Advertisement
ನಗರದ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಸೋಮವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯದವರು ಕಲೆಗಾರರು, ಅವರ ಕಲಾಕೃತಿಗಳು ನೋಡುಗರ ಗಮನ ಸೆಳೆಯುತ್ತವೆ. ಬಹುಸೂಕ್ಷ್ಮ ಕುಸೂರಿ ಕಾರ್ಯದ ಜೊತೆಗೆ ಬಹುದೊಡ್ಡ ಕಲಾಕೃತಿ ರಚನೆ ಮಾಡುವಲ್ಲಿ ತೋರುವ ಇವರ ಶ್ರಮ ಶ್ಲಾಘನೀಯ ಎಂದರು.
ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಅವರು ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ರಹೀಂ ಖಾನ್ ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಹಾಜರಿದ್ದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡ ವಿಶ್ವಕರ್ಮ
ಭಾವಚಿತ್ರ ಮೆರವಣಿಗೆಯು ಶಿವಾಜಿ ವೃತ್ತ, ಭಗತ್ ಸಿಂಗ್ ವೃತ್ತ, ಅಂಬೇಡ್ಕರ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಂಗ ಮಂದಿರಕ್ಕೆ ಬಂದು ಮುಕ್ತಾಯಗೊಂಡಿತು. ಬೀದರ ಏರ್ ಪೋರ್ ಸ್ಕೂಲ್‌ನ ಪ್ರಾಚಾರ್ಯರಾದ ಇಂದುಮತಿ ಗುರುನಾಥ ಸುತಾರ ಉಪನ್ಯಾಸ ನೀಡಿದರು. ವಿಶ್ವಕರ್ಮ ಸಮುದಾಯದ ಶ್ರೀನಿವಾಸ ವಿಶ್ವಕರ್ಮ, ಶ್ಯಾಮರಾವ್ ವಿಶ್ವಕರ್ಮ, ಮೌನೇಶ ವಿಶ್ವಕರ್ಮ, ಬೀದರ ತಹಶೀಲ್ದಾರ್ ಕೀರ್ತಿ ಚಾಲಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಒಟಗೆ, ಶಿಕ್ಷಕ ಚನ್ನಬಸವ ಹೆಡೆ ಇದ್ದರು.