ಹೊಸದಿಲ್ಲಿ : ಕಳೆದ ಮೂರು ವರ್ಷಗಳಲ್ಲಿ ರಕ್ಷಣಾ ಸಚಿವಾಲಯವು 1.78 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ 111 ಮಿಲಿಟರಿ ಪ್ರಾಜೆಕ್ಟ್ ಗಳಿಗೆ ಅನುಮತಿ ನೀಡಿದೆ.
Advertisement
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ರಕ್ಷಣಾ ವಲಯದಲ್ಲಿ ಮಿಲಿಟರಿ ಉಪಕರಣಗಳನ್ನು ಉತ್ಪಾದಿಸುವ ಉದ್ದೇಶದೊಂದಿಗೆ 1.78 ಲಕ್ಷ ಕೋಟಿ ರೂ.ಗಳ ಮಿಲಿಟರಿ ಯೋಜನೆಗಳಿಗೆ ಸರಕಾರ ಅನುಮತಿ ನೀಡಿರುವುದು ಗಮನಾರ್ಹವಾಗಿದೆ.
ಕೇಂದ್ರ ರಕ್ಷಣಾ ಸಹಾಯಕ ಸಚಿವ ಸುಭಾಷ್ ಭಾಮ್‌ರೇ ಅವರು ಈ ವಿಷಯವನ್ನು ಲೋಕಸಭೆಗೆ ತಿಳಿಸಿದರು.