ ದೇಶ ವಿರೋಧಿ ಹೇಳಿಕೆಯನ್ನು ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರು ಹೇಗೆ ಸ್ವೀಕರಿಸುತ್ತೀರಿ ಎಂದು ಕೇಳುತ್ತೇನೆ.ರಾಹುಲ್ ಗಾಂಧಿ ಈ ದೇಶದಲ್ಲಿ ದೇಶಪ್ರೇಮಿಗಳು ಇರುವವರೆಗು ಈ ದೇಶ ಇಬ್ಭಾಗ ಅಗಲು ಬಿಡುವುದಿಲ್ಲ. ರಾಹುಲ್ ಗಾಂಧಿ ಈ ಭಾಗಕ್ಕೆ ಬಂದರೆ ಅದಕ್ಕೆ ಉತ್ತರ ನೀಡಬೇಕು” ಎಂದರು.